Header Ads

test

ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇಲ್ಲಿವೆ ನೋಡಿ ಮನೆಮದ್ದುಗಳು!

ಲೈಂಗಿಕ ಕ್ರಿಯೆಯಲ್ಲಿ ಅಸಮರ್ಥತೆ, ನಿರಾಸಕ್ತಿ, ಶೀಘ್ರಸ್ಕಲನ, ಸ್ವಪ್ನಸ್ಟಲನ ಮುಂತಾದವುಗಳಿದ್ದಲ್ಲಿ ವೈದ್ಯರನ್ನು ಭೇಟಿಯಾಗಿ ಯಾವ ಕಾರಣಗಳಿಂದ ಹೀಗಾಗುತ್ತಿದೆಯೆಂದು ಅರಿತು ಚಿಕಿತ್ಸೆ ತೆಗೆದುಕೊಳ್ಳಬೇಕು, ಅತಿಯಾದ ಲೈಂಗಿಕ ಬಯಕೆ, ಮಾನಸಿಕ ಒತ್ತಡ, ಭಯ, ಉದ್ವೇಗ, ಚಿಂತೆಗಳಿದ್ದಲ್ಲಿ, ಗಂಡ ಹೆಂಡತಿಯ ನಡುವೆ ವೈಮನಸ್ಸು ಸಿಟ್ಟು ಜಗಳ, ಮನಸ್ತಾಪಗಳಿದ್ದಲ್ಲಿ ಮಧುಮೇಹ ಹೃದಯರೋಗಗಳಿದ್ದಲ್ಲಿಯೂ ಲೈಂಗಿಕ ದುರ್ಬಲತೆ ಉಂಟಾಗುತ್ತದೆ. ಹಾಗಿದ್ದರೆ ಇವಕ್ಕೆಲ್ಲಾ ಪರಿಹಾರ ಇಲ್ಲವೇ ಎಂದರೆ. ಖಂಡಿತ ಇದೆ. ಅದೂ ಯಾವುದೇ ಅಡ್ಡಪರಿಣಾಮಗಳಿಲ್ಲದಂತೆ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಈಗ ನೋಡೋಣ.


* ಬ್ರಾಹಿ ಎಲೆಯಿಂದ ಶರಬತ್ತನ್ನು ತಯಾರಿಸಿ ಕುಡಿಯಬೇಕು.
* ಉತ್ತರಾಣಿ ಬೇರಿನ ಪುಡಿಯನ್ನು ಬೆಲ್ಲ ಇಲ್ಲವೇ ಕಲ್ಲುಸಕ್ಕರೆಯೊಂದಿಗೆ ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು,
* ಅಶ್ವಗಂಧ ಮತ್ತು ಶತಾವರಿಯನ್ನು ಸಮಭಾಗ ತೆಗೆದುಕೊಂಡು ಕಷಾಯ ತಯಾರಿಸಿ ಹಾಲು ಬೆರೆಸಿ ಕುಡಿಯಬೇಕು.
* 10 ಗ್ರಾಂ ಅಶ್ವಗಂಧ ಪುಡಿಯನ್ನು ಹಾಲಿನಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
* ನಸುಗುನ್ನಿಯ ಬೀಜಗಳನ್ನು ಹುರಿದು ಪುಡಿ ಮಾಡಿ ಒಂದು ಚಮಚೆಯಷ್ಟನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು.
* 2 ಚಮಚೆ ಬಿಳಿ ಈರುಳ್ಳಿ ರಸ, ಒಂದು ಚಮಚ ಶುಂಠಿ ರಸ, ಒಂದು ಚಮಚೆ ಜೇನುತುಪ್ಪ, ಅರ್ಧ ಚಮಚ ತುಪ್ಪ ಎಲ್ಲವನ್ನೂ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಬೇಕು.
* ಶತಾವರಿ, ಆನೆ ನೆಗ್ಗಿಲು, ಉದ್ದಿನ ಹಿಟ್ಟು, ಅಶ್ವಗಂಧಗಳನ್ನು ಸೇರಿಸಿ ಪುಡಿ ತಯಾರಿಸಿ ಒಂದು ಚಮಚೆ ಪುಡಿಯನ್ನು ಒಂದು ಲೋಟ ಹಾಲಿನಲ್ಲಿ ಬೆರೆಸಿ ಕುಡಿಯಬೇಕು.
* 10 ರಿಂದ 15 ಗ್ರಾಂ ಉದ್ದಿನಹಿಟ್ಟನ್ನು ಒಂದು ಲೋಟ ಹಾಲಿನಲ್ಲಿ ಬೆರೆಸಿ ಕುದಿಸಿ, ಬೆಲ್ಲ ಬೆರೆಸಿ ಕುಡಿಯಬೇಕು,
* 5 ಗ್ರಾಂ ಪುರುಷರತ್ನ ಗಿಡದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು.
* ಉದ್ದಿನಬೇಳೆಯನ್ನು ತೊಳೆದು ತುಪ್ಪದಲ್ಲಿ ಹದವಾಗಿ ಹುರಿದು ಅದಕ್ಕೆ ಹಸುವಿನ ಹಾಲು ಹಾಕಿ ಬೇಳೆಯನ್ನು ಚೆನ್ನಾಗಿ ಬೇಯಿಸಬೇಕು. ಬೇಳೆ ಬೆಂದು ಮೊಸರಿನಂತಾಗಬೇಕು. ಹೆಚ್ಚು ತುಪ್ಪ ಹಾಕಬೇಕು. ಅನಂತರ ಅದಕ್ಕೆ ಬೆಲ್ಲ ಇಲ್ಲವೇ ಕಲ್ಲುಸಕ್ಕರೆ ಬೆರೆಸಿ ಈ ಪಾಯಸ ಸೇವಿಸುವುದರಿಂದ ಲೈಂಗಿಕ ದುರ್ಬಲತೆ ಕಡಿಮೆಯಾಗುತ್ತದೆ.
* ಪ್ರಶಾಂತಮನಸ್ಸು, ಸುಂದರ ಪ್ರಚೋದಕ ಪರಿಸರ, ಪರಸ್ಪರ ಪ್ರೀತಿ, ಸ್ವಚ್ಛದೇಹ ಮತ್ತು ಒಳ್ಳೆಯ ಆರೋಗ್ಯ ಲೈಂಗಿಕ ಆಸೆ ಮತ್ತು ಕ್ರಿಯಾ ಸಾಮರ್ಥ್ಯವು ಹೆಚ್ಚಿಸುತ್ತದೆ.

ಇವೆಲ್ಲವನ್ನೂ ಪಾಲಿಸಿದರೆ ಖಂಡಿತ ನಿಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.



No comments