ಕೈಗಳಿಗೆ ಅಥವಾ ಕಾಲುಗಳಿಗೆ ಆರು ಬೆರಳುಗಳಿದ್ದರೆ ಅದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಏನನ್ನುತ್ತಾರೆಗೊತ್ತಾ..?
ನಮ್ಮಲ್ಲಿ ಕೆಲವು ಮಂದಿಗೆ ಕೈಗೆ ಅಥವಾ ಕಾಲಿಗೆ ಒಂದು ಬೆರಳು ಹೆಚ್ಚಾಗಿ ಇರುತ್ತದೆ ಎಂಬುದು ಗೊತ್ತಲ್ಲವೇ. ಹೆಬ್ಬೆರಳ ಬಳಿ ಅಥವಾ ಕಿರುಬೆರಳ ಬಳಿ ಒಂದು ಬೆರಳು ಹೆಚ್ಚಾಗಿ ಮೂಡಿರುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಏನೆಂದು ಕರೆಯುತ್ತಾರೆ ಗೊತ್ತಾ..? hexadactyly ಎನ್ನುತ್ತಾರೆ. ನಿಜವಾಗಿ ಇದನ್ನು ಜನನ ಲೋಪ ಎಂದು ಪರಿಗಣಿಸುತ್ತಾರೆ. hexadactyly ಎಂದರೆ ಆರು ಡಿಜಿಟ್ಗಳು ಎಂಬ ಅರ್ಥ ಬರುತ್ತದೆ. ಹಾಗಾಗಿ ಆರು ಬೆರಳು ಇರುವವರ ಪರಿಸ್ಥಿತಿಯನ್ನುhexadactyly ಎಂದು ಕರೆಯುತ್ತಾರೆ.
ಇನ್ನು ಕಿರುಬೆರಳ ಬಳಿ ಆರನೇ ಬೆರಳು ಬಂದರೆ ಅದನ್ನು ulnar hexadactyly ಎಂದು ಕರೆಯುತ್ತಾರೆ. ಅದೇ... ಹೆಬ್ಬೆರಳ ಬಳಿ ಹೆಚ್ಚು ಬೆರಳು ಬಂದರೆ ಅದನ್ನು radial hexadactyly ಎಂದು ಕರೆಯುತ್ತಾರೆ. ಈ ರೀತಿ ಅಲ್ಲದೆ ಕೆಲವು ಸಲ ಮಧ್ಯದ ಬೆರಳಿನ ಬಳಿ ಹೆಚ್ಚು ಬೆರಳು ಬರುತ್ತದೆ. ಅದನ್ನು intercalary hexadactyly ಎಂದು ಕರೆಯುತ್ತಾರೆ. ಆದರೆ ಸಾಮಾನ್ಯವಾಗಿ ಬಹಳಷ್ಟು ಮಂದಿಗೆ ಕಿರುಬೆರಳ ಬಳಿ ಇನ್ನೊಂದು ಬೆರಳು ಹೆಚ್ಚಾಗಿ ಇರುತ್ತದೆ. ಹೆಬ್ಬೆರಳ ಬಳಿ ಹೆಚ್ಚು ಬೆರಳು ಇರುವವರು ಬಹಳಷ್ಟು ಕಡಿಮೆ ಮಂದಿ ಇರುತ್ತಾರೆ. ಅದೇ ರೀತಿ ಮಧ್ಯದ ಬೆರಳ ಬಳಿ ಹೆಚ್ಚು ಬೆರಳು ಇರುವವರು ಇನ್ನೂ ಕಡಿಮೆ ಇರುತ್ತಾರೆ.
Post a Comment