Header Ads

test

ಶುಕ್ರ ಅಥವಾ ಶನಿವಾರದ ದಿನ ಈ ರೀತಿ ಮಾಡಿದರೆ ನಿಮ್ಮ ಬಯಕೆಗಳು ನೆರವೇರುತ್ತವೆ..!

ಮನುಷ್ಯನ ಜೀವನದಲ್ಲಿ ಗೆಲುವು, ಸೋಲು ಎಂಬುದು ಎರಡು ಇರುತ್ತವೆ. ಒಂದು ರೀತಿಯಲ್ಲಿ ಹೇಳಬೇಕು ಎಂದರೆ ಮನುಷ್ಯನ ಜೀವನ ರನ್ನಿಂಗ್ ರೇಸ್‌ನಂತಹದ್ದು. ಕಷ್ಟಗಳು ಬಂದಾಗ ಧೈರ್ಯ ಕಳೆದುಕೊಳ್ಳದೆ ಹೋರಾಟ ಮಾಡಬೇಕು. ಕಷ್ಟಗಳನ್ನು ಎದುರಿಸಲು ಮಾನವ ಪ್ರಯತ್ನವನ್ನು ಮಾಡುತ್ತಾ ದೇವರನ್ನು ಬೇಡುತ್ತಾ ಕಷ್ಟಗಳಿಂದ ಹೊರಗೆ ಬರಲು ಯಾವುದಾದರೂ ಮಾರ್ಗಗಳು ಇವೆಯೇನೋ ಎಂದು ಆಲೋಚಿಸಬೇಕು.



ಯಾವುದಾದರೂ ಮುಖ್ಯವಾದ ಕೆಲಸದ ನಿಮಿತ್ತ ಹೊರಗೆ ಹೋಗುವ ಮೊದಲು ಆ ಮನೆಯಲ್ಲಿ ಹೆಂಡತಿ ಅಥವಾ ತಾಯಿ ಮೇಲೆ ಒಂದು ಹಿಡಿ ಉದ್ದಿನ ಬೇಳೆ ತೆಗೆದುಕೊಂಡು ನಿವಾಳಿಸಿ ಫಟ್ ಎಂದು ನೆಲಕ್ಕೆ ಹೊಡೆಯಬೇಕು. ಆ ರೀತಿ ಮಾಡಿದ ಬಳಿಕ ಹಿಂತಿರುಗಿ ನೋಡದೆ ಹೊರಗೆ ಹೋಗಬೇಕು. ಆಗ ಆ ಕೆಲಸ ಯಶಸ್ವಿಯಾಗಿ ಆಗುವುದಷ್ಟೇ ಅಲ್ಲದೆ ಒಳ್ಳೆಯ ಲಾಭ ಸಹ ಬರುತ್ತದೆ.

ಅದೇ ರೀತಿ ಶುಕ್ರ ಅಥವಾ ಶನಿವಾರದ ದಿನ ಈ ಒಂದು ಕೆಲಸ ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ತುಂಬಾ ಮಂದಿ ಎಷ್ಟೇ ಕಷ್ಟಪಟ್ಟರೂ ಅಂದುಕೊಂಡ ಕೆಲಸ ನೆರವೇರಲ್ಲ. ಒಂದು ವೇಳೆ ಲಾಭ ಬಂದರೂ ಅದು ಯಾವುದೋ ಒಂದು ರೀತಿ ಖರ್ಚಾಗುತ್ತಿರುತ್ತದೆ. ಅಂತಹವರು ಶುಕ್ರ ಅಥವಾ ಶನಿವಾರ ಕೆಲವು ಕಪ್ಪು ಉದ್ದನ್ನು ತೆಗೆದುಕೊಂಡು ಅದನ್ನು ಅರಳಿ ಮರದ ಬುಡದಲ್ಲಿ ಹಾಕಬೇಕು. ಈ ರೀತಿ ಮಾಡಿವುದರಿಂದ ಕಷ್ಟಗಳು ದೂರವಾಗುತ್ತವೆ. ಈ ರೀತಿ ಬೆಳಗ್ಗೆ ಅಥವಾ ಮಧ್ಯಾಹ್ನ ಮಾಡಬೇಕು. ಮನುಷ್ಯ ಆತ್ಮವಿಶ್ವಾಸ ಬಿಡದೆ, ನಿರಂತರ ಕಷ್ಟಪಡುತ್ತಾ ಅದರ ಜತೆಗೆ ಈ ಪರಿಹಾರಗಳನ್ನೂ ಫಾಲೋ ಆದರೆ ಕೆಲಸಗಳು ಸಕ್ರಮವಾಗಿ ಆಗುತ್ತವೆ.

No comments