Header Ads

test

ಮಂತ್ರಿ ಅಲ್ಲ... ಕಂತ್ರಿ! (ವಿಡಿಯೋ ವೈರಲ್)... ಸಚಿವೆಯ ಸೊಂಟಕ್ಕೆ ಕೈಹಾಕಿದ ಸಚಿವ..!

ತ್ರಿಪುರಾದಲ್ಲಿ ನಡೆದಿರುವ ಒಂದು ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಮಾಂಧಕಾರದಲ್ಲಿ ಕಣ್ಣು ಕಣದಂತಾದ ಓ ಮಂತ್ರಿ ಏಕಾಏಕಿ ದೇಶದ ಪ್ರಧಾನಿ ಪಾಲ್ಗೊಂಡ ಕಾರ್ಯಕ್ರಮದಲ್ಲಿ ತನ್ನ ಸಹ ಸಚಿವರ ಬಗ್ಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಪ್ರಧಾನಿ ಮೋದಿ ಒಂದು ಕಡೆ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಆಹಾರ ಸಚಿವ ಮನೋಜ್ ಕಂತಿ ದೇಬ್ ಅಸಭ್ಯಕರ ರೀತಿಯಲ್ಲಿ ಮಹಿಳಾ ಸಚಿವರ ಸೊಂಟಕ್ಕೆ ಕೈಹಾಕಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.


ಮನೋಜ್ ಕಂತಿ ಮಾಡಿದ ಈ ನೀಚ ಕೆಲಸದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಛಿ..ಥೂ ಎಂದು ಉಗಿಯುತ್ತಿದ್ದು.. ಇವರೆಲ್ಲಾ ಪ್ರಜಾ ಪ್ರತಿನಿಧಿಗಳೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ಬಗ್ಗೆ ಮಹಿಳಾ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕೂಡಲೆ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು ಎಂದು ಆಗ್ರಹಿಸಿವೆ.

ಇದೇ ತಿಂಗಳ 9ರಂದು ಅಗರ್ತಲಾದಲ್ಲಿ ನಡೆದ ಒಂದು ರ‍್ಯಾಲಿಯಲ್ಲಿ ಈ ಘಟನೆ ನಡೆದಿದೆ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದ ಈ ಕಂತ್ರಿ ಮಂತ್ರಿ ಬಗ್ಗೆ ಬಿಜೆಪಿ ಯಾವ ಕ್ರಮ ಕೈಗೊಳ್ಳುತ್ತದೋ ಕಾದು ನೋಡಬೇಕು.

ಇಷ್ಟೆಲ್ಲಾ ಬಿಗಿ ಭದ್ರತೆಯಲ್ಲೇ ಈ ರೀತಿ ನಡೆದರೆ ಇನ್ನು ದೇಶದಲ್ಲಿರುವ ಮಹಿಳೆಯರು, ಶಾಲೆಗೆ ಹೋಗುವ ಮಕ್ಕಳು, ಯುವತಿಯರು, ಉದ್ಯೋಗಿಗಳು, ಕೊನೆಗೆ ಮಹಿಳಾ ಸಚಿವರು ಸಹ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆಂದರೆ... ಎಂತಹ ಭಯಾನಕ ಪರಿಸ್ಥಿಗಳ ನಡುವೆ ಬದುಕುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಏತನ್ಮಧ್ಯೆ, ಸಚಿವರೊಬ್ಬರ ನಡತೆ ಬಗ್ಗೆ ಆರೋಪಿಸಿರುವ ಎಡಪಕ್ಷಗಳ ಒತ್ತಾಯವನ್ನು ಆಡಲಳಿತಾರೂಢ ಬಿಜೆಪಿ ತಳ್ಳಿಹಾಕಿದೆ. ಆದರೆ ಈ ಘಟನೆ ಬಗ್ಗೆ ಸಚಿವೆ ಸಂತಾನಾ ಚಕ್ಮಾ ಅವರು ಇದುವರೆಗೂ ಯಾವುದೇ ಹೇಳಿಕೆ ನೀಡದಿರುವುದು ಮತ್ತು ದೂರು ದಾಖಲಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಷ್ಟೇ ಅಲ್ಲದೆ, CPI-M, AIDWA ಪಕ್ಷಗಳ ಮಹಿಳಾ ಘಟಕ ಸಚಿವ ಮನೋಜ್ ಕಾಂತಿ ದೇಬ್ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭಿಸಿದ್ದು, ಬಂಧನಕ್ಕೆ ಒತ್ತಾಯಿಸಿವೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ವಿಪ್ಲಾಬ್ ಕುಮಾರ್ ದೇವ್ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದ ಸಾರ್ವಜನಿಕ ಸಮಾವೇಶದಲ್ಲಿ ವೇದಿಕೆಯ ಮೇಲೆ ಸಚಿವೆಯೊಂದಿಗೆ ಅನುಚಿತವಾಗಿ ವರ್ತಿಸಿದ ಸಚಿವ ಮನೋಜ್ ಕಾಂತಿ ದೇಬ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಎಡಪಂಥೀಯ ಸಂಚಾಲಕ ಬಿಜಾನ್ ಧಾರ್ ಆಗ್ರಹಿಸಿದ್ದಾರೆ.

watch video :

https://youtu.be/Dh4xWTMbNf4

No comments