Header Ads

test

ನಾವು ಟೆಸ್ಟ್‌ಟ್ಯೂಬ್ ಬೇಬಿಗಳು: ಇಶಾ ಅಂಬಾನಿ

ಕಳೆದ ಕೆಲವು ದಿನಗಳಿಂದ ತನ್ನ ಮದುವೆ ವಿಶೇಷಗಳೊಂದಿಗೆ ಸುದ್ದಿಯಲ್ಲಿದ್ದ ಏಷ್ಯಾದ ಕುಬೇರ ಮುಕೇಶ್ ಅಂಬಾನಿ ಮುದ್ದಿನ ಮಗಳು ಇಷಾ ಅಂಬಾನಿ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಿಯತಕಾಲಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತನ್ನ ಬಗ್ಗೆ ಒಂದು ಕುತೂಹಲಕರವಾದ ಸಂಗತಿಯನ್ನು ಹೇಳಿದ್ದಾರೆ. "ನಮ್ಮ ತಂದೆತಾಯಿ ಮದುವೆಯಾಗಿ ಏಳು ವರ್ಷಕ್ಕೆ ನಾನು, ನನ್ನ ಸಹೋದರ ಆಕಾಶ್ ಜನಿಸಿದೆವು. ನಾವಿಬ್ಬರೂ ಐವಿಎಫ್ (ಇನ್‍ವಿಟ್ರೋ ಫೆರ್ಟಿಲೈಜೇಷನ್ - ಟೆಸ್ಟ್ ಟ್ಯೂಬ್ ಬೇಬಿ) ಪದ್ಧತಿ ಮೂಲಕ ಜನಿಸಿದೆವು. ನಮಗೆ ಐದು ವರ್ಷಗಳಾಗುವವರೆಗೂ ನಮ್ಮ ತಾಯಿ ಸಂಪೂರ್ಣ ಸಮಯವನ್ನು ನಮಗಾಗಿಯೇ ಮೀಸಲಿಟ್ಟಿದ್ದರು. ಆದರೆ ಆಕೆ ತುಂಬಾ ಸ್ಟ್ರಿಕ್ಟ್ ಆಗಿ ಇರುತ್ತಿದ್ದರು. ನಮ್ಮನ್ನೂ ಅಷ್ಟೇ ಸ್ಟ್ರಿಕ್ಟ್ ಆಗಿ ಬೆಳೆಸಿದ್ದಾರೆ" ಎಂದಿದ್ದಾರೆ ಇಶಾ ಅಂಬಾನಿ.


ಹಣದ ಬೆಲೆ ಚೆನ್ನಾಗಿ ಗೊತ್ತು
"ನನ್ನ ಕನಸನ್ನು ನೆರವೇರಿಸಿಕೊಳ್ಳಲು, ರಿಲಯನ್ಸ್‌‍ನ್ನು ಸಾಟಿಯಿಲ್ಲದ ಕಂಪೆನಿಯಾಗಿ ಬೆಳೆಸಲು ಅಪ್ಪ ಪಟ್ಟ ಕಷ್ಟವನ್ನು ನೋಡುತ್ತಾ ಬೆಳೆದಿದ್ದೇನೆ. ಎಷ್ಟೇ ಬಿಝಿಯಾಗಿದ್ದರೂ ಅವರಿಗೆ ನಮ್ಮ ಅಗತ್ಯ ಇದೆ ಎನ್ನಿಸಿದರೆ ಮಾತ್ರ ನಮ್ಮ ಬಳಿಯೇ ಇರುತ್ತಿದ್ದರು. ನಮ್ಮ ತಂದೆ ತಾಯಿ ಎಂತಹ ಪರಿಸ್ಥಿತಿಯಲ್ಲಿ ಬೆಳೆದು ಬಂದರೋ ನಮ್ಮನ್ನು ಸಹ ಹಾಗೆಯೇ ಬೆಳೆಸಿದರು. ಅವರ ಬೆಳೆಸಿದ ರೀತಿಯಿಂದಲೇ ಶಿಸ್ತುಬದ್ಧ ಜೀವನ, ವಿನಯ ವಿಧೇಯತೆ ಅಭ್ಯಾಸವಾಯಿತು. ಹಣದ ಬೆಲೆ ನಮಗೂ ಚೆನ್ನಾಗಿ ಗೊತ್ತು" ಎಂದು ಜಿಯೋ ಸೃಷ್ಟಿಕರ್ತೆಯಾಗಿರುವ ಇಶಾ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 12ರಂದು ಇಶಾ ಅಂಬಾನಿ- ಪಿರಾಮಲ್ ಗ್ರೂಪ್ ವಾರಸುದಾರ ಆನಂದ್ ಪಿರಾಮಲ್ ವಿವಾಹ ಅತ್ಯಂತ ಅದ್ದೂರಿಯಾಗಿ ನಡೆಯಿತು. ಮುಂಬೈನ ಅಂಬಾನಿ ನಿವಾಸ ಅಂಟಿಲಿಯದಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಅಮೆರಿಕ ಮಾಜಿ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಸೇರಿದಂತೆ ಹಲವಾರು ಮಂದಿ ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾ ಗಣ್ಯರು ಹಾಜರಾಗಿ ನೂತನ ದಂಪತಿಗಳನ್ನು ಆಶೀರ್ವದಿಸಿದರು.

ಅದೇನೇ ಇರಲಿ ಇಷ್ಟೆಲ್ಲಾ ಹಣ, ಅಂತಸ್ತು, ಐಶ್ವರ್ಯಾ, ಶ್ರೀಮಂತಿಕೆ ಎಲ್ಲವೂ ಇದ್ದರೂ ಇಶಾ ಅಂಬಾನಿ ಮಾತ್ರ ಇಷ್ಟೆಲ್ಲಾ ಸರಳ ಎಂಬುದು ಇದರಿಂದ ಸಾಬೀತಾಗಿದೆ. ಹಣ ಇದ್ದರೆ ಸಾಲಲ್ಲ ಅದರ ಜತೆಗೆ ಸಂಸ್ಕಾರವೂ ಮುಖ್ಯ ಅಲ್ಲವೇ..?

No comments