Header Ads

test

ಗರ್ಭವನ್ನು ತೆರೆದು ಭ್ರೂಣಕ್ಕೆ ಆಪರೇಷನ್.. ಬೆನ್ನು ಹುರಿಯ ರಂಧ್ರವನ್ನು ಮುಚ್ಚಿದ ವೈದ್ಯರು

ಐದು ತಿಂಗಳ ಭ್ರೂಣ. ಇನ್ನೂ ಕಣ್ಣು ಹುಬ್ಬುಗಳು ಬೆಳೆಯುತ್ತಿವೆ. ತಲೆ ಬುರುಡೆ, ಬೆನ್ನು ಹುರಿ ಇನ್ನೂ ಗಟ್ಟಿಯಾಗುತ್ತಿದೆ. ಗಂಡನ ಜತೆಗೆ ರೆಗ್ಯುಲರ್ ಆಗಿ ಚೆಕಪ್‌ಗಾಗಿ ವೈದ್ಯರ ಬಳಿಗೆ ಹೋದರು ಬೆಥನ್ ಸಿಂಪ್ಸನ್. ಮಗುವಿನ ಬೆನ್ನು ಮೂಳೆ ಬೆಳೆಯುತ್ತಿಲ್ಲ, ಅದರಲ್ಲಿ ಚಿಕ್ಕ ಹೋಲ್ (ಸ್ಪೈನಾ ಬೈ ಫೈಡಾ) ಉಂಟಾಗಿರುವುದೇ ಇದಕ್ಕ ಕಾರಣ ಎಂದು ವೈದ್ಯರು ಹೇಳಿದರು.


ಹುಟ್ಟಲಿರುವ ಮಗು ಲೋಪದಿಂದ ಜನಿಸುತ್ತಿದೆ ಎಂದರು. ಅಬಾರ್ಷನ್ ಮಾಡಿಸಿಕೊಳ್ಳುವುದು ಉತ್ತಮ ಎಂಬ ಸಲಹೆ ನೀಡಿದರು ವೈದ್ಯರು. ಸಿಂಪ್ಸನ್ ಹೃದಯ ಹೊಡೆದು ಹೋಗುವಂತಾಯಿತು. ಕರುಳಿನ ಕುಡಿಯನ್ನು ಸಾಯಿಸಿಕೊಳ್ಳದೆ ಮಗುವಿಗೆ ಜನ್ಮ ನೀಡುತ್ತೇನೆ ಎಂದು ದಿಟ್ಟ ನಿರ್ಧಾರ ಹೇಳಿದಳು. ಹಾಗಾಗಿ ಹೊಸದಾಗಿ ಲಭ್ಯವಿರುವ ಫೀಟಸ್ ರಿಪೇರ್ ಎಂಬ ಟೆಕ್ನಿಕ್‍ನಿಂದ ಮಗುವಿನ ಬೆನ್ನು ಹುರಿಯನ್ನು ಸರಿ ಪಡಿಸಬಹುದು, ಆದರೆ ಇದರಿಂದ ತಾಯಿ ಮಗು ಜೀವಕ್ಕೇ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು. ಅದಕ್ಕೂ ತಾಯಿ ಸಿದ್ಧವಾದರು.

ಲಂಡನ್‌ನಲ್ಲಿನ ಗ್ರೇಟ್ ಆರ್ಮಂಡ್ ಸ್ಟ್ರೀಟ್ ಆಸ್ಪತ್ರೆಗೆ ದಾಖಲಾದರು. ಭ್ರೂಣಕ್ಕೆ ಆರು ತಿಂಗಳು ಆಗುವವರೆಗೂ ಎದುರು ನೋಡಿದ ವೈದ್ಯರು ಮಂಗಳವಾರ 4 ಗಂಟೆಗೂ ಅಧಿಕ ಸಮಯ ಶಸ್ತ್ರಚಿಕಿತ್ಸೆ ಮಾಡಿದರು. ಗರ್ಭವನ್ನು ತೆರೆದು ಭ್ರೂಣದಲ್ಲಿರುವ ಮಗುವಿನ ಬೆನ್ನುಹುರಿಯಲ್ಲಿ ಉಂಟಾಗಿರುವ ರಂಧ್ರವನ್ನು ಮುಚ್ಚಿದರು. ಆಪರೇಷನ್ ಸಕ್ಸಸ್ ಆಯಿತು. ತಾಯಿ ಮನಸ್ಸು ತುಂಬಿ ಬಂತು.

ಆಸ್ಪತ್ರೆಯಲ್ಲಿ ಆನಂದವೋ ಆನಂದ. ಬರಲಿರುವ ಜೂನ್ ತಿಂಗಳಲ್ಲಿ ಸಿಂಪ್ಸನ್‌ಗೆ ಡೆಲಿವರಿ ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಯುಕೆಯಲ್ಲಿ ಪ್ರತಿ ವರ್ಷ 200 ಮಂದಿ ಮಕ್ಕಳು ಈ ಸಮಸ್ಯೆಯಿಂದ (ಸ್ಪೈನಾ ಬೈಫೈಡಾ) ಜನಿಸುತ್ತಿದ್ದಾರೆ. ಇದರಿಂದ ಮಕ್ಕಳನ್ನು ಕಾಪಾಡಿಕೊಳ್ಳಲು ಫೀಟಸ್ ರಿಪೇರ್ ಟೆಕ್ನಿಕ್ ಕಂಡುಕೊಂಡರು.

ಇದುವರೆಗೂ ಮೂರು ಮಹಿಳೆಯರು ಈ ಸರ್ಜರಿ ಮಾಡಿಕೊಂಡಿದ್ದಾರೆ. ಸಿಂಪ್ಸನ್ ನಾಲ್ಕನೇ ಮಹಿಳೆ ಎಂಬುದು ವಿಶೇಷ. ಅಬ್ಬಬ್ಬಾ ವೈದ್ಯಕೀಯ ಶಾಸ್ತ್ರ ಅದೆಷ್ಟು ಮುಂದುವರೆದಿದೆ ನೋಡಿ. ಇನ್ನೂ ಈ ಜಗತ್ತಿಗೇ ಅಡಿಯಿಡ ಮಗುವಿಗೆ ಶಸ್ತ್ರಚಿಕಿತ್ಸೆ ಎಂದರೆ ಏನು? ಅದೂ ಭ್ರೂಣದಲ್ಲೇ ಅತ್ಯಂತ ಕ್ಲಿಷ್ಟಕರವಾದ ಬೆನ್ನುಹುರಿ ಶಸ್ತ್ರಚಿಕಿತ್ಸೆ ಎಂದರೆ ಅದೆಷ್ಟು ಕಷ್ಟ ಸಾಧ್ಯ ಅಲ್ಲವೇ?

No comments