Header Ads

test

ಸ್ಟಾರ್ ಹೀರೋ ಪತ್ನಿ ಬಳಸುತ್ತಿರುವ ಫೋನ್ ನೋಡಿದರೆ ಶಾಕ್ ಆಗುತ್ತೀರ, ವಾವ್ ಗ್ರೇಟ್ ಅಂತೀರ!!

ಈಗ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್‌ಫೋನ್‍ಗಳಿವೆ. ಪ್ರತಿಯೊಬ್ಬರೂ ಸಹ ಸ್ಮಾರ್ಟ್‍ಫೋನ್ ಬಳಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಜಗತ್ತೇ ಒಂದು ಕುಗ್ರಾಮದಂತಾಗಿದೆ. ಟೆಕ್ನಾಲಜಿ ಬೆಳವಣಿಗೆ ಒಳ್ಳೆಯದೇ ಆದರೂ, ಅದನ್ನು ಕೆಲವರು ವಿಪರೀತವಾಗಿ ಬಳಸುತ್ತಿದ್ದಾರೆ. ಕೆಲವರು ಸ್ಮಾರ್ಟ್‍ಫೋನ್ ವ್ಯಸನಿಗಳಾಗಿ ಬದಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿನ್ನೆಲೆಯಲ್ಲಿ ಅದೆಷ್ಟೋ ಮಂದಿ ಮಕ್ಕಳು ಸಹ ಸ್ಮಾರ್ಟ್‌ಫೋನ್‌ಗೆ ವ್ಯಸನಿಗಳಾಗುತ್ತಿದ್ದಾರೆ. ಮಕ್ಕಳ ಕಾರಣಕ್ಕೋ ಅಥವಾ ಇನ್ನೇನೋ ಕಾರಣಕ್ಕೆ ತಮಿಳು ಸ್ಟಾರ್ ಹೀರೋ ಅಜಿತ್ ಪತ್ನಿ ನೋಕಿಯಾ ಬೇಸಿಕ್ ಫೀಚರ್ ಫೋನನ್ನು ಬಳಸುತ್ತಿದ್ದಾರೆ.


ಕಾಲಿವುಡ್ ನಟ ಅಜಿತ್ ಪತ್ನಿ ಶಾಲಿನಿ‍ಗೆ ಸಂಬಂಧಿಸಿದ ಫೋಟೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದಕ್ಕೆ ಕಾರಣವಾಗಿರುವುದು ಅವರ ಕೈಯಲ್ಲಿ ಇರುವ ಒಂದು ಮೊಬೈಲ್ ಫೋನ್. ಆದರೆ ಅದು ಸ್ಮಾರ್ಟ್‌ಫೋನ್ ಅಲ್ಲ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.

ಅಭಿಮಾನಿಯೊಬ್ಬರು ಶಾಲಿನಿ ಜತೆಗೆ ಸೆಲ್ಫಿ ತೆಗೆದುಕೊಂಡಿರುವ ಫೋಟೋ ಒಂದು ಹರಿದಾಡುತ್ತಿದೆ. ಆ ಫೋಟೋದಲ್ಲಿ ಜಮಾನಾ ಕಾಲದ ಶಾಲಿನಿ ಕೈಯಲ್ಲಿ ನೋಕಿಯಾ 3310 ಫೋನ್ ಇದೆ. ಹಾಗಾಗಿ ಆ ಫೋಟೋ ವೈರಲ್ ಆಗಿದೆ. ತಮಿಳು ಸೂಪರ್ ಸ್ಟಾರ್ ಪತ್ನಿಯಾಗಿದ್ದು ಈಗಲೂ ನೀವು ಈ ಫೋನ್ ಬಳಸುತ್ತಿದ್ದೀರಾ ಎಂಬ ಚರ್ಚೆ ಕಾಲಿವುಡ್‌ನಲ್ಲಿ ನಡೆಯುತ್ತಿದೆ.

"ಸರಳ ಜೀವನ ನಡೆಸುತ್ತಿದ್ದಾರೆ. ಫೋನ್ ಸಿಂಪಲ್, ಜೀವನ ಸಿಂಪಲ್" ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. "ಈಗಲೂ ಅದೇ ಫೋನ್ ಬಳಸುತ್ತಿದ್ದೀರಾ ಶಾಲಿನಿ ಮೇಡಂ" ಎಂದು ಪ್ರಶ್ನಿಸಿರುವ ಕೆಲವು ನೆಟ್ಟಿಗರು ಅವರ ಸರಳತೆಯನ್ನು ಅಭಿನಂದಿಸಿದ್ದಾರೆ.

ಅಜಿತ್‌ರನ್ನು ಮದುವೆಯಾದ ಬಳಿಕ ಶಾಲಿನಿ ಸಿನಿಮಾಗಳಿಗೆ ದೂರವಾದರು. ತನ್ನ ಕುಟುಂಬಕ್ಕೆ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದಾರೆ. ಶಾಲಿನಿ ಅವರ ಲೇಟೆಸ್ಟ್ ಫೋಟೋ ಇದೇ ಆಗಿರುವ ಕಾರಣ ಟ್ವಿಟರ್‌ನಲ್ಲಿ #Shalini ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಅಜಿತ್ ಮತ್ತು ಶಾಲಿನಿ ಅವರದು ಪ್ರೇಮ ವಿವಾಹ. 1999ರಲ್ಲಿ 'ಅಮರ್ ಕಾಲಮ್' ಚಿತ್ರೀಕರಣದಲ್ಲೇ ಇವರಿಬ್ಬರೂ ಪ್ರೇಮ ಚಿಗುರಿತ್ತು. ಇನ್ನೊಂದು ಕಡೆ ಅಜಿತ್ ಅಭಿನಯದ ವಿಶ್ವಾಸಂ ಚಿತ್ರ ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ.

ಅಜಿತ್ ಸಿನಿಮಾ ಒಂದಕ್ಕೆ 10 ಕೋಟಿಗೂ ಅಧಿಕ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದ ಸುದ್ದಿ ಇದೆ. ಇಂತಹವರ ಪತ್ನಿ ಬಯಸಿದರೆ ಐಫೋನ್ ಲೇಟೆಸ್ಟ್ ಮಾಡೆಲನ್ನೇ ಬಳಸಬಹುದು. ಆದರೆ ಅವರಿಗೆ ಆಸಕ್ತಿ ಇಲ್ಲದ ಕಾರಣ ಅಥವಾ ಇನ್ನೇನಾದರೂ ವೈಯಕ್ತಿಕ ಕಾರಣಕ್ಕೆ ಕೇವಲ ಮೂರು ಸಾವಿರ ರೂಪಾಯಿ ಫೋನ್ ಬಳಸುತ್ತಿದ್ದಾರೆ. ನಮಗೆ ಅಗತ್ಯವಿಲ್ಲ ಎಂದಾಗ ಸ್ಮಾರ್ಟ್‌ಫೋನ್ ಬೇಕಾಗಿಲ್ಲ. ಅಗತ್ಯ ಇರಲಿ ಬಿಡಲಿ ಫೋನ್ ಬಳಸುವುದು ಏಕೆ, ಶಾಲಿನಿಯನ್ನು ನೋಡಿ ಎಲ್ಲರೂ ಕಲಿಯುವುದು ಬಹಳಷ್ಟಿದೆ. ನಿಜವಾಗಿಯೂ ಶಾಲಿನಿ ಅಜಿತ್ ಗ್ರೇಟ್.

No comments