Header Ads

test

"ಆ ಕಾರಣದಿಂದ ಆ ಯುವತಿಯನ್ನು ಮದುವೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಓರ್ವ ಯುವಕ ಕಳುಹಿಸಿದಮೆಸೇಜ್ ಇದು.! ನಿಮ್ಮ ಸಲಹೆ ಏನು..?

ನಿಮಗೊಂದು ಹುಡುಗಿಯ ಡೀಟೇಲ್ಸ್, ಫೋಟೋಸ್ ಕಳುಹಿಸಿದ್ದೇನೆ. ಆ ಹುಡುಗಿ ಇಷ್ಟವಾದರೆ ನನಗೆ ತಿಳಿಸು. ನಿನಗೆ ಪರ್ಫೆಕ್ಟ್ ಜೋಡಿ ಎಂದು ಹೇಳಿದರವರು. ಅವಳ ಫೋಟೋ ನೋಡಿದ ಕೂಡಲೆ ಓಕೆ ಎಂದು ಹೇಳಿದೆ. ಆಕೆ ಹೆಸರು ವಾಣಿ. ಬಳಿಕ ವಾಣಿ ತಂದೆ ಫೋನ್ ಮಾಡಿದ. ನನ್ನ ಡೀಟೇಲ್ಸ್ ತಿಳಿದುಕೊಂಡರು. ನಿಮ್ಮ ಮನೆಗೆ ಯಾವಾಗ ಬರಬೇಕು ಎಂದು ತಿಳಿಸಿ.. ಬಂದು ವಿವರಗಳನ್ನು ಮಾತನಾಡಿಕೊಳ್ಳೋಣ ಎಂದರು. ಆ ಹುಡುಗಿ ನನ್ನ ಜೀವನದಲ್ಲಿ ಬರುತ್ತಾಳೆಂದು ತುಂಬಾ ಕನಸು ಕಂಡೆ.


ವಾಣಿ ಅವರ ತಂದೆ ನಮ್ಮ ಜಾತಕಗಳನ್ನು ಓರ್ವ ವೇದ ಪಂಡಿತರಿಗೆ ತೋರಿಸಿದರು. ಹುಡುಗಿ, ಹುಡುಗನ ಜಾತಕ ಕೂಡಿ ಬರುತ್ತಿಲ್ಲ ಎಂದು ಪಂಡಿತರು ಹೇಳಿದರು. ಅದರಿಂದ ವಾಣಿ ತಂದೆ ನಮ್ಮ ಮದುವೆಗೆ ನಿರಾಕರಿಸಿದ. ಅದಾಗಲೆ ನಾನು ವಾಣಿಯೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ಆರಂಭಿಸಿದ್ದೆ. ನಮ್ಮ ಮಗಳ ಜತೆಗೆ ಮದುವೆಯಾದರೆ ತುಂಬ ತೊಂದರೆಗಳಾಗುತ್ತವೆ.. ನೀವು ಈ ಮದುವೆ ಆಗದಿರುವುದೇ ಉತ್ತಮ ಎಂದು ಸಲಹೆ ನೀಡಿದರು ವಾಣಿ ಅವರ ತಂದೆ.

ಆದರೆ ಅದಾಗಲೆ ನಾನು ವಾಣಿ ಮಾಯೆಗೆ ಒಳಗಾಗಿದ್ದೆ. ಆಕೆಯನ್ನು ಅಲ್ಲದೆ ಇನ್ಯಾರನ್ನೂ ಮಾಡಿಕೊಳ್ಳಬಾರದು ಎಂದುಕೊಂಡೆ. ವಾಣಿ ಸಹ ನನ್ನನ್ನು ಬಿಟ್ಟಿ ಇನ್ಯಾರನ್ನೂ ಮಾಡಿಕೊಳ್ಳಲ್ಲ ಎಂದು ಹೇಳಿದಳು. ವಾಣಿ ತಂದೆಗೆ ಗೊತ್ತಾಗದಂತೆ ನಾವಿಬ್ಬರೂ ರೆಗ್ಯುಲರ್ ಆಗಿ ಫೋನ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಬಳಿಕ ವಾಟ್ಸಾಪ್ ಚಾಟ್, ವೀಡಿಯೋ ಕಾಲಿಂಗ್‌ನಲ್ಲಿ ನಾವಿಬ್ಬರೂ ಬಿಝಿಯಾಗಿರುತ್ತಿದ್ದೆವು. ವೀಕೆಂಡ್ಸ್‌ನಲ್ಲಿ ನಾವಿಬ್ಬರೂ ಭೇಟಿಯಾಗುತ್ತಿದ್ದೆವು.

ಇಬ್ಬರೂ ಕೂಡಿ ಹೇಗಾದರೂ ಮಾಡಿ ವಾಣಿ ತಂದೆಯನ್ನು ಮದುವೆಗೆ ಒಪ್ಪಿಸಬೇಕು ಎಂದುಕೊಂಡೆವು. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ಬಹಳಷ್ಟು ದಿನಗಳ ಬಳಿಕ ಮತ್ತೆ ಅವರ ತಂದೆಗೆ ಫೋನ್ ಮಾಡಿದೆ. ಈಗಲಾದರೂ ಒಪ್ಪಿಕೊಳ್ಳುತ್ತಾನೆ ಎಂದುಕೊಂಡೆ. ಅವರು ಕಡೆಗೂ ಒಪ್ಪಿಕೊಳ್ಳಲಿಲ್ಲ. ಆದರೂ ಸರಿ ವಾಣಿಯನ್ನು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಬೇಕು ಎಂದುಕೊಂಡೆ. ವಾಣಿ ಸಹ ಅದಕ್ಕೆ ಸಿದ್ಧವಾದಳು. ಆದರೆ ಭವಿಷ್ಯ ತಿಳಿದುಕೊಳ್ಳುವ ಹೊತ್ತಿಗೆ ಭಯವಾಯಿತು.

ಯಾವುದೇ ಸಪೋರ್ಟ್ ಇಲ್ಲದೆ ಜೀವನ ಪರ್ಯಂತ ಕಷ್ಟ ಪಡಬೇಕಾಗುತ್ತದೆ ಅನ್ನಿಸಿತು. ಅದಾಗಲೆ ನನಗೆ ನಮ್ಮ ಬಂಧುಗಳಿಂದ ಒಂದು ಸಂಬಂಧ ಬಂತು. ಆ ಸಂಬಂಧವನ್ನು ಹೇಗಾದರೂ ಮಾಡಿ ನನ್ನನ್ನು ಓಕೆ ಮಾಡಿಸಬೇಕು ಎಂದುಕೊಂಡರು. ಬಂಧುಗಳೆಲ್ಲಾ ಸೇರಿ ಬಲವಂತ ಪಡಿಸಿದ್ದಕ್ಕೆ ನಾನು ಒಪ್ಪಿಕೊಳ್ಳಬೇಕಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ. ಆದರೆ ನನಗೆ ವಾಣಿಯನ್ನು ಬಿಡಲು ಮನಸ್ಸಾಗುತ್ತಿಲ್ಲ. ನನ್ನ ಸಮಸ್ಯೆಗೆ ನೀವಾದರೆ ಏನು ಸಲಹೆ ನೀಡುತ್ತೀರ..? ಪ್ಲೀಸ್ ದಯವಿಟ್ಟು ನನ್ನ ಸಮಸ್ಯೆಗೆ ಒಂದು ದಾರಿ ತೋರಿಸಿ.

1 comment:

  1. Nivu Vaani yavarannu nijavagi Prithisiddu Howdu anta adre, Sambandhikaru alla, God bandru Oppi kolbardittu. Nimma Story noduvaga Nivu sumne Vaani yavarannu Prithisiddu anisutte. Tappagidre Sorry Sir. Ondu nimisha nive nimma story odi Yochisi.

    ReplyDelete