Header Ads

test

ತನ್ನ ಮಗಳ ಮದುವೆ... ಪೊಲೀಸರಿಗೆ ರಜನಿಕಾಂತ್ ಪತ್ನಿ ಮನವಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ಎರಡನೇ ಮದುವೆಗೆ ಸಿದ್ಧವಾಗಿರುವ ಸಂಗತಿ ಗೊತ್ತೇ ಇದ್ದೆ. ಎರಡು ವರ್ಷಗಳ ಹಿಂದೆ ಗಂಡನಿಂದ ವಿಚ್ಛೇದನ ಪಡೆದಿದ್ದ ಸೌಂದರ್ಯ ಕಳೆದ ಕೆಲವು ತಿಂಗಳಿಂದ ತಮಿಳುನಾಡಿನ ಉದ್ಯಮಿ ವಿಶಾಖನ್‌ರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರೂ ಕಳೆದ ಕೆಲ ವರ್ಷಗಳಿಂದ ಕೈಕೈ ಹಿಡಿದು ತಿರುಗಾಡುತ್ತಿದ್ದರು. ಸೌಂದರ್ಯ ಅಷ್ಟೇ ಅಲ್ಲದೆ ವಿಶಾಖನ್ ಸಹ ಎರಡನೇ ಮದುವೆ ಆಗುತ್ತಿರುವ ಕಾರಣ ಇಬ್ಬರಿಗೂ ಒಳ್ಳೆಯ ಸ್ನೇಹ ಸಂಬಂಧ ಬೆಳೆದಿತ್ತು. ಕೆಲವು ವಾರಗಳ ಹಿಂದೆ ಇವರಿಬ್ಬರ ನಿಶ್ಚಿತಾರ್ಥ ಸಹ ಸರಳವಾಗಿ ನಡೆಯಿತು. ಈಗ ಮದುವೆ ಸಿದ್ಧತೆಗಳು ನಡೆಯುತ್ತಿವೆ.



ಮದುವೆಯನ್ನು ಎಲ್ಲೋ ದೂರದಲ್ಲಿ ಅಲ್ಲದೆ ರಜನಿಕಾಂತ್ ಮನೆಯಲ್ಲೇ ಮಾಡುತ್ತಿದ್ದಾರೆ. ತಮಿಳುನಾಡು, ಚೆನ್ನೈನಲ್ಲಿನ ಪೊಯೆಸ್ ಗಾರ್ಡನ್‌ನಲ್ಲಿ ಸೌಂದರ್ಯ ಮದುವೆ ನಡೆಯಲಿದೆ. ಈ ವಿವಾಹ ಕಾರ್ಯಕ್ರಮಕ್ಕೆ ತಮಿಳುನಾಡಿನ ರಾಜಕೀಯ ಗಣ್ಯರು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ಬಹಳಷ್ಟು ಮಂದಿ ಹಾಜರಾಗುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಸೆಲೆಬ್ರಿಗಳು ಬರುತ್ತಿರುವ ಕಾರಣ ಭದ್ರತೆ ವಿಷಯದಲ್ಲಿ ರಜನಿಕಾಂತ್ ಕುಟುಂಬಿಕರು ಆತಂಕ ಪಡುತ್ತಿದ್ದಾರೆ. ತಮ್ಮ ಮನೆಯಲ್ಲೇ ಮದುವೆ ಎಂದು ಪೊಲೀಸರಿಗೆ ಮಾಹಿತಿ ನೀಡಿ ಭದ್ರತೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ರಜನಿಕಾಂತ್ ಪತ್ನಿ ಲತಾ ಸ್ವತಃ ಪೊಲೀಸ್ ಠಾಣೆಗೆ ಹೋಗಿ ಸೌಂದರ್ಯ ವಿವಾಹಕ್ಕಾಗಿ ತಮ್ಮ ಮನೆ ಬಳಿ ಸೆಕ್ಯುರಿಟಿ ಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಮದುವೆ ನಡೆಯುವ ಮೂರು ದಿನಗಳ ಕಾಲ ಪೊಯೆಸ್ ಗಾರ್ಡನ್ ಕಡೆಗಿನ ಸಂಚಾರವನ್ನು ಬದಲಾಯಿಸಲು ಕೋರಲಾಗಿದೆ. ಸೂಪರ್ ಸ್ಟಾರ್ ರಿಕ್ವೆಸ್ಟ್ ಅಂದರೆ ಯಾರು ತಾನೆ ನೋ ಎನ್ನಲು ಸಾಧ್ಯ. ಕೂಡಲೆ ಓಕೆ ಹೇಳಿದ್ದಾರೆ ಪೊಲೀಸರು. ಸುಮಾರು 55 ಮಂದಿ ಪೊಲೀಸರನ್ನು ಭದ್ರತೆಗಾಗಿ ಕಳುಹಿಸಲಾಗುತ್ತಿದೆ. ಇವರಲ್ಲಿ 50 ಮಂದಿ ಕಾನಿಸ್ಟೇಬಲ್ಸ್ ಆದರೆ 4 ಮಂದಿ ಎಸ್‍ಐಗಳು, ಒಬ್ಬ ಸಿಐ ಈ ಭದ್ರತೆಯನ್ನು ನೇತೃತ್ವ ವಹಿಸಲಿದ್ದಾರೆ. ಮೂರು ದಿನಗಳ ಕಾಲ ಸೌಂದರ್ಯ ವಿವಾಹ ಅದ್ದೂರಿಯಾಗಿ ನಡೆಯಲಿದೆ. ಸಂಗೀತ ಕಾರ್ಯಕ್ರಮದ ಮೂಲಕ ಆರಂಭವಾಗಲಿದೆ ಕಾರ್ಯಕ್ರಮ. ರಜನಿಕಾಂತ್ ಇನ್ನೊಬ್ಬ ಅಳಿಕ ಧನುಷ್ ಸದ್ಯಕ್ಕೆ ಮದುವೆ ಕೆಲಸಗಳ ಉತ್ಸುವಾರಿ ನೋಡಿಕೊಳ್ಳುತ್ತಿದ್ದಾರೆ.

ಇದೇ ಫೆಬ್ರವರಿ 11ರಂದು ಸೌಂದರ್ಯಾ ಎರಡನೇ ಮದುವೆ ಆಗುತ್ತಿದ್ದಾರೆ. ನಟ, ಉದ್ಯಮಿ ವಿಶಾಗನ್ ವನಂಗಮುಡಿ ಕೈ ಹಿಡಿಯುತ್ತಿದ್ದಾರೆ ಸೌಂದರ್ಯಾ. ಮದುವೆ ಸಿದ್ಧತೆಗಳು ಭರದಿಂದ ಸಾಗಿವೆ. ಸೌಂದರ್ಯಾ ಮೊದಲ ಮದುವೆ ಉದ್ಯಮಿ ಅಶ್ವಿನ್ ರಾಮ್‍ಕುಮಾರ್ ಜತೆಗೆ ನಡೆದಿತ್ತು. ಅವರ ದಾಂಪತ್ಯದ ಫಲವಾಗಿ ಒಂದು ಮಗ ಇದೆ. 2016ರಲ್ಲಿ ದಾಂಪತ್ಯದಲ್ಲಿ ಉಂಟಾದ ಬಿರುಕು ವಿವಾಹ ವಿಚ್ಛೇದನಕ್ಕೆ ದಾರಿಯಾಯಿತು. 2017ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಿತು ಈ ಜೋಡಿ.

No comments