Header Ads

test

ರೈಲು ಇಂಜಿನ್‌ಗೆ ಎಷ್ಟು ಗೇರ್ ಇರುತ್ತವೆ? ಟ್ರೈನ್ ಲೀಟರ್ ಡೀಸೆಲ್‌ಗೆ ಎಷ್ಟು ಕಿ.ಮೀ ಮೈಲೇಜ್ ಕೊಡುತ್ತದೆಗೊತ್ತಾ? ಗೊತ್ತಾದರೆ ಶಾಕ್ ಆಗುತ್ತೀರ..!

ರೈಲು ಇದು ಕಾಮನ್ ಮ್ಯಾನ್ ಟ್ರಾನ್ಸ್‌ಪೋರ್ಟ್. ಜನ ಸಾಮಾನ್ಯರು ತಮ್ಮ ಪ್ರಯಾಣಕ್ಕಾಗಿ ರೈಲನ್ನೇ ನಂಬಿಕೊಳ್ಳುತ್ತಾರೆ. ಪ್ಯಾಸೆಂಜರ್, ಎಕ್ಸ್‌ಪ್ರೆಸ್, ಸೂಪರ್ ಎಕ್ಸ್‌ಪ್ರೆಸ್, ಲೋಕಲ್... ಹೀಗೆ ವಿವಿಧ ರೀತಿಯ ರೈಲುಗಳನ್ನು ಭಾರತೀಯ ರೈಲ್ವೆ ಇಲಾಖೆ ನಡೆಸುತ್ತಿದೆ. ನಮ್ಮ ದೇಶದಲ್ಲಿ ಪ್ರತಿ ದಿನ 19 ಸಾವಿರ ರೈಲುಗಳು ಸಂಚರಿಸುತ್ತಿರುತ್ತವೆ. ಇವು 2 ಕೋಟಿ 30 ಲಕ್ಷ ಮಂದಿಯನ್ನು ತಮ್ಮ ತಮ್ಮ ಗಮ್ಯ ಸ್ಥಾನಕ್ಕೆ ತಲುಪಿಸುತ್ತಿರುತ್ತವೆ. ಜಗತ್ತಿನಲ್ಲೇ 5ನೇ ಅತಿದೊಡ್ಡ ರೈಲ್ವೆ ವ್ಯವಸ್ಥೆಯನ್ನು ಹೊಂದಿರುವ ದೇಶ ನಮ್ಮದು. ಸುಮಾರು 63 ಸಾವಿರ ಕಿ.ಮೀ ರೈಲು ಹೆದ್ದಾರಿ ನಮ್ಮ ದೇಶದಲ್ಲಿದೆ. ಈಗ ರೈಲಿನ ಕುರಿತ ಕೆಲವು ಆಸಕ್ತಿಕರವಾದ ಸಂಗತಿಗಳನ್ನು ತಿಳಿದುಕೊಳ್ಳೋಣ.


ನಮ್ಮ ದೇಶದಲ್ಲಿ ಸದ್ಯಕ್ಕೆ ಎಲೆಕ್ಟ್ರಿಕಲ್ ಮತ್ತು ಡೀಸೆಲ್ ಎಂಜಿನ್‍ಗಳನ್ನು ಓಡಿಸಲಾಗುತ್ತಿದೆ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಕಲ್ಲಿದ್ದಲಿನಿಂದ ಓಡುವ ರೈಲುಗಳಿದ್ದವು. ಮಾಲಿನ್ಯದ ಕಾರಣ ಅವನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದರು. ಪ್ಯಾಸೆಂಜರ್‌ಗಳನ್ನು ಕರೆದೊಯ್ಯುವಂತಹವು ಇಎಂಡಿ ಜಿಟಿ 46 ಪಿಎಸಿ ಮಾಡೆಲ್. ಅದೇ ಪ್ರೈಟನ್ನು ಕೊಂಡೊಯ್ಯುವುದು ಇಎಂಡಿ ಜಿಟಿ 46 ಎಂಎಸಿ ಮಾಡೆಲ್. ಸದ್ಯಕ್ಕೆ ನಮ್ಮ ದೇಶದಲ್ಲಿ ಡೀಸೆಲ್ ಎಂಜಿನ್‌ಗಳನ್ನು ವಾರಣಾಸಿಯಲ್ಲಿನ ಲೋಕೋ ಪೈಲಟ್ ಪ್ಲಾಂಟ್‍ನಲ್ಲಿ ತಯಾರಿಸಲಾಗುತ್ತಿದೆ. ಎಲೆಕ್ಟ್ರಿಕ್ ಲೋಕೋ ಮೋಟೀವ್‍ಗಳನ್ನು ಚಿತ್ತರಂಜನ್ ಲೋಕೋಮೋಟೀವ್ ವರ್ಕ್ಸ್ ತಯಾರಿಸುತ್ತಿದೆ.ಇದುವರೆಗೂ ಸುಮಾರು 2500ಕ್ಕೂ ಹೆಚ್ಚು ಇಂಜಿನ್‌ಗಳನ್ನು ಇಲ್ಲಿ ತಯಾರಿಸಲಾಗಿದೆ.

ಇನ್ನು ಮುಖ್ಯವಾಗಿ ಮೈಲೇಜಿ ವಿಚಾರಕ್ಕೆ ಬಂದರೆ... ಪ್ಯಾಸೆಂಜರ್ ರೈಲು ಕಿ.ಮೀಗೆ ನಾಲ್ಕು ಲೀಟರ್ ಡೀಸೆಲ್ ಬಳಸುತ್ತದೆ. ಅದೇ ರೀತಿ ಪ್ರೈಟ್‌ಗಳಿಗೆ ತೂಕವನ್ನು ಅವಲಂಭಿಸಿ ಕಿ.ಮೀಟರ್‌ಗೆ 10 ರಿಂದ 25 ಲೀಟರ್ ಡೀಸೆಲ್ ಬೇಕಾಗುತ್ತದೆ.

ಇನ್ನು ಖರ್ಚಿನ ವಿಚಾರಕ್ಕೆ ಬಂದರೆ ಡ್ಯುಯಲ್ ಇಂಜಿನ್ ಲೋಕೋಮೋಟೀವ್ ಎಂಜಿನ್ ತಯಾರಿಸಲು 18 ಕೋಟಿ ರೂಪಾಯಿ ಖರ್ಚಾಗುತ್ತದೆ. ಹೌದು ನೀವು ಕೇಳಿದ್ದು ನಿಜ. ಅದೇ 4500 ಎಚ್‍ಪಿ ಪವರ್ ಇರುವ ಡೀಸೆಲ್ ಇಂಜಿನ್ ತಯಾರಿಸಲು 13 ಕೋಟಿ ರೂಪಾಯಿ ಖರ್ಚಾಗುತ್ತದೆ. ಆದರೆ ಇದು ಕೇವಲ ಇಂಜಿನ್ ರೇಟ್ ಎಂಬುದನ್ನು ಮಾತ್ರ ನೆನಪಿನಲ್ಲಿಡಬೇಕು. ಒಂದೊಂದು ಬೋಗಿ ತಯಾರಿಸಲು ಬೇರೆ ಬೇರೆ ರೀತಿ ಖರ್ಚಾಗುತ್ತದೆ ಎಂಬುದನ್ನು ಗಮನಿಸಬೇಕು.

ಇನ್ನು ಇಂಜಿನ್ ತೂಕದ ವಿಚಾರಕ್ಕೆ ಬಂದರೆ ಒಂದು ಲೋಕೋ ಇಂಜಿನ್ ತೂಕ 112800 ಕೆಜಿ ತೂಗುತ್ತದೆ. ಒಂದೊಂದು ಲೋಕೋ ಇಂಜಿನ್ ಕೆಪಾಸಿಟಿ 5 ಸಾವಿರ ಲೀಟರ್ ಡೀಸೆಲ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗಿದ್ದರೆ ಲೋಕೋ ಇಂಜಿನ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿರುತ್ತವೆ ಎಂಬುದನ್ನೂ ಒಮ್ಮೆ ತಿಳಿದುಕೊಳ್ಳೋಣ.

ಪ್ರತಿ ಲೋಕೋದಲ್ಲೂ ಟಾಯ್ಲೆಟ್ ಸೇರಿದಂತೆ ಚಿಕ್ಕ ರೂಮ್ ಸಹ ಇರುತ್ತದೆ. ಅದೇ ರೀತಿ ಇಂಜಿನ್‌ಗೆ ಎಷ್ಟು ಗೇರುಗಳಿರುತ್ತವೆ ಎಂಬ ಆಲೋಚನೆ ಸಹ ನಿಮಗೆ ಬರಬಹುದು. ವಾಸ್ತವವಾಗಿ ರೈಲಿಗೆ ಒಂದೇ ಒಂದು ಗೇರ್ ಮಾತ್ರ ಇರುತ್ತದೆ. ಇನ್ನು ರೈಲಿನ ಟಾರ್ಕ್ ವಿಚಾರಕ್ಕೆ ಬಂದರೆ ಸುಮಾರು 60 ಸಾವಿರ ಫೌಂಡ್‌ಗೆ ಸಮನಾದ ಟಾರ್ಕ್ ಬಿಡುಗಡೆಯಾಗುತ್ತದೆ. ಅಂದರೆ 120 ಫೆರಾರಿ ಕಾರುಗಳಿರುವ ಸಾಮರ್ಥ್ಯ ಒಂದು ರೈಲು ಇಂಜಿನ್‍ಗೆ ಇರುತ್ತದೆ ಎಂದರೆ ನಂಬಲೇಬೇಕು.

ಇನ್ನೊಂದು ಮುಖ್ಯವಾದ ಸಂಗತಿ ಎಂದರೆ... ರೈಲಿನ ಇಂಜಿನನ್ನು ಎಷ್ಟೇ ಹೊತ್ತಾದರೂ ಆನ್‌ನಲ್ಲೇ ಇಡುತ್ತಾರೆ. ಕನಿಷ್ಠ 5-6 ಗಂಟೆಗಳ ಕಾಲ ಹಾಲ್ಟ್ ಮಾಡಬೇಕಾದರೆ ಇಂಜಿನನ್ನು ಆನ್‌ನಲ್ಲೇ ಇಡುತ್ತಾರೆ. ಯಾಕೆಂದರೆ ರೈಲು ನಿಲ್ಲಿಸಲು ಏರ್‌ಬ್ರೇಕನ್ನೇ ಉಪಯೋಗಿಸಬೇಕು. ನಾವು ಸಾಧಾರಣ ವೆಹಿಕಲ್ಸ್‌ಗೆ ಬಳಸುವ ಬ್ರೇಕ್ಸ್ ಹಾಗಲ್ಲ. ಹಾಗಾಗಿ ರೈಲ್ ಇಂಜಿನನ್ನು ನಿಲ್ಲಿಸಿದರೆ ಏರ್ ಪ್ರೆಶರ್ ಕಡಿಮೆಯಾಗಿ ರೈಲು ಹಿಂದಕ್ಕೋ ಮುಂದಕ್ಕೂ ಹೋಗುತ್ತದೆ. ಇಂತಹ ಸಂಗತಿಗಳನ್ನು ಅನೇಕ ಸಲ ನೀವು ನ್ಯೂಸ್ ಪೇಪರ್ ಅಥವಾ ಟಿವಿಯಲ್ಲಿ ನೋಡಿಯೇ ಇರುತ್ತೀರ. ಇದರ ಜತೆಗೆ ರೈಲನ್ನು ನಿಲ್ಲಿಸಿ ಮತ್ತೆ ಸ್ಟಾರ್ಟ್ ಮಾಡಬೇಕಾದರೆ ಕನಿಷ್ಠ ಪಕ್ಷ ಅರ್ಧ ಗಂಟೆ ಸಮಯ ಬೇಕು. ಅಷ್ಟೇ ಅಲ್ಲ ಡೀಸೆಲ್ ಸಹ ಸಾಕಷ್ಟು ಖರ್ಚಾಗುತ್ತದೆ. ಹಾಗಾಗಿ ರೈಲಿನ ಇಂಜಿನನ್ನು ಆನ್‌ನಲ್ಲೇ ಇಡುತ್ತಾರೆ.

1 comment: