Header Ads

test

ಒಬ್ಬೊಬ್ಬನನ್ನು ಸುಟ್ಟು ಬಿಸಾಕಿ... ಪ್ರಧಾನಿಗೆ ಹತ್ತು ವರ್ಷದ ಬಾಲಕಿ ಪತ್ರ. ವೈರಲ್

ಪುಲ್ವಾಮಾ ಉಗ್ರ ದಾಳಿ ಬಗ್ಗೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿತ್ತು. ಪಾಕಿಸ್ತಾನದ ವಿರುದ್ಧ ಐಎಎಫ್ - ಭಾರತೀಯ ವಾಯುಪಡೆ ಪ್ರತೀಕಾರ ತೀರಿಸಿಕೊಂಡಾಗಿದೆ. ಪಾಕಿಸ್ತಾನದಲ್ಲಿನ ಬಾಲಾಕೋಟ್‌ನಲ್ಲಿನ ಉಗ್ರ ನೆಲೆಗಳನ್ನು ಸರ್ವನಾಶ ಮಾಡಿತು. ಇದೆಲ್ಲಾ ಆಗುವ ಮುನ್ನವೇ ಪಾಕಿಸ್ತಾನದ ವಿರುದ್ದ ಭಾರತ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಹತ್ತು ವರ್ಷದ ಬಾಲಕಿ ಬರೆದಿರುವ ಪತ್ರ ಇದೀಗ ವೈರಲ್ ಆಗಿದೆ.


ಗುಜರಾತ್‌ನ ಸೂರತ್ ಜಿಲ್ಲೆ ಪೂನಾ ಮೂಲದ ಮನಾಲಿ ಎಂಬ ಬಾಲಕಿ ನೇರವಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ದಾಳಿಗೆ ಕಾರಣರಾದವರನ್ನು ಸುಟ್ಟು ಬಿಸಾಕಬೇಕು, ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನಾಲ್ಕನೇ ಕ್ಲಾಸ್ ಓದುತ್ತಿರುವ ಈ ಹುಡುಗಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಈಗ ಈ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ದಾಳಿ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಹೋಮ್ ವರ್ಕ್ ಮಾಡುತ್ತಾ ಇದ್ದ ಮನಾಲಿ... ಟಿವಿಯಲ್ಲಿ ಬಂದ ಸುದ್ದಿ ನೋಡಿ ತುಂಬಾ ವ್ಯಥೆ ಪಟ್ಟಿದ್ದಾಳೆ. ಪ್ರಧಾನ ಮಂತ್ರಿ ಜತೆಗೆ ಮಾತನಾಡಬಹುದೇ ಎಂದು ತನ್ನ ತಾಯಿಯನ್ನು ಕೇಳಿದ್ದಾಳೆ. ಮಾತನಾಡುವುದು ಕಷ್ಟ ಆದರೆ ಪತ್ರ ಬರೆಯಬಹುದು ಎಂದು ಆ ತಾಯಿ ಸೂಚಿಸಿದ್ದರು. ಹಾಗಾಗಿ ಹಿಂದಿಯಲ್ಲಿ ಆ ಬಾಲಕಿ ಒಂದು ಪತ್ರ ಬರೆದು ಪ್ರಧಾನಿಗೆ ಕಳುಹಿಸಿದ್ದಾರೆ. ಅಂತಹವರನ್ನು ಸಾಯಿಸುವುದು ಪಾಪ ಅಲ್ಲ ಎಂದು ಭಗವದ್ಗೀತೆಯಲ್ಲಿ ಇದೆ ಎಂದು ಆ ಬಾಲಕಿ ಹೇಳಿರುವುದು ವಿಶೇಷ.

ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ದಿನ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 40 ಸಿಆರ್‌‍ಪಿಎಫ್ ಸೈನಿಕರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರ ವಿರುದ್ಧ ಕಠಿಣ ಸಮರ ಸಾರಲು ದೇಶಾದ್ಯಂತ ಒತ್ತಡ ಹೆಚ್ಚಾಗಿತ್ತು.

ದುರುಳ ಪಾಕಿಸ್ತಾನಕ್ಕೆ ಮರೆಯಲಾಗದ ಪಾಠ ಕಲಿಸಬೇಕೆಂಬ ಆಗ್ರಹ ಬಲವಾಗಿ ಕೇಳಿಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ 'ಜನತೆಯ ಭಾವನೆಗಳು ಅರ್ಥವಾಗುತ್ತವೆ; ಪ್ರತೀಕಾರದ ಸಂಪೂರ್ಣ ಸ್ವಾತಂತ್ರ್ಯವನ್ನು ಸೇನಾಪಡೆಗೆ ನೀಡಲಾಗಿದೆ' ಎಂದು ಘೋಷಿಸಿದ್ದರು. ಕಡೆಗೂ ಭಾರತ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ. ಬಾಲಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ 2 ಮೂಲಕ ಅಲ್ಲಿದ್ದ ಉಗ್ರ ನೆಲೆಗಳನ್ನು ಸರ್ವನಾಶ ಮಾಡಿದೆ. ಈ ಬಾಂಬ್ ದಾಳಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಉಗ್ರರು ಫಿನಿಶ್ ಆಗಿದ್ದಾರೆ ಎಂದಿವೆ ಮೂಲಗಳು.

No comments