Header Ads

test

ಪ್ರೀತಿ ಕುರುಡಲ್ಲ, ಬುದ್ಧಿ ಇರುವಂತಹದ್ದು ಕೂಡ... ವಾಟ್ಸಾಪ್ ಚಾಟ್‌ನ್ನು ಪುಸ್ತಕವಾಗಿ ಬದಲಾಯಿಸಿ ಗಿಫ್ಟ್ಕೊಟ್ಟ ಪ್ರೇಮಿ..

ಸಾಮಾನ್ಯವಾಗಿ ಜನರೆಲ್ಲಾ, ಪ್ರೀತಿ ಕುರುಡು. ಪ್ರೀತಿಸಿದರೆ ಬುದ್ಧಿ ಮಂಕಾಗುತ್ತದೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಸ್ವಲ್ಪ ಮಟ್ಟಿಗೆ ಅದು ನಿಜ ಇರಬಹುದು. ಆದರೆ ಸಂಪೂರ್ಣವಾಗಿ ಅಲ್ಲ. ಪ್ರೀತಿಸಿದ ಹುಡುಗಿಯನ್ನು ಆಗಾಗ ಯಾವ ರೀತಿ ಚಕಿತಗೊಳಿಸಬೇಕು ಎಂದು ಹುಡುಗರು, ಪ್ರೀತಿಸಿದ ಹುಡುಗನನ್ನು ಹೇಗೆ ಸಂತೋಷವಾಗಿ ಇಡಬೇಕು ಎಂದು ಹುಡುಗಿಯರು ಹೊಸದಾಗಿ ಆಲೋಚಿಸುತ್ತಲೇ ಇರುತ್ತಾರೆ. ಈ ಆಲೋಚನೆಗಳ ನಡುವೆ ಹುಟ್ಟಿದ ಒಂದು ವಿಚಿತ್ರ ಐಡಿಯಾ ಸಾಮಾಜಿಕ ಮಾಧ್ಯಮಗಳನ್ನು ಈಗ ಅಲುಗಾಡಿಸುತ್ತಿದೆ. ವಾಟ್ಸಾಪ್ ಸ್ಟೇಟಸ್‌ನಿಂದ, ಫೇಸ್‍ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಹೀಗೆ ಸಾಮಾಜಿಕ ಮಾಧ್ಯಮಗಳಲೆಲ್ಲಾ ಒಂದು ಪುಸ್ತಕ ಈಗ ವೈರಲ್ ಆಗಿದೆ.



ಅಂತಿಂಥಹ ಪುಸ್ತಕ ಅಲ್ಲ ಇದು..:
ಪ್ರೀತಿಸಿದ ಹುಡುಗಿಗೆ ಪುಸ್ತಕವೊಂದನ್ನು ಗಿಫ್ಟ್ ಆಗಿ ಕೊಟ್ಟ. ಪ್ರೀತಿಸಿದ ಹುಡುಗಿಗೆ ಈ ಕಾಲದಲ್ಲಿ ಯಾರಪ್ಪಾ ಬುಕ್ಸ್ ಗಿಫ್ಟ್ ಆಗಿ ಕೊಡುತ್ತಾರೆ ಎಂಬ ಸಂದೇಹ ಬರಬಹುದು. ಆದರೆ ಇದು ಅಂತಿಂಥಹ ಬುಕ್ ಆಲ್ಲ. ಹೊಸ ರೀತಿಯ ಪುಸ್ತಕ. ಇದನ್ನು ಬರೆದದ್ದು ಯಾರೋ ಅಲ್ಲ, ಈ ಜೋಡಿಯೇ... ಅವರ ನಡುವೆ ನಡೆದ ವಾಟ್ಸಾಪ್ ಸಂದೇಶಗಳನ್ನೆಲ್ಲಾ ಬುಕ್ ಅಗಿ ಪ್ರಿಂಟ್ ಮಾಡಿಸಿದ್ದಾನೆ ಪ್ರೇಮಿ. ಲವರ್ ಕೊಟ್ಟ ಗಿಫ್ಟನ್ನು ನೋಡಿದ ಹುಡುಗಿ ಬಾಯಲ್ಲಿ ಮಾತೇ ಬರಲಿಲ್ಲ. ಇದುವರೆಗೂ ಯಾರೂ ಆಲೋಚಿಸದ ಮಾರ್ಗದಲ್ಲಿ ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ್ದು ಹುಡುಗಿಯನ್ನು ಸಂತೋಷದಲ್ಲಿ ಮುಳುಗಿಸಿತು. ಅವರ ನಡುವೆ ನಡೆದ ಎಲ್ಲಾ ಸಂಭಾಷಣೆಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿ ಕೊಟ್ಟಿರುವುದು ಎಂದಿಗೂ ಚಿರಸ್ಥಾಯಿಯಾಗಿ ಉಳಿಯುತ್ತದೆ.

ಸಾಮಾಜಿಕ ಮಾಧ್ಯಮದ ಮಹತ್ವ..:

ಆ ಪುಸ್ತಕದಲ್ಲಿನ ಪಿಕ್ಸ್ ಎಲ್ಲಾ ಆ ಯುವತಿ ಹಂಚಿಕೊಂಡಿದ್ದು ಆ ಫೋಟೋಗಳು ಈಗ ವೈರಲ್ ಆಗಿವೆ. ಈ ಐಡಿಯಾ ಚೆನ್ನಾಗಿದೆ ಎಂದು ಬಹಳಷ್ಟು ಮಂದಿ ಇದನ್ನೇ ಫಾಲೋ ಆಗುತ್ತಿದ್ದಾರೆ. ಮೊದಲೇ ವ್ಯಾಲೆಂಟೇನ್ಸ್ ವೀಕ್ ಆಗಿದ್ದು, ಪ್ರೇಮಿಗಳು ಅವರಿಗೆ ಈ ರೀತಿಯ ಗಿಫ್ಟ್ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆಂದು ಬಹಳಷ್ಟು ಮಂದಿ ಆಲೊಚಿಸುತ್ತಿದ್ದಾರೆ. ಈ ರೀತಿಯ ಪುಸ್ತಕ ನೀಡುವಾಗ ಕನಿಷ್ಟ ಪಕ್ಷ ಸಾಫ್ಟ್ ಕಾಪಿಯಾದರೂ ನಿಮ್ಮ ಬಳಿ ಇಟ್ಟುಕೊಳ್ಳಿ ಮುಂದೆ ಕೆಲಸಕ್ಕೆ ಬರುತ್ತದೆ. ಏನಂತೀರಾ? ಏನೇ ಆಗಲಿ ಪ್ರೇಮಿಗಳಿಗೆ ಈ ರೀತಿಯ ಹೊಸ ಹೊಸ ಐಡಿಯಾಗಳು ಹೊಳೆಯುತ್ತಲೇ ಇರುತ್ತವೆ. ಅಲ್ಲವೇ?

No comments