Header Ads

test

ಪದೇ ಪದೇ ಬ್ರೇಕಪ್ ಹೇಳುತ್ತಾ, ಹೊಸ ರಿಲೇಷನ್‌ಶಿಪ್ ಹುಡುಕುತ್ತಿದ್ದೀರಾ..? ಅದು ಒಳ್ಳೆಯದಲ್ಲವಂತೆ..!

ಲವರ್ಸ್ ಎಂಬ ಬಳಿಕ ಕೆಲವರು ಕೆಲವು ಸಂದರ್ಭಗಳಲ್ಲಿ ಬ್ರೇಕಪ್ ಆಗುತ್ತಿರುತ್ತಾರೆ. ಇನ್ನೂ ಕೆಲವರು ಬ್ರೇಕಪ್ ಆದರೂ ಮತ್ತೆ ಭೇಟಿಯಾಗುತ್ತಿರುತ್ತಾರೆ. ಇನ್ನೂ ಕೆಲವರಾದರೆ ಅದೇ ಕೆಲಸ ಎಂಬಂತೆ ಬ್ರೇಕಪ್ ಮಾಡಿಕೊಳ್ಳುತ್ತಾ, ಹೊಸಬರ ಜತೆಗೆ ಸಂಬಂಧಗಳಿಗಾಗಿ ಆಸಕ್ತಿಯಿಂದ ಎದುರು ನೋಡುತ್ತಿರುತ್ತಾರೆ. ಆದರೆ ಈ ರೀತಿ ಪದೇ ಪದೇ ಬ್ರೇಕಪ್ ಹೇಳಿಕೊಳ್ಳುವುದು, ಹೊಸಬರ ಜತೆಗೆ ರಿಲೇಷನ್‌ಶಿಪ್ ಮುಂದುವರೆಸುವುದು ಸಿನಿಮಾಗಳು, ಟಿವಿಗಳಲ್ಲಿ ತೋರಿಸಿದಷ್ಟು ಸುಲಭವಲ್ಲ. ಅದು ಜೀವನ. ಅಂತಹ ವ್ಯವಹಾರ ಶೈಲಿಯನ್ನು ತೆರೆಯ ಮೇಲೆ ನೋಡಲು ಚೆನ್ನಾಗಿಯೇ ಇರುತ್ತದೆ. ಆದರೆ ನಿಜ ಜೀವನಕ್ಕೆ ಬಂದರೆ ಆನ್-ಆಫ್ ರಿಲೇಷನ್‌ಶಿಪ್ ಪಾಲಿಸುವವರಿಗೆ ತೊಂದರೆ ತಪ್ಪಿದ್ದಲ್ಲ ಎಂದು ವೈದ್ಯರು, ತಜ್ಞರು ಎಚ್ಚರಿಸುತ್ತಿದ್ದಾರೆ.


ಪದೇ ಪದೇ ರಿಲೇಷನ್‍ಶಿಪ್ ಬ್ರೇಕಪ್ ಮಾಡಿಕೊಳ್ಳುತ್ತಾ, ಹೊಸಬರೊಂದಿಗೆ ರಿಲೇಷನ್‍ಶಿಪ್ ಹೆಚ್ಚಿಸಿಕೊಳ್ಳುವವರಿಗೆ ಹಲವು ಸಮಸ್ಯೆಗಳು ಬರುತ್ತವಂತೆ. ಪದೇ ಪದೇ ಪಾರ್ಟನರ್ ಜತೆಗೆ ಬ್ರೇಕಪ್ ಆಗುತ್ತಿರುವುದರಿಂದ ಅಂತಹರಲ್ಲಿ ನೆಗಟೀವ್ ಎಮೋಷನ್ಸ್ ಹೆಚ್ಚಾಗಿ ಇರುತ್ತವೆ. ಜೀವನದ ಬಗ್ಗೆ ಎಲ್ಲವೂ ನೆಗಟೀವ್ ಆಲೋಚನೆಗಳೇ ಬರುತ್ತಿರುತ್ತವೆ. ಇದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ತಲೆಯೆತ್ತುತ್ತವೆ. ಪದೇ ಪದೆ ಪಾರ್ಟನರ್ಸ್‌ನ್ನು ಬದಲಾಯಿಸುತ್ತಾ ಲವ್ ಮಾಡುವುದು, ಬ್ರೇಕಪ್ ಹೇಳಿಕೊಳ್ಳುವುದು ಮಾಡುತ್ತಿದ್ದರೆ... ಅಂತಹ ವ್ಯಕ್ತಿಗಳಿಗೆ ನಂಬಿಕೆ ಎಂಬುದೇ ಇಲ್ಲದಂತಾಗುತ್ತದಂತೆ. ಯಾರನ್ನೂ ಅಷ್ಟು ಸುಲಭವಾಗಿ ನಂಬಲ್ಲವಂತೆ. ಇದರ ಜತೆಗೆ ಅಂತಹವರಲ್ಲಿ ಆತ್ಮವಿಶ್ವಾಸ, ಆತ್ಮಗೌರವಕ್ಕೆ ಹೊಡೆತ ಬೀಳುತ್ತದೆ.

ಇನ್ನು ಆನ್-ಆಫ್ ರಿಲೇಷ‌ನ್‌ಶಿಪ್ ಪಾಲಿಸುವವರಿಗೆ ದೈಹಿಕ ಸಮಸ್ಯೆಗಳೂ ಬರುತ್ತಿರುತ್ತವಂತೆ. ಅವರು ತಮ್ಮ ಪಾರ್ಟನರ್‌ ಜತೆಗೆ ಪದೇಪದೇ ದೂರವಾಗುವುದರಿಂದ ಉಗುರು ಕಚ್ಚಿಕೊಳ್ಳುವುದು, ನಿದ್ರಾಹೀನತೆ, ಮೈಕೈ ನೋವು, ತಲೆನೋವು, ಅತಿಯಾಗಿ ನಿದ್ರಿಸುವುದು, ಉಗುಳುವುದು, ತಲೆಸುತ್ತುವುದು, ವಾಂತಿಯಂತಹ ಸಮಸ್ಯೆಗಳು ಬರುತ್ತವಂತೆ. ಇದರ ಜತೆಗೆ ಒತ್ತಡ, ಆಂತಕ ಸಹ ವಿಪರೀಪ  ಇರುತ್ತದಂತೆ. ಇವೆಲ್ಲವೂ ಕೆಲವು ಸಲ ಡಿಪ್ರೆಷನ್‌ಗೆ ದಾರಿ ಮಾಡಿಕೊಡುತ್ತವಂತೆ. ಅದೇ ರೀತಿ ಅಸ್ತವ್ಯಸ್ತವಾದ ಜೀವನ ವಿಧಾನದಿಂದ ಅನಾರೋಗ್ಯ ಸಮಸ್ಯೆಗಳು ಸಹ ಬರುತ್ತವಂತೆ. ಆದರೆ ಜೀವನ ಎಂದ ಬಳಿಕ ಅದೆಷ್ಟೊ ಸವಾಲುಗಳು ಎದುರಾಗುವುದು ಸಹಜ. ಆದರೆ ಈ ರೀತಿ ಆನ್-ಆಫ್ ರಿಲೇಷನ್‍ಶಿಪ್ ಪಾಲಿಸುವುದರಿಂದ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಅಂತಹ ರಿಲೇಷನ್‍ಶಿಪನ್ನು ನಿಲ್ಲಿಸಿದರೆ.. ಸಂತೋಷವಾಗಿ ಇರಬಹುದು ಎಂಬುದು ಮಾನಸಿಕ ವೈದ್ಯರ ಮಾತು...!

No comments