Header Ads

test

ಕಿರಾಣಿ ಅಂಗಡಿಯಲ್ಲಿ ನಡೆದ ಘಟನೆ! ಎಷ್ಟು ಸಲಾನೋ?? ಎಂದು ತೆಗೆದು ಒಂದು ಕೊಟ್ಟಳು ಶಾಪ್ ಆಂಟಿ!

ಹಾಲಿನ ಪ್ಯಾಕೆಟ್‍ಗಾಗಿ ನನ್ನ ರೂಮ್ ಬಳಿಯೇ ಇರುವ ಒಂದು ಕಿರಾಣಿ ಅಂಗಡಿಗೆ ಹೋದೆ. ಆ ಅಂಗಡಿಯ ಆಂಟಿ ನನಗೆ ತುಂಬಾ ಪರಿಚಯ..ಅಲ್ಲಿ ನಾನು ಸಾಲದ ಖಾತೆ ಸಹ ತೆರೆದಿದ್ದೇನೆ. ಸರಿಯಾಗಿ ನಾನು ಹಾಲಿನ ಪ್ಯಾಕೆಟ್‌ಗಾಗಿ ಬಂದಾಗಲೇ ಒಬ್ಬ ವ್ಯಕ್ತಿ ಕೈಯಲ್ಲಿ 500 ರೂಪಾಯಿ ನೋಟು ಹಿಡಿದು ಶಾಪ್ ಮುಂದೆ ನಿಂತು ಬೇಕಾದ ಸರಕುಗಳನ್ನು ಒಂದೊಂದಾಗಿ ಹೇಳುತ್ತಿದ್ದಾನೆ. ಆ ಶಾಪ್ ಆಂಟಿ ಸಹ ಆತ ಕೇಳಿದ ಸರಕುಗಳನ್ನು ಒಂದೊಂದಾಗಿ ತೆಗೆದುಕೊಡುತ್ತಿದ್ದಾಳೆ. ಆತನಿಗೆ ಸರಕುಗಳನ್ನು ಕೊಡುವುದನ್ನು ನಿಲ್ಲಿಸಿ, ನನಗೆ ಹಾಲಿನ ಪ್ಯಾಕೆಟ್ ಕೊಟ್ಟು ಕಳುಹಿಸಿದರು ಆಂಟಿ.

ಮತ್ತೆ ಮೂರು ದಿನಗಳ ಬಳಿಕ ಕೆಲವು ಸರಕು ತರೋಣ ಎಂದು ಅದೇ ಶಾಪ್‌ಗೆ ಹೋದೆ.. ಈ ಸಲ ಸಹ ಆ ವ್ಯಕ್ತಿ... ಕೈಯಲ್ಲಿ 1000 ನೋಟು ಹಿಡಿದು ತನಗೆ ಬೇಕಾದ ಸಾಮಾನು ಒಂದೊಂದಾಗಿ ಹೇಳುತ್ತಿದ್ದ. ಈ ಸಲ ಸೀರಿಯಸ್ ಆಗಿ ಆಂಟಿ ಆತನು ಕೇಳಿದ ವಸ್ತುಗಳನ್ನು ಕೊಡುತ್ತಿದ್ದರು. ನನ್ನ ಲಿಸ್ಟ್ ಸಹ ದೊಡ್ಡದಾಗಿ ಇದ್ದ ಕಾರಣ ಕಾಯುತ್ತಿದ್ದೆ. ಆತನ ಸರಕು ಪ್ಯಾಕ್ ಆಯಿತು. ಬಿಲ್ 820/- ಆಗಿದೆ, ಹಣ ಕೊಡಿ ಎಂದು ಕೇಳಿದರು ಶಾಪ್ ಓನರ್...ಆಗ ಆತ ನೀವೇ ನನಗೆ 180/- ಕೊಡಬೇಕು, ನಾನು ನಿಮಗೆ 1000/- ಕೊಟ್ಟೆ ಎಂದು ಹೇಳಿದ. ನಾನು ಸಹ ಅದುವರೆಗೆ ಆತನ ಕೈಯಲ್ಲಿದ್ದ 1000/- ನೊಟು ನೋಡಿದ್ದೆ ಹಾಗಾಗಿ ಕೊಟ್ಟಿದ್ದಾನೇನೋ...ಆಂಟಿ ಮರೆತುಹೋಗಿದ್ದಾಳೆ ಎಂದುಕೊಂಡೆ.



ಅಷ್ಟರಲ್ಲೇ ಶಾಪ್ ಆಂಟಿ ಕೋಪದಿಂದ ಕೆರಳಿ...ಸಂಸ್ಕೃತ ಶುರುವಚ್ಚಿಕೊಂಡರು.. ಆ ವ್ಯಕ್ತಿ ಮೇಲೆ ನುಗ್ಗಿ ಬಂದರು. ಎಷ್ಟು ಸಲ ಮೋಸ ಮಾಡಬೇಕೆಂದು ನೋಡುತ್ತೀಯೋ....ನಿನ್ನದೇನು ಬುದ್ಧಿಯೋ...ಇದುವರೆಗೆ 10 ಸಲ ಈ ರೀತಿ ಮಾಡಿರುತ್ತೀಯ ಎಂದು ಕೆನ್ನೆಗೆ ಒಂದು ಬಾರಿಸಿದರು...ಇದೆಲ್ಲಾ ನೋಡುತ್ತಿದ್ದ ನಾನು ದಂಗಾದೆ! ಏನಾಯಿತು ಎಂದು ಕೇಳಿದ್ದಕ್ಕೆ. ಅವನ ಕೆಲಸವೇ ಅದಂತೆ...ಕೈಯಲ್ಲಿ ಹಣ ಇಟ್ಟುಕೊಂಡು ತೋರಿಸುತ್ತಾನೆ... ಬೇಕಾದ ವಸ್ತುಗಳನ್ನು ಹೇಳುತ್ತಾನೆ.. ನಾವು ಅವನ್ನು ಕೊಡುವ ಟೈಮ್‍ನಲ್ಲಿ ಆ ನೋಟನ್ನು ಜೇಬ್‌ನಲ್ಲಿ ಹಾಕಿಕೊಳ್ಳುತ್ತಾನೆ...ಕೊನೆಗೆ ನಿಮಗೆ ಕೊಟ್ಟೆ ಎನ್ನುತ್ತಾನೆ....ಗಿರಾಕಿಗಳ ತರಾತುರಿಯಲ್ಲಿರುವ ನಾವು...ಕೊಟ್ಟಿರುತ್ತಾನೆ ಬಿಡು ಎಂದುಕೊಳ್ಳುತ್ತೇವೆ.

ಈ ರೀತಿ ಪ್ರತಿ ಸಲ ಕೈಯಲ್ಲಿ ನೋಟು ಹಿಡಿದುಕೊಂಡು ತೋರಿಸುವುದು, ಕೊನೆಗೆ ಕೊಟ್ಟೆ ಎಂದು ಹೇಳುವುದು ಮಾಡುತ್ತಾನೆ. ಬೇಕಿದ್ದರೆ ನೋಡು ನನ್ನ ಗಲ್ಲಾಪೆಟ್ಟಿಗೆಯಲ್ಲಿ 1000/- ನೋಟೇ ಇಲ್ಲ...ಈತನೇನೋ ಕೊಟ್ಟೆ ಎಂದು ವಾದಿಸುತ್ತಿದ್ದಾನೆ ಎಂದರು. ಅಷ್ಟರಲ್ಲಿ ಆ ವ್ಯಕ್ತಿ ಅಲ್ಲಿಂದ ಪರಾರಿಯಾದ.

ಎಚ್ಚರಿಕೆಃ ಸಣ್ಣಪುಟ್ಟ ಅಂಗಡಿಗಳನ್ನು ನಿರ್ವಹಿಸುವವರು ಸ್ವಲ್ಪ ಎಚ್ಚರಿಕೆಯಿಂದ ಇರಿ...ಇಂತಹವರ ಕೈಲಿ ಮೋಸಹೋಗಬೇಡಿ.

No comments