Header Ads

test

ಬಡತನದೊಂದಿಗೆ ಹೋರಾಡಲಾಗದೆ ವೃಷಣಗಳನ್ನು ಮಾರಾಟಕ್ಕಿಟ್ಟ ಪ್ರಬುದ್ಧ!!

ಶ್ರೀಮಂತರಾಗಬೇಕು ಎಂದು ಪ್ರತಿಯೊಬ್ಬರೂ ಅಂದುಕೊಂಡರೆ ನಡೆಯಲ್ಲ. ಓರ್ವ ವ್ಯಕ್ತಿ ಶ್ರೀಮಂತನಾಗಬೇಕಾದರೆ... ಶ್ರಮ, ಶಿಸ್ತು, ಛಲ, ಶಿಕ್ಷಣ, ಕುಟುಂಬದ ವಂಶಪರಂಪರೆ, ಅಥವಾ ಬುದ್ಧಿವಂತಿಕೆಯಂತಹವು ಮುಖ್ಯವಾದ ಅಂಶಗಳಾಗಿರುತ್ತವೆ. ಇವೆಲ್ಲದರ ಜತೆಗೆ ಅದೃಷ್ಟ ಸಹ ಇರಬೇಕು ಎನ್ನುತ್ತಾರೆ ಹಿರಿಯರು. ಆದರೆ ಕೆಲವರು ಆಗಾಗ "ಧನಂ ಮೂಲಂ ಮೀದಂ ಜಗತ್", "ಹಣ ಇಲ್ಲದೆ ಹುಟ್ಟುವುದು ತಪ್ಪಲ್ಲ, ಹಣ ಇಲ್ಲದಿರುವುದು ತಪ್ಪು" ಎಂದು ಸಾಮಾನ್ಯ ಸ್ಟೇಟ್‌ಮೆಂಟ್ ನೀಡುತ್ತಿರುತ್ತಾರೆ. ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಹೊಟ್ಟೆಯುರಿಯಂತಹವನ್ನೂ ಸಮಾಜದಲ್ಲಿ ಕಾಣಬಹುದು.


ಇದಕ್ಕೆಲ್ಲಾ ಕಾರಣ ಒಬ್ಬರನ್ನು ಇನ್ನೊಬ್ಬರ ಜತೆಗೆ ಹೋಲಿಸಿಕೊಳ್ಳುವುದು, ಗುರಿ ಸಾಧನೆಯಲ್ಲಿ ಇರಬೇಕು, ಆದರೆ ಆರ್ಥಿಕ ಪರವಾದ ಅಂಶಗಳ ಕಾರಣ ಸಂಪಾದನೆಗೆ ಮೀರಿದ ಖರ್ಚುಗಳು ಹೆಚ್ಚಾಗಿ ಕಡೆಗೆ ಪತನವಾಗುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಬಡತನವನ್ನು ಭರಿಸಲಾಗದೆ, ಉಳಿದ ಜೀವನವನ್ನು ಶ್ರೀಮಂತನಾಗಿ ಬದುಕಬೇಕೆಂಬ ಆಲೋಚನೆಯಲ್ಲಿ ವೃಷಣಗಳನ್ನು ಮಾರಾಟಕ್ಕೆ ಇಟ್ಟ. ಈ ವಿಚಿತ್ರ ಘಟನೆ ಬಗ್ಗೆ ಇನ್ನಷ್ಟು ವಿವರಗಳನ್ನು ನೋಡೋಣ. ತನ್ನ ವೃಷಣಗಳನ್ನು ಹಣದ ರೂಪದಲ್ಲಿ ಬದಲಾಯಿಸಲು ನಿರ್ಧರಿಸಿದ ವ್ಯಕ್ತಿ ಕಥೆ ಇದು.

ಇಯಾನ್ ಹರ್ರಿಯಲ್ ಕೊವಿಟಿ ಎಂಬ ವ್ಯಕ್ತಿಯ ವಯಸ್ಸು 27 ವರ್ಷ. ಕೆನ್ಯಾದಲ್ಲಿನ ಮಿಗೋರಿ ಕೌಂಟಿಯ ಉರಿರಿ ಎಂಬಲ್ಲಿ ವಾಸವಾಗಿದ್ದಾನೆ. ಆದರೆ ಅಸಾಧಾರಣ ಶ್ರೀಮಂತನಾಗಬೇಕು ಎಂಬ ಆಲೋಚನೆ ಜಗತ್ತೆಲ್ಲಾ ಈತನ ಕಡೆಗೆ ನೋಡಿವಂತೆ ಮಾಡಿತು. ಸ್ವಲ್ಪ ಕಾಲ ಸಾಮಾಜಿಕ ಮಾಧ್ಯಮದಲ್ಲಿ ಈತನ ಬಗ್ಗೆ ಚರ್ಚೆಯೇ ನಡೆಯಿತು. ಕೆಲವರು ಈತ ಮಾಡಿದ್ದು ಸರಿ ಅನ್ನುತ್ತಿದ್ದರೆ, ಇನ್ನೂ ಕೆಲವರು ಹಗುರವಾಗಿ ತೆಗೆದುಕೊಂಡಿದ್ದಾರೆ. ಈತ ಬಡತನ, ಹಸಿವನ್ನು ಭರಿಸಲಾಗದೆ ತನ್ನ ವೃಷಣಗಳಲ್ಲಿ ಒಂದನ್ನು ಮಾರಿ ಹಣ ಮಾಡಿಕೊಳ್ಳಬೇಕು ಎಂದುಕೊಂಡ.

ಕೊವಿಟಿ ರಾಜಕೀಯದಲ್ಲೂ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಯತ್ನಿಸಿ ಕೈ ಸುಟ್ಟುಕೊಂಡಿದ್ದಾನೆ ಕೂಡ. ಅಷ್ಟೇ ಅಲ್ಲದೆ ತನ್ನ ಕಿಡ್ನಿಯಲ್ಲಿ ಒಂದನ್ನು 1.5 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಲೂ ಸಹ ಸಿದ್ಧನಾಗಿದ್ದ. ಆದರೆ ಬೇರೆ ದೇಶದವರಿಗೆ ಈ ಮೊತ್ತ 3 ಪಟ್ಟು ಅಧಿಕವಾಗಿ ಇರುತ್ತದೆ ಎಂದು ಹೇಳಿದ.
ಸಂತಾನಕ್ಕೆ ಒಂದು ವೃಷಣ ಇದ್ದರೆ ಸಾಕು ಎಂಬುದು ಆತನ ನಂಬಿಕೆ. ಈ ಮೂಲಕ ಒಬ್ಬರಿಗೆ ಸಂತಾನ ಭಾಗ್ಯ ನೀಡಿದವನಾಗುತ್ತೇನೆ, ಇನ್ನೊಂದು ಕಡೆ ಹಣ ಸಹ ಸಿಗುತ್ತದೆ ಎಂಬ ಲೆಕ್ಕಾಚಾರ ಈತನದು.

ಮುಖ್ಯವಾಗಿ ವೈದ್ಯರು ಏನು ಹೇಳುತ್ತಾರೆಂದರೆ... ಒಂದೇ ಒಂದು ವೃಷಣದಲ್ಲಿ ಸೆಕ್ಸ್ ಜೀವನ ಕಳೆಯಬಹುದು ಎನ್ನುತ್ತಿದ್ದಾರೆ ವೈದ್ಯರು. ಆದರೆ ಅವನ್ನು ತೆಗೆಯಲು ಮಾತ್ರ ಮುಂದೆ ಬರುತ್ತಿಲ್ಲ. ಏನಾದರೂ ಅನಾರೋಗ್ಯ ಸಮಸ್ಯೆ ಇದ್ದರೆ ಶಸ್ತ್ರಚಿಕಿತ್ಸೆ ಮಾಡಿ ಒಂದನ್ನು ತೆಗೆಯಬಹುದೇ ವಿನಃ ಕೇವಲ ಶ್ರೀಮಂತನಾಗುತ್ತಾನೆ ಎಂಬ ಕಾರಣಕ್ಕೆ ಆ ರೀತಿ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ವೈದ್ಯರು. ಅದು ಗಂಭೀರ ಅಪರಾಧವಾಗುತ್ತದೆ ಎನ್ನುತ್ತಿದ್ದಾರೆ. ಶ್ರೀಮಂತರಾಗಬೇಕು ಎಂದು ಪ್ರಯತ್ನಿಸುತ್ತಿರುವ ಇಂತಹ ವ್ಯಕ್ತಿಗಳನ್ನು ನೋಡಿದರೆ ನಿಮಗೇನು ಅನ್ನಿಸುತ್ತದೆ. ಕಾಮೆಂಟ್ ರೂಪದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.No comments