Header Ads

test

ತಲೈವಾ ರಜನಿಕಾಂತ್ ಕಿರಿಯ ಪುತ್ರಿ ಸೌಂದರ್ಯ ಮದುವೆಯಲ್ಲಿ "ಅವರಿಬ್ಬರ ಬಳಿಕ ನೀನೇ!"

ತಲೈವಾ ರಜನಿಕಾಂತ್ ಕಿರಿಯ ಪುತ್ರಿ ಸೌಂದರ್ಯಾ ರಜನಿಕಾಂತ್, ಉದ್ಯಮಿ ವಿಶಾಗನ್ ಮದುವೆ ಅದ್ದೂರಿಯಾಗಿ ನೆರವೇರಿದ್ದು ಗೊತ್ತೇ ಇದೆ. ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಹಲವಾರು ಮಂದಿ ಗಣ್ಯರು ಆಗಮಿಸಿ ನೂತನ ದಂಪತಿಗಳನ್ನು ಆಶೀರ್ವದಿಸಿದರು.

ಮದುವೆ ಬಳಿಕ ಸೌಂದರ್ಯ ರಜನಿಕಾಂತ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಫೋಟೋಗಳು ನೆಟ್ಟಿಗರನ್ನು ಸಿಕ್ಕಾಪಟ್ಟೆ ಆಕರ್ಷಿಸುತ್ತಿವೆ. ಸಂಗೀತ ಕಾರ್ಯಕ್ರಮದ ಫೋಟೋಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಸೌಂದರ್ಯ... "ಮಾತಿನಲ್ಲಿ ಹೇಳಲಾಗದ ಸಂತೋಷ! ನನ್ನ ಜೀವನದ ಅತ್ಯಂತ ಮುಖ್ಯವಾದ ಮೂವರು ವ್ಯಕ್ತಿಗಳು... ಪ್ರೀತಿಯ ತಂದೆ, ನನ್ನ ಮುದ್ದಿನ ಮಗ, ಈಗ ನೀನು.. ನನ್ನ ವಿಶಾಗನ್" ಎಂದು ಬರೆದುಕೊಂಡಿದ್ದಾರೆ.

ಇದರ ಜತೆಗೆ #ಮಿಸ್ಟರ್ ಅಂಡ್ ಮಿಸಸ್, #ನಾವು ಒಂದಾದೆವು ಎಂಬ ಹ್ಯಾಶ್ ಟ್ಯಾಗ್‌ ಜತೆಗೆ ಪತಿ, ಮಗ, ತಂದೆಯೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.



ಖ್ಯಾತ ಡಿಸೈನರ್ ಅಬುಜಾನಿ ಸಂದೀಪ್ ಖೋಸ್ಲಾ ವಿನ್ಯಾಸಪಡಿಸಿರುವ ಸೀರೆಯನ್ನು ಸೌಂದರ್ಯ ಧರಿಸಿ ಕಂಗೊಳಿಸುತ್ತಿದ್ದರು. ಈ ಮದುವೆಗೆ ಸಿನಿಮಾ ಕ್ಷೇತ್ರದ ಗಣ್ಯರಾದ ಕಮಲ್ ಹಾಸನ್, ಅನಿರುಧ್ ರವಿಚಂದರ್, ಧನುಷ್, ರಾಘವ ಲಾರೆನ್ಸ್ ಸೇರಿದಂತೆ ರಾಜಕೀಯ ಗಣ್ಯರು ಆಗಮಿಸಿ ನೂತನ ವಧುವರರನ್ನು ಹರಸಿದರು. ಸೋಮವಾರ ಸಂಜೆ ವಿವಾಹ ಔತಣ ಏರ್ಪಡಿಸಲಾಗಿದೆ.

ಸೂಪರ್‌ ಸ್ಟಾರ್ ರಜನೀಕಾಂತ್ ಅವರ ಪುತ್ರಿ ಸೌಂದರ್ಯಾ ವಿವಾಹ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಅವರ ಸಂಪುಟ ಸಚಿವರು ಪಾಲ್ಗೊಂಡಿದ್ದರು. ಶುಕ್ರವಾರ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಚೆನ್ನೈ ನಿವಾಸದಲ್ಲಿ ಪ್ರೀ ವೆಡ್ಡಿಂಗ್ ರೆಸೆಪ್ಷನ್ ಅದ್ದೂರಿಯಾಗಿ ನಡೆದಿತ್ತು. ಚೆನ್ನೈನಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಈ ರಿಸೆಪ್ಷನ್ ನೆರವೇರಿದ್ದು ಗೊತ್ತೇ ಇದೆ. ಕುಟುಂಬಿಕರು, ಬಂಧುಮಿತ್ರರನ್ನು ಮಾತ್ರ ಈ ಆರತಕ್ಷತೆ ಕಾರ್ಯುಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು ಈಗ ವೈರಲ್ ಆಗುತ್ತಿವೆ.

ಉದ್ಯಮಿ ಅಶ್ವಿನ್ ಎಂಬುವರನ್ನು ಪ್ರೀತಿಸಿದ್ದ ಸೌಂದರ್ಯ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅಶ್ವಿನ್ ಜೊತೆಗೆ ಏಳು ವರ್ಷಗಳ ಕಾಲ ಜೀವನ ನಡೆಸಿದ್ದ ಅವರು, ಕಳೆದ ವರ್ಷವಷ್ಟೇ ವಿಚ್ಛೇದನ ಪಡೆದು ದೂರವಾಗಿದ್ದರು. ಅವರಿಗೆ ಐದು ವರ್ಷದ ಮಗ ವೇದ್ ಸಹ ಇದ್ದಾನೆ.

No comments