Header Ads

test

ಕೋಳಿಯನ್ನು ಜೈಲಿನಲ್ಲಿಟ್ಟ ಪೊಲೀಸರು... ಅದು ಮಾಡಿದ ಅಪರಾಧವಾದರೂ ಏನು ಗೊತ್ತಾ? ಕೋಪ ಬರುವುದುಗ್ಯಾರಂಟಿ ಆದರೆ ಪಾಪ..!

ಸಾಮಾನ್ಯವಾಗಿ ಕೋಳಿ ಅಂಕದ ಸಮಯದಲ್ಲಿ ಅಂಕದ ಕೋಳಿಗಳನ್ನು ಜೈಲಿನಲ್ಲಿಡುವುದು, ಪೊಲೀಸ್ ಠಾಣೆಗೆ ಕೋಳಿಗಳನ್ನು ತೆಗೆದುಕೊಂಡು ಹೋಗುವುದನ್ನು ಮಾಡುತ್ತಿರುತ್ತಾರೆ. ಕೋಳಿ ಅಂಕದ ನಿಷೇಧದ ಕಾರಣ ಕೋಳಿಗಳನ್ನು ಈ ರೀತಿ ಜೈಲಿನಲ್ಲಿಡುತ್ತಾರೆ. ಆದರೆ ಮಧ್ಯ ಪ್ರದೇಶದಲ್ಲಿನ ಶಿವಪುರದ ಒಂದು ಕೋಳಿಯನ್ನು ಅಪರಾಧದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆ ಕೋಳಿ ಅಂಕದ ಕೋಳಿಯಂತೂ ಅಲ್ಲ. ಹಾಗಂತ ಅದು ಯಾರನ್ನೂ ಹತ್ಯೆ ಮಾಡಿಲ್ಲ. ಆದರೆ ಆ ಕೋಳಿ ಬಾಲಕನೊಬ್ಬನಿಗೆ ಚುಚ್ಚಿದೆ. ಹಾಗಾಗಿಯೇ ಆ ಕೋಳಿಯನ್ನು ಪೊಲೀಸರು ಬಂಧಿಸಿದರು. ಬಂಧಿಸಿದ್ದಷ್ಟೇ ಅಲ್ಲದೆ ನ್ಯಾಯಾಲಯದ ಮುಂದೆಯೂ ಹಾಜರು ಪಡಿಸಲು ಸಿದ್ಧವಾಗಿದ್ದಾರೆ.


ಸಂಪೂರ್ಣ ವಿವರಗಳನ್ನು ನೋಡುವುದಾದರೆ.. ಮಧ್ಯ ಪ್ರದೇಶದಲ್ಲಿನ ಶಿವಪುರಿ ಮೂಲದ ಪಪ್ಪು, ಲಕ್ಷ್ಮಿ ದಂಪತಿಗಳಿಗೆ ಸಂತಾನವಿಲ್ಲ. ಹಾಗಾಗಿ ಅವರು ಐದು ವರ್ಷಗಳಿಂದ ಒಂದು ಕೋಳಿ ಹುಂಜವನ್ನು ಸಾಕಿಕೊಂಡಿದ್ದಾರೆ. ಐದು ವರ್ಷಗಳಿಂದ ಬಾದಾಮಿ, ಗೋಡಂಬಿ ಹಾಕುತ್ತಾ ಆ ಕೋಳಿಯನ್ನು ಚೆನ್ನಾಗಿ ಸಾಕಿ ಬೆಳೆಸಿಕೊಂಡಿದ್ದಾರೆ. ಆ ಕೋಳಿ ತುಂಬಾ ಮುದ್ದಾಗಿ ಬೆಳೆಯಿತು. ಸುತ್ತಮುತ್ತಲಿನವರಿಗೆ ತೊಂದರೆ ನೀಡುತ್ತಾ, ಇತರೆ ಕೋಳಿಗಳ ಮೇಲೆ ದಾಳಿ ಮಾಡುತ್ತಾ ಎಲ್ಲವೂ ನನ್ನಿಷ್ಟ ಎಂಬ ರೀತಿಯಲ್ಲಿ ಅದು ಪುಂಡ ಪೋಕರಿ ತರಹ ತಯಾರಾಗಿತ್ತು. ಒಟ್ಟಾರೆ ಒಂದು ಅಂಕದ ಕೋಳಿ ರೀತಿಯಲ್ಲಿ ತಯಾರಾಗಿ, ಕೋಳಿ ಅಂಕ ಇಲ್ಲದ ಕಾರಣ ರಸ್ತೆ ಮೇಲೆ ಓಡಾಡುತ್ತಿದ್ದ ಸಿಕ್ಕ ಸಿಕ್ಕವ ಮೇಲೆ ಎರಗುತ್ತಿತ್ತು. ಫೈಟಿಂಗ್ ಆಡಲು ಸಿದ್ಧವಾಯಿತು.

ಆ ಕೋಳಿ ಇತ್ತೀಚೆಗೆ ಒಬ್ಬ ಬಾಲಕನ ಕೆನ್ನೆ ಮೇಲೆ ಜೋರಾಗಿ ಚುಚ್ಚಿದೆ. ಹಾಗಾಗಿ ಆ ಬಾಲಕನ ಕೆನ್ನೆ ಮೇಲೆ ರಕ್ತ ಬಂದಿತ್ತು. ಆ ಬಾಲಕ ಗಾಯಗೊಂಡ ಕಾರಣ ಆ ಮಗುವಿನ ತಂದೆ ತಾಯಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ದೂರು ಸ್ವೀಕರಿಸಿ ಕೋಳಿಯನ್ನು ವಶಕ್ಕೆ ಪಡೆದರು. ಆ ಕೋಳಿಯನ್ನು ಸಾಕಿದ ಲಕ್ಷ್ಮಿ ಮತ್ತು ಪಪ್ಪು ಎಷ್ಟೇ ಕೇಳಿಕೊಂಡರೂ ಸಹ ಪೊಲೀಸರು ಕನಿಕರಿಸಲಿಲ್ಲ. ಪ್ರಕರಣ ದಾಖಲಿಸಿದವರಿಗೆ ನಷ್ಟ ಪರಿಹಾರ ಕೊಡಿ ಎಂದು ಕೋಳಿಯನ್ನು ಬಿಡಿಸಿಕೊಳ್ಳಲು ಪಪ್ಪು ದಂಪತಿಗಳು ಪ್ರಯತ್ನ ಮಾಡುತ್ತಿದ್ದಾರೆ. ಮುಂದೇನಾಗುತ್ತದೋ ಏನೋ. ಜೈಲಿನಲ್ಲಿ ಕಂಬಿ ಎಣಿಸುತ್ತಾ ಕಾಳು ಕಡ್ಡಿ ತಿನ್ನುತ್ತಿರುವ ಆ ಕೋಳಿ ಪರಿಸ್ಥಿತಿ ಏನೋ ಎತ್ತೋ... ಅಯ್ಯೋ ಪಾಪ.

No comments