Header Ads

test

ಇಬ್ಬರು ಹೆಂಡಂದಿರಿದ್ದರೆ ಮನೆ ಬಾಡಿಗೆ (ರೆಂಟ್) ಪೈಸಾ ಸಹ ಕಟ್ಟಬೇಕಾಗಿಲ್ಲವಂತೆ..! ಕಾರಣ ಗೊತ್ತಾದರೆ ಶಾಕ್ಆಗುತ್ತೀರ.!

ನಮ್ಮ ದೇಶದಲ್ಲಿ ಗಂಡಸರು ಎರಡು ಮದುವೆಯಾದರೆ ಅದು ಕಾನೂನು ರೀತಿ ಅಪರಾಧವಾಗುತ್ತದೆ. ಒಬ್ಬರು ಒಬ್ಬರನ್ನು ಮಾತ್ರ ಮದುವೆಯಾಗಬೇಕು. ಆದರೆ ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಗಂಡ ಹೆಂಡತಿಯರಲ್ಲಿ ಪತ್ನಿ ಒಪ್ಪಿದರೆ ಗಂಡ ಎರಡನೇ ಮದುವೆ ಮಾಡಿಕೊಳ್ಳಲು ಸಹ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ಮದುವೆಯಾಗುವ ಪತ್ನಿಗೆ, ಗಂಡನಿಗೆ, ಮಾಜಿ ಪತ್ನಿಗೆ ಮೂವರಲ್ಲೂ ಅಂಡರ್‌ಸ್ಟ್ಯಾಂಡಿಂಗ್ ಇರಬೇಕು. ಈ ರೀತಿ ಇರದಿದ್ದರೆ ಅದು ಸಾಧ್ಯವಾಗಲ್ಲ. ಆದರೂ ಇಂದು ಬಹಳಷ್ಟು ಮಂದಿ ಗಂಡಸರು ಎರಡನೇ ಮದುವೆಯನ್ನು ಕದ್ದುಮುಚ್ಚಿ ಆಗಿ ಆ ವಿಷಯವನ್ನು ರಹಸ್ಯವಾಗಿ ಇಟ್ಟು ಸಂಸಾರವನ್ನೂ ಮಾಡುತ್ತಿದ್ದಾರೆ. ಆದರೆ ನಿಮಗೆ ಗೊತ್ತಾ?ನಮ್ಮ ದೇಶದಲ್ಲಿ ಗಂಡಸರು ಎರಡನೇ ಮದುವೆಯಾಗುವುದು ಅಪರಾಧವಾದರೂ, ಆ ದೇಶದಲ್ಲಿ ಮಾತ್ರ ಅಲ್ಲ. ಇನ್ನೂ ಹೇಳಬೇಕೆಂದರೆ ಆ ದೇಶದಲ್ಲಿ ಎರಡನೇ ಮದುವೆಯಾಗುವ ಗಂಡಸಿಗೆ ಸರಕಾರ ಕೆಲವು ಸೌಲಭ್ಯಗಳನ್ನೂ ಕಲ್ಪಿಸುತ್ತದೆ. ಇಷ್ಟಕ್ಕು ಆ ದೇಶ ಯಾವುದೆಂದರೆ...

ಇನ್ಯಾವ ದೇಶ.. ದುಬೈ. ಹೌದು ಅಲ್ಲೇ. ಅಲ್ಲಿನ ಗಂಡಸರು ಎರಡನೇ ಮದುವೆಯಾಗಬಹುದು. ಇದನ್ನು ಅಲ್ಲಿನ ಸರಕಾರವೇ ಪ್ರೋತ್ಸಾಹಿಸುತ್ತಿದೆ. ಎರಡನೇ ಮದುವೆಯಾದವರಿಗೆ ಹಲವು ಸೌಲಭ್ಯಗಳನ್ನು ಸಹ ದುಬೈ ಸರಕಾರ ನೀಡುತ್ತಿದೆ. ಮುಖ್ಯವಾಗಿ ಎರಡನೇ ಮದುವೆಯಾಗುವ ಗಂಡಸರಿಗೆ ಗೌರವಯುತವಾಗಿ ನೋಡುತ್ತಾರೆ. ಇದರ ಜತೆಗೆ ಎರಡು ಮದುವೆ ಮಾಡಿಕೊಂಡ ಪುರುಷರನ್ನು ಶೇಕ್ ಜಾಯದ್ ಹೌಸಿಂಗ್ ಯೋಜನೆಯಡಿ ಬಾಡಿಗೆಯನ್ನೂ ಸಲ್ಲಿಸುತ್ತಾರೆ. ಅಂದರೆ ಅವರು ಮನೆ ಬಾಡಿಗೆ ಕಟ್ಟುವ ಅವಶ್ಯಕತೆ ಇರಲ್ಲ. ಅಷ್ಟೇ ಅಲ್ಲ ಇದರ ಪ್ರಯೋಜನೆ ಎರಡನೇ ಪತ್ನಿಗೂ ಅನ್ವಯಿಸುತ್ತದೆ.

ದುಬೈ ಸರಕಾರ ಈ ರೀತಿ ಯಾಕೆ ಮಾಡುತ್ತಿದೆ ಗೊತ್ತಾ..? ಆ ದೇಶದಲ್ಲಿ ಮದುವೆಯಾಗದ ಮಹಿಳೆಯರ ಸಂಖ್ಯೆ ಅಧಿಕವಾಗಿ ಇದೆಯಂತೆ. ಇದರಿಂದ ಆ ಸಮಸ್ಯೆ ಪರಿಹರಿಸಿಕೊಳ್ಳಲು ಅಲ್ಲಿನ ಸರಕಾರ ಈ ವಿಚಿತ್ರ ನಿರ್ಧಾರ ತೆಗೆದುಕೊಂಡಿದೆ. ಇದನ್ನು ಇತ್ತೀಚೆಗೆ ಅಲ್ಲಿ ಜಾರಿಗೆ ತಂದರು. ಈ ಹಿನ್ನೆಲೆಯಲ್ಲಿ ಈಗ ಅಲ್ಲಿನ ಪುರುಷರು ಎರಡು ಮದುವೆಗಳನ್ನು ಮಾಡಿಕೊಳ್ಳಬಹುದು. ಆ ರೀತಿ ಎರಡನೇ ಮದುವೆಯಾಗುವ ಪುರುಷರಿಗೆ ಸರಕಾರ ಪ್ರೋತ್ಸಾಹ ಧನವನ್ನೂ ನೀಡುತ್ತದೆ. ಅಂತಹವರನ್ನು ಸಮಾಜದಲ್ಲಿ ಗೌರವದಿಂದಲೂ ನೋಡುತ್ತದೆ. ಅದೇನೇ ಇರಲಿ ದುಬೈನಲ್ಲಿ ಜಾರಿಗೆ ಬಂದಿರುವ ಈ ವಿಶೇಷ ಕಾನೂನು ವಿಚಿತ್ರವಾಗಿ ಇದೆಯಲ್ಲವೇ..?

No comments