Header Ads

test

ಪುಟಾಣಿಗಳ ಸೆಲ್ಫಿ... ವೈರಲ್ ಆಗುತ್ತಿರುವ ಫೋಟೋ.. ಈ ನಗುವಿಗೆ ಬೆಲೆ ಕಟ್ಟಲು ಸಾಧ್ಯವೇ..?

ಮಕ್ಕಳ ಮನಸ್ಸೇ ಹಾಗೆ. ಏನೇನೂ ಅರಿಯದ ಕಂದಮ್ಮಗಳು. ಅವರು ಏನೇ ಮಾಡಿದರೂ ಮುದ್ದು ಮುದ್ದಾಗಿರುತ್ತದೆ. ಮಕ್ಕಳು ದೇವರ ಸಮಾನ ಅಂತೀವಿ. ಆ ನಿಷ್ಕಲ್ಮಶ ಪ್ರೀತಿ, ಆ ನಗು, ಮುಗ್ಧ ಮುಖ ಯಾರಿಗೇ ಆಗಲಿ ನೋಡುತ್ತಿದ್ದರೆ ಈ ಜಗವನ್ನೇ ಮರೆಯುತ್ತೀವಿ. ಮಕ್ಕಳ ಬಗ್ಗೆ ಕವಿಗಳಂತೂ ತುಂಬಾ ಮುಗ್ಧರಾಗಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.


ಒಂದಷ್ಟು ಪುಟಾಣಿಗಳು ಸೆಲ್ಫಿಗಾಗಿ ಫೋಸು ನೀಡುತ್ತಿರುವ ಸಂದರ್ಭ ಅದು. ಮುಖವೆಲ್ಲಾ ತುಂಬಿಕೊಂಡ ನಗುವಿನೊಂದಿಗೆ ಆ ಚಿಕ್ಕ ಮಕ್ಕಳು ತುಂಬಾ ಆನಂದವಾಗಿ ಕಾಣುತ್ತಿದ್ದಾರೆ. ಫೋಟೋಗಾದರೆ ಸೆಲ್ಫಿ ಪೋಸು ನೀಡಿದರಾದರೂ ಅವರ ಬಳಿ ಮೊಬೈಲ್ ಇಲ್ಲ. ಅದೇ ಈ ಸೆಲ್ಫಿ ಫೋಟೋ ವಿಶೇಷತೆ. ಚಪ್ಪಲಿಯನ್ನು ಕೈಗೆ ತಗುಲಿಸಿಕೊಂಡು... ಮೊಬೈಲ್‌ನಂತೆ ಹಿಡಿದುಕೊಂಡು... ಒಬ್ಬ ಪುಟಾಣಿ ಮುಂದೆ ನಿಂತಿದ್ದರೆ.. ಉಳಿದವರು ಸೆಲ್ಫಿಗೆ ರೆಡಿ ಆದಂತೆ ನಿಂತಿದ್ದಾರೆ. ಅವರಲ್ಲಿನ ಮುಗ್ಧತೆ... ನಿರ್ಮಲವಾದ ನಗು.. ನೋಡಿದವರಿಗೆ ಕಣ್ತುಂಬ ಸಂತೋಷ ನೀಡುತ್ತಿದೆ. ಆ ದೃಶ್ಯವನ್ನು ಯಾರೋ ತಮ್ಮ ಕ್ಯಾಮೆರಾದಲ್ಲಿ ಬಂಧಿಸಿ... ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ... ಆ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋವನ್ನು ಸಾಕಷ್ಟು ಸೆಲೆಬ್ರಿಟಿಗಳು, ಖ್ಯಾತ ನಾಮರು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಂದಲೂ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಹರಿದಾಡುತ್ತಿವೆ.

ಅಮಿತಾಬ್ ಬಚ್ಚನ್ ಈ ಫೋಟೋವನ್ನು ಹಂಚಿಕೊಂಡು ಇದು ಫೋಟೋಶಾಪ್‌ನಲ್ಲಿ ಮಾಡಿದ್ದಾರೆ ಎಂದು ಹೇಳಿದ್ದರು. ಮೊದಲು ಈ ಫೋಟೋವನ್ನು ಹಂಚಿಕೊಂಡಿದ್ದು ಖ್ಯಾತ ಛಾಯಾಗ್ರಾಹಕ ಅತುಲ್ ಕಸ್ಬೇಕರ್. ಈ ಫೋಟೋ ನೋಡಿ ಅಮಿತಾಬ್ ಫೋಟೋಶಾಪ್ ಮಾಡಿದಂತಿದೆ ಎಂಬ ಅನುಮಾನ ವ್ಯಕ್ತಪಟಿಸಿದ್ದರು. ಆದರೆ ಇದು ಫೋಟೋಶಾಪ್ ಮಾಡಿದ್ದಲ್ಲ ಒರಿಜಿನಲ್ ಫೋಟೋ. ಸ್ಮಾರ್ಟ್‌ಫೋನಲ್ಲಿ ತೆಗೆದಿರುವುದು. ಹಾಗಾಗಿ ಆ ಹುಡುಗನ ಕೈ ಸ್ವಲ್ಪ ದೊಡ್ಡದಾಗಿರುವಂತೆ ಕಾಣುತ್ತದೆ. ಅಷ್ಟೇ ಅಲ್ಲ ಅಲ್ಲಿನ ಒಬ್ಬ ಬಾಲಕನ ಒಂದು ಪಾದಕ್ಕೆ ಇಂತಹದ್ದೇ ಚಪ್ಪಲಿ ಇದೆ. ಒಂದು ಚಪ್ಪಲಿಯನ್ನು ಕೈಲಿ ಮೊಬೈಲ್ ಫೋನ್‌ನಂತೆ ಹಿಡಿದು ತೆಗೆಯುತ್ತಿರುವ ಫೋಟೋ ಇದು ಎಂದಿದ್ದಾರೆ. ಅವರು ಮೂರು ಜನ ತಂತ್ರಜ್ಞರನ್ನು ವಿಚಾರಿಸಿ ಇದನ್ನು ಖಚಿತಪಡಿಸಿದ್ದಾರೆ. ಮುಗ್ಧ ಮಕ್ಕಳ ಫೋಟೋ ನೋಡಿದರೆ ಮನಸ್ಸಿಗೆ ನಿಜಕ್ಕೂ ಖುಷಿಯಾಗುತ್ತದೆ ಅಲ್ಲವೇ? ಅಮಿತಾಬ್ ಸಹ ಈ ಫೋಟೋಗೆ ಫಿದಾ ಆಗಿದ್ದಾರೆ. ಆದರೆ ಅವರ ಅನುಮಾನ ಇದು ಫೋಟೋಶಾಪ್ ಮಾಡಿರುವುದೇನೋ ಎಂಬುದು. ಆದರೆ ಅತುಲ್ ಆ ಅನುಮಾನವನ್ನೂ ಬಗೆಹರಿಸಿ ಈ ಮುಗ್ಧ ನಗುವಿನಷ್ಟೇ ಈ ಫೋಟೋ ಸತ್ಯ ಎಂದಿದ್ದಾರೆ..!

No comments