ವಿಮಾನದಲ್ಲಿ ಬಾಯ್ಫ್ರೆಂಡ್ ಪ್ರಪೋಸಲ್ ಒಪ್ಪಿಕೊಂಡಳು ಆಕೆ... ಕೂಡಲೆ ಕೆಲಸ ಕಳೆದುಕೊಂಡಳು..!
ಯುವಕ ಯುವತಿ ಒಬ್ಬರಿಗೊಬ್ಬರು ಪ್ರೀತಿಸಿಕೊಂಡರೆ ಲವ್ ಪ್ರಪೋಸ್ ಮಾಡಿಕೊಳ್ಳುವುದು, ಆ ಬಳಿಕ ಮದುವೆ ಪ್ರಪೋಸ್ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಆ ಪ್ರಪೋಸ್ ಮಾಡಿಕೊಳ್ಳುವ ಸಂದರ್ಭ ಮಾತ್ರ ಅವರಿಗೆ ವಿಶೇಷವಾದದ್ದು. ಅದನ್ನು ಅವರು ಜೀವನದಲ್ಲಿ ಮರೆಯಲ್ಲ. ಆದರೆ ಎಲ್ಲರಿಗೂ ಅಂತಹ ಪ್ರಪೋಜಲ್ಸ್ ಮರೆಯಲಾಗದ, ಮಧುರಾನುಭವ ನೀಡುವ ರೀತಿಯಲ್ಲಿ ಇರುತ್ತವಾದರೂ... ಆ ಯುವತಿಗೆ ಮಾತ್ರ ಆ ರೀತಿ ನಡೆಯಲಿಲ್ಲ. ಅದೊಂದು ಕಹಿ ನೆನಪನ್ನು ಉಳಿಸಿತು. ಇಷ್ಟಕ್ಕೂ ಏನು ನಡೆಯಿತೆಂದರೆ.
ಈ ಘಟನೆ ಮೇ ತಿಂಗಳಲ್ಲಿ ನಡೆಯಿತು. ಆದರೆ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಚೀನಾ ಈಸ್ಟರ್ನ್ ಏರ್ಲೈನ್ಸ್ ಮೂಲದ ಒಂದು ವಿಮಾನದಲಿ ಕೆಲಸ ಮಾಡುವ ಒಬ್ಬಾಕೆಗೆ ಆಕೆಯ ಬಾಯ್ಫ್ರೆಂಡ್ ವಿಮಾನದಲ್ಲಿ ಪ್ರಪೋಸ್ ಮಾಡಿದ. ವಿಮಾನ ಟೇಕಾಫ್ ಆದ 30 ನಿಮಿಷಗಳ ಬಳಿಕ ವಿಮಾನದಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಆ ಯುವತಿ ಬಳಿಗೆ ಹೋದ ಆಕೆಯ ಬಾಯ್ಫ್ರೆಂಡ್ ಮೊಳಕಾಲ ಮೇಲೆ ನಿಂತು ಪ್ರಪೋಸ್ ಮಾಡಿದ. ಇದರಿಂದ ಯುವತಿಗೆ ಮೊದಲು ಶಾಕ್ ಆದರೂ, ತನ್ನ ಬಾಯ್ಫ್ರೆಂಡ್ ಮಾಡಿದ ಪ್ರಪೋಸಲ್ಗೆ ತನ್ನ ಅಂಗೀಕಾರ ತಿಳಿಸಿದರು. ಆದರೆ ಬಳಿಕ ತಾನು ಊಹಿಸದ ಶಾಕ್ ಆಕೆ ಎದುರಿಸಬೇಕಾಯಿತು.
ವಿಮಾನದಲ್ಲಿ ಕೆಲಸ ಮಾಡುತ್ತಿರುವ ಆ ಯುವತಿ ಕರ್ತವ್ಯ ಮರೆತು ಆ ರೀತಿ ಬಾಯ್ಫ್ರೆಂಡ್ನೊಂದಿಗೆ ಕಳೆದದ್ದು ಯಾಕೆ ಎಂದು ಪ್ರಶ್ನಿಸುತ್ತಾ ಆ ಏರ್ಲೈನ್ಸ್ ಸಂಸ್ಥೆ ಆಕೆಯನ್ನು ಉದ್ಯೋಗದಿಂದ ತೆಗೆಯಿತು. ಬಳಿಕ ಆಕೆ ಇದೇ ಸಂಗತಿಯನ್ನು ತಿಳಿಸುತ್ತಾ.. ವಿಮಾನದಲ್ಲಿ ತನ್ನ ಬಾಯ್ಫ್ರೆಂಡ್ ತನಗೆ ಪ್ರಪೋಸ್ ಮಾಡಿದಾಗ ಆತನಿಗೆ ಓಕೆ ಹೇಳಿ ಆತನ ಜತೆಗೆ ಇದ್ದ ಕಾರಣ ತನ್ನನ್ನು ಉದ್ಯೋಗದಿಂದ ತೆಗೆದದ್ದಾಗಿ ಆಕೆ ಒಂದು ಲೆಟರನ್ನು ಬಹಿರಂಗಗೊಳಿಸಿದರು. ಆದರೆ ಆ ಯುವಕ ಆ ರೀತಿ ಆಕೆಯನ್ನು ವಿಮಾನದಲ್ಲಿ ಪ್ರಪೋಸ್ ಮಾಡುತ್ತಿದ್ದಾಗ ಫೋನ್ನಲ್ಲಿ ತೆಗೆದಿರುವ ವಿಡಿಯೋ ಈಗ ನೆಟ್ನಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಆ ವೀಡಿಯೋ ವೈರಲ್ ಆಗಿದೆ. ಏನೇ ಆಗಲಿ.. ಲವ್ ಪ್ರಪೋಸಲ್ ಒಪ್ಪಿಕೊಂಡಿದ್ದಕ್ಕೆ ಆ ಯುವತಿ ಪಾಪ ಕೆಲಸ ಕಳೆದುಕೊಳ್ಳುವಂತಾಯಿತು. ನಿಜವಾಗಿ ಇದಕ್ಕಿಂತ ಕಹಿ ಘಟನೆ ಯಾರ ಜೀವನದಲ್ಲೂ ನಡೆಯಲ್ಲ ಅಲ್ಲವೇ...?
watch video :
https://youtu.be/8Nav9tBWPv4
Post a Comment