Header Ads

test

ಲ್ಯಾಪ್‌ಟಾಪ್‌ಗಳಿಗೆ ಚಿಕ್ಕ ರಂಧ್ರದಂತಹ ಸ್ಲಾಟ್ ಯಾಕೆ ಇರುತ್ತದೆ ಗೊತ್ತಾ..?

ಇಂದು ನಮಗೆ ಎಷ್ಟೇ ಅತ್ಯುನ್ನತ ತಂತ್ರಜ್ಞಾನದಿಂದ ತಯಾರಾದ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದರೂ ಲ್ಯಾಪ್‍ಟಾಪ್‌ಗಳಿಗೆ ಮಾತ್ರ ಈಗಲೂ ಬೇಡಿಕೆ ಇದ್ದೇ ಇದೆ. .ಯಾಕೆಂದರೆ ಸ್ಮಾರ್ಟ್‌ಫೋನ್‌ಗಳಿಂದ ಆಗದ ಕೆಲಸಗಳು ಲ್ಯಾಪ್‍ಟಾಪ್‌ನಿಂದ ಆಗುತ್ತಿವೆ ಅಲ್ಲವೇ..! ಹಾಗಾಗಿ ಅವುಗಳ ಬಗ್ಗೆ ಬಳಕೆದಾರರು ಈಗಲೂ ಆಸಕ್ತಿ ತೋರುತ್ತಲೇ ಇದ್ದಾರೆ. ಆದರೆ ಲ್ಯಾಪ್‍ಟಾಪ್‌ನ್ನು ಬಳಸುತ್ತಿರುವ ಯಾರಿಗೇ ಆಗಲಿ ಅದರ ಬಗ್ಗೆ ಹೆಚ್ಚಾಗಿಯೇ ಗೊತ್ತಾಗುತ್ತದೆ. ಅದಕ್ಕಿರುವ ಪೋರ್ಟ್‌ಗಳು, ಅದರಲ್ಲಿರುವ ಫ್ಯೂಚರ್‌ಗಳು ಎಲ್ಲವೂ ಗೊತ್ತಾಗುತ್ತವೆ. ಆದರೆ ಕೆಲವರು ಲ್ಯಾಪ್‌ಟಾಪ್ ಬಳಕೆದಾರರಿಗೆ ಮಾತ್ರ ಗೊತ್ತಿಲ್ಲದ ವಿಷಯ ಒಂದಿದೆ. ಅದೇನೆಂದರೆ... ಅದಕ್ಕೆ ಇರುವ ಒಂದು ವಿಶೇಷ ಪೋರ್ಟ್... ಆದರೆ ನಿಜವಾಗಿ ಅದು ನೋಡಲು ಒಂದು ಸ್ಲಾಟ್ ತಹ ಇದ್ದರೂ... ಅದು ಲ್ಯಾಪ್‍ಟಾಪ್‌ನ ಇತರೆ ಸ್ಲಾಟ್‌ಗಳಂತೆ ಕೆಲಸಕ್ಕೆ ಬರಲ್ಲ. ಅದರಿಂದ ಬೇರೆ ಉಪಯೋಗ ಇದೆ..



ಇತ್ತೀಚಿನ ಕಾಲದಲ್ಲಿ ಬರುತ್ತಿರುವ ಲ್ಯಾಪ್‍ಟಾಪ್‌ಗಳಿಗೆ ಹಿಂಬದಿ ಅಥವಾ ಬದಿಯಲ್ಲಿ ಒಂದು ಸ್ಲಾಟ್ ಇರುವುದನ್ನು ಗಮನಿಸಿದ್ದೀರಾ..? ಆದರೆ ಅದು ನಿಜವಾಗಿ ಸ್ಲಾಟ್ ಅಲ್ಲ. ಅದು ಲ್ಯಾಪ್‌ಟಾಪ್ ಸೆಕ್ಯುರಿಟಿಗಾಗಿ ಇಟ್ಟ ಒಂದು ಲಾಕ್. ಹೌದು ನೀವು ಕೇಳಿದ್ದು ನಿಜ. ಲ್ಯಾಪ್‌ಟಾಪನ್ನು ಲಾಕ್ ಮಾಡಿಕೊಳ್ಳಲು ಅದು ಉಪಯೋಗಕ್ಕೆ ಬರುತ್ತದೆ. ಇದನ್ನು ಮೊದಲು ಕೆನ್ಸಿಂಗ್‍ಟನ್ ಎಂಬ ಕಂಪೆನಿ ತಯಾರು ಮಾಡಿತು. ಹಾಗಾಗಿ ಆ ಲಾಕನ್ನು ಕೆನ್ಸಿಂಗ್‌ಟನ್ ಲಾಕ್ ಎಂದು ಕರೆಯುತ್ತಾರೆ. ಅದಕ್ಕೆ ಬೈಕಿಗೆ ಹೋಲುವ ಒಂದು ವೈರ್ ಲಾಕನ್ನು ಸೆಟ್ ಮಾಡಿಕೊಳ್ಳಬಹುದು. ಈ ವೈರ್ ಲಾಕ್ ನಮಗೆ ಮಾರುಕಟ್ಟೆಯಲ್ಲಿ ಲಭಿಸುತ್ತದೆ.

ಲ್ಯಾಪ್‌ಟಾಪ್ ಲಾಕ್‍ಗಳು ರೂ.100 ರಿಂದ ಆರಂಭವಾಗಿ ರೂ.ಸಾವಿರದವರೆಗೂ ಗ್ರಾಹಕರಿಗೆ ಲಭ್ಯವಾಗುತ್ತಿವೆ. ಆದರೆ ಯಾವ ಲಾಕನ್ನು ಖರೀದಿಸಿದರೂ ಅದನ್ನು ಲ್ಯಾಪ್‍ಟಾಪ್ ಸೆಕ್ಯುರಿಟಿಗಾಗಿ ಉಪಯೋಗಿಸಬಹುದು. ಅದಕ್ಕಿರುವ ಚಿಕ್ಕ ಹಿಡಿಯನ್ನು ಲ್ಯಾಪ್‍ಟಾಪ್‌ಗೆ ಇರುವ ಲಾಕ್‌ಸ್ಲಾಟ್‌ನಲ್ಲಿ ಅಳವಡಿಸಬೇಕು. ಬಳಿಕ ಎರಡನೇ ಬದಿಯನ್ನು ಬೇರೆ ಸ್ಥಿರವಾಗಿರುವ ಯಾವುದಾದರೂ ಪೋಲ್ ಅಥವಾ ಕಂಪ್ಯೂಟರ್ ಟೇಬಲ್‍ಗೆ ಇರುವ ಕಾಲುಗಳಿಗೆ ಅಳವಡಿಸಬೇಕಾಗುತ್ತದೆ. ಇದರಿಂದ ಲ್ಯಾಪ್‍ಟಾಪ್ ಲಾಕ್ ಆಗುತ್ತದೆ. ಇನ್ನು ಅದನ್ನು ಯಾರೂ ಕೊಂಡೊಯ್ಯಲು ಅವಕಾಶ ಇರಲ್ಲ. ಆ ರೀತಿ ಲ್ಯಾಪ್‍ಟಾಪನ್ನು ಗ್ರಾಹಕರು ರಕ್ಷಿಸಿಕೊಳ್ಳಬಹುದು.

No comments