Header Ads

test

ಫೋನ್ ಲಾಕ್ ಪಿನ್/ಪ್ಯಾಟ್ರನ್ ಮರೆತು ಹೋಗಿದ್ದೀರಾ? ಆದರೆ ಈ ರೀತಿ ಸಿಂಪಲ್‌ ಆಗಿ "UNLOCK" ಮಾಡಬಹುದುಗೊತ್ತಾ? ಟ್ರೈ ಮಾಡಿ!

ಕೈಯಲ್ಲಿ ಸ್ಮಾರ್ಟ್‍ಫೋನ್ ಇರುವುದು ಎಷ್ಟು ಸಹಜವೋ, ಆ ಸ್ಮಾರ್ಟ್‍ಫೋನ್‌ಗೆ ಲಾಕ್ ಇಟ್ಟುಕೊಳ್ಳುವುದು ಸಹ ಅಷ್ಟೇ ಸಹಜ.. ಅದು ಕೆಲವರಿಗೆ ಕೆಲವು ಅಗತ್ಯಗಳಿಗೆ ತಕ್ಕಂತೆ ಇನ್ನೂ ಕೆಲವರು ಸೆಕ್ಯುರಿಟಿಗಾಗಿ ನಮ್ಮ ಸ್ಮಾರ್ಟ್‍ಫೋನ್‌ಗೆ ಲಾಕ್ ಹಾಕಿಕೊಳ್ಳುತ್ತೇವೆ. ನಿತ್ಯ ಬಳಸುವ ಮೊಬೈಲೇ ಆದರೂ ಆಗಾಗ ಸಹಜವಾಗಿ ನಮ್ಮ ಫೋನ್ ಲಾಕ್ ಪ್ಯಾಟ್ರನ್ ಮರೆಯುತ್ತಿರುತ್ತೇವೆ. ಒಮ್ಮೊಮ್ಮೆ ಕೆಲವು ಪ್ರಯತ್ನಗಳ ಬಳಿಕ ಅನ್ ಲಾಕ್ ಆಗುತ್ತದಾದರೂ, ಕೆಲವು ಸಲ ಎಷ್ಟೇ ಪ್ರಯತ್ನಿಸಿದರೂ ಆ ಪ್ಯಾಟ್ರನ್ ಏನೆಂದು ನೆನಪಾಗಲ್ಲ. ಆಗ ಫೋನ್ ಅನ್‌ಲಾಕ್ ಮಾಡಲು ಒಂದೇ ದಾರಿ ಎಂದು ಮೊಬೈಲ್ ಶಾಪ್‌ಗೆ ತೆಗೆದುಕೊಂಡು ಹೋಗುತ್ತೇವೆ. ಆ ರೀತಿ ಅಲ್ಲದೆ ಮೊಬೈಲ್ ಅನ್ ಲಾಕ್ ಮಾಡುವ ಪದ್ಧತಿ ತಿಳಿದುಕೊಂಡರೆ ಈ ಸಲ ಸಿಂಪಲ್ ಆಗಿ ಮರೆತು ಹೋದರೂ ನಮ್ಮ ಅನ್ ಲಾಕ್ ಪ್ಯಾಟ್ರನ್ ಜ್ಞಾಪಕ್ಕೆ ಬರದಿದ್ದರೂ ಸುಲಭವಾಗಿ ಲಾಕ್ ತೆಗೆಯಬಹುದು.. ಅದು ಏನೆಂದು ಗೊತ್ತಾ..?

ಪ್ಯಾಟ್ರನ್, ಪಿನ್ ಲಾಕ್‌ಗಳನ್ನು ರೀಸೆಟ್ ಮಾಡಲು ವಂಡರ್‌ಶೇರ್ ಆಂಡ್ರಾಯ್ಡ್ ಪ್ಯಾಟ್ರನ್ ಲಾಕ್ ರಿಮೂವ್ ಎಂಬ ಒಂದು ಸಾಫ್ಟ್ ವೇರ್ ಲಭಿಸುತ್ತದೆ. ಆದರೆ ಇದು ಪೇಯ್ಡ್ ಸಾಫ್ಟ್‌ವೇರ್. ಇದನ್ನು ಕಂಪ್ಯೂಟರ್‌ಗೆ ಡೌನ್‍ಲೋಡ್ ಮಾಡಿಕೊಂಡು, ನಿಮ್ಮ ಫೋನನ್ನು ಪಿಸಿಗೆ ಕನೆಕ್ಟ್ ಮಾಡಿ ಸ್ಕ್ರೀನ್ ಮೇಲೆ ಕಾಣಿಸುವ ಆದೇಶಗಳಿಗೆ ತಕ್ಕಂತೆ ಮಾಡಿದರೆ ಪ್ಯಾಟ್ರನ್ ಲಾಕ್ ಅಳಿಸಿ ಹೋಗುತ್ತದೆ.


ಈ ಸಾಫ್ಟ್‌ವೇರ್‌‍ನಿಂದ ಫೋನ್ ಓಪನ್ ಆಗದಿದ್ದರೆ ಅದಕ್ಕೆ ಇನ್ನೊಂದು ಮಾರ್ಗವಿದೆ.. ಅದೇ ಫೋನನ್ನು ರೀಸೆಟ್ ಮಾಡುವುದು. ಅದು ಹೇಗೆಂದರೆ... ಫೋನ್ ಮೇಲೆ ಕಾಣಿಸುವ ವಾಲ್ಯೂಮ್, ಹೋಮ್ ಪವರ್ ಬಟನ್‌ಗಳನ್ನು ಒಮ್ಮೆಲೆ ಪ್ರೆಸ್ ಮಾಡುವ ಮೂಲಕ ರಿಕವರಿ ಮೋಡ್‌ಗೆ ಹೋಗಿ ಫ್ಯಾಕ್ಟರಿ ರೀಸೆಟ್ ಮಾಡಲು ಕೇಳುತ್ತದೆ... ಆದರೆ ಈ ರೀತಿ ಫ್ಯಾಕ್ಟರಿ ರೀಸೆಟ್ ಮಾಡುವಾಗ ಫೋನಿನ ಇಂಟರ್‌ನಲ್ ಸ್ಟೋರೇಜ್‌ನಲ್ಲಿನ ಡಾಟಾ ಎಲ್ಲವೂ ಡಿಲೀಟ್ ಆಗುತ್ತದೆ. ಮೆಮೊರಿ ಕಾರ್ಡ್ ಡಾಟಾಗೆ ಯಾವುದೇ ಹಾನಿಯಾಗಲ್ಲ. ಹಾಗಾಗಿ ಈ ಎರಡು ಟ್ರಿಕ್ಸ್‌ನಿಂದ ಪ್ಯಾಟ್ರನ್ ಮರೆತು ಹೋದರೆ ಸರಳವಾಗಿ ಈ ರೀತಿ ಅನ್‍ ಲಾಕ್ ಮಾಡಿಕೊಳ್ಳಿ. ಈಗ ತಿಳಿಯಿತಲ್ಲವೇ ಈ ಸರಳ ಟ್ರಿಕ್.. ಇನ್ನೇಕೆ ತಡ ನಿಮ್ಮ ಫೋನ್ ಲಾಕ್ ಆಗಿದ್ದರೆ ಈ ರೀತಿ ಮಾಡಿ ಅನ್ ಲಾಕ್ ಮಾಡಿಕೊಳ್ಳಿ...

No comments