Header Ads

test

ಕೇಂದ್ರ ಸಚಿವರು ಮಾಧ್ಯಮಗಳ ಜತೆಗೆ ಗಂಭೀರವಾಗಿ ಮಾತನಾಡುತ್ತಿದ್ದರೆ ಹಿಂಬದಿಯಿಂದ ಈ ಹುಡುಗಿ ಏನುಮಾಡಿದಳು ಗೊತ್ತಾ..? ವೈರಲ್ ವೀಡಿಯೋ

ಕೇಂದ್ರ ಸಹಾಯಕ ಸಚಿವ ಜಯಂತ್ ಸಿನ್ಹಾ ಮಾಧ್ಯಮಗಳ ಜತೆಗೆ ಗಂಭೀರವಾಗಿ ಮಾತನಾಡುತ್ತಿದ್ದರೆ... ಓರ್ವ ಯುವತಿ ಮಾಡಿದ ತಮಾಷೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಧ್ಯಂತರ ಬಜೆಟನ್ನು ಮಂಡಿಸಿದ್ದು ಗೊತ್ತೇ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಮಂಡಿಸಿದ ಈ ಬಜೆಟ್ ರೈತರಿಗೆ, ನೌಕರ ವರ್ಗಕ್ಕೆ ವರದಾನವಾಗಿತ್ತು. ಆದರೆ ಬಜೆಟ್ ಅಧಿವೇಶನ ಮುಗಿದ ಬಳಿಕ ಜಯಂತ್ ಸಿನ್ಹಾ ಮಾಧ್ಯಮಗಳ ಜತೆಗೆ ಮಾತನಾಡುತ್ತಿದ್ದರು... ಆಗ ಒಂದು ತಮಾಷೆ ಘಟನೆ ನಡೆಯಿತು. ಅವರು ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಾ ಸರಕಾರಿ ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇರಬೇಕಾದರೆ... ಅವರ ಹಿಂದೆ ಇದ್ದ ಓರ್ವ ಹುಡುಗಿ ಕೀಟಲೆ ಮಾಡಿದ್ದಾರೆ. ಕ್ಯಾಮೆರಾ ನೋಡಿ ನಾಲಿಗೆಯನ್ನು ಹೊರ ಚಾಚಿ ಹಂಗಿಸಿದ್ದಾಳೆ.



ಆದರೆ ಆಕೆ ತಮಾಷೆಯಿಂದ ಮಾಡಿದ ಈ ಕೆಲಸ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ಹುಡುಗಿ ಬಜೆಟ್ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿದ್ದಾರೆಂದು, ಬಜೆಟನ್ನು ಸೂಪರ್ಬ್ ಎಂದು ರಿವ್ಯೂ ನೀಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು 2019ರ ಲೋಕಸಭೆ ಚುನಾವಣೆ ಬಳಿಕ ಭಾರತದ ಅಭಿವೃದ್ಧಿಗೆ ಯಾವ್ಯಾವ ಅಂಶಗಳು ಸಹಕಾರಿಯಾಗುತ್ತವೆ ಎಂಬ ಬಗ್ಗೆ ತಾಜಾ ಬಜೆಟ್ ಟ್ರೈಲರ್ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ... ಆದರೆ ವಿರೋಧ ಪಕ್ಷಗಳು ಮಾತ್ರ ಇದು ಚುನಾವಣೆ ಗಿಮ್ಮಿಕ್ ಎಂದಿವೆ.

ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಣ್ಣ ರೈತರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ವಾರ್ಷಿಕ 6 ಸಾವಿರ ರೂ. ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುವ ನಿರ್ಧಾರ ಮೋದಿ ಸರಕಾರಕ್ಕೆ ಮೊತ್ತೊಂದು ಗರಿ ತಂದುಕೊಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

watch video :

https://youtu.be/j-sN3ZK7FB4

''ರೈತರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ನೂತನ ಯೋಜನೆ ಬಗ್ಗೆ ಟೀಕೆ ಮಾಡಿರುವ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ, ತಮ್ಮದೇ ಪಕ್ಷದ 60 ವರ್ಷಗಳಿಂದ ಆಡಳಿತ ನಡೆಸಿದರೂ, ಇಂತಹ ಯೋಜನೆ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಪ್ರತಿ ದಿನಕ್ಕೆ 17 ರೂ. ರೈತರಿಗೆ ಸಂದಾಯವಾಗುತ್ತದೆ ಎಂಬ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ,'' ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

No comments