Header Ads

test

ಇದಕ್ಕಿಂತಲೂ ದಾರುಣ ಘಟನೆ ಇರಲ್ಲ... ಓರ್ವ ಮಹಿಳೆ ನಾಚಿಕೆ ಬಿಟ್ಟು ಕೇಳಿದರೂ ಅವರು ಹಿಡಿಸಿಕೊಳ್ಳಲಿಲ್ಲ

ಕೆಲವು ಘಟನೆಗಳು ಊಹಿಸಿಕೊಂಡರೇನೇ ಹೃದಯ ಹಿಂಡಿದಂತಾಗುತ್ತದೆ. ಮಹಿಳೆಯರು ಸಣ್ಣಪುಟ್ಟ ಸಹಾಯ ಕೇಳಿದರೂ ಆಗಲ್ಲ ಎಂದು ಮಾಡುತ್ತಿರುತ್ತಾರೆ. ಅಯ್ಯೋ ಹೆಣ್ಣು ಮಗು ಕೇಳಿದೆ ಎಂದು ಕೂಡಲೆ ಹೆಲ್ಪ್ ಮಾಡುತ್ತಾರೆ. ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡಲು ಪ್ರತಿಯೊಬ್ಬರೂ ಮುಂದೆ ಬರುತ್ತಾರೆ. ಆದರೆ ತಮಿಳುನಾಡಿನ ಓರ್ವ ಬಸ್ ಡ್ರೈಅರ್ ಹಾಗೂ ನಿರ್ವಾಹಕ ಓರ್ವ ಮಹಿಳೆ ಎಂದೂ ನೋಡದೆ ಸಂಕೋಚ ಪಡುವಂತ ವಿಷಯವನ್ನು ಅವರ ಬಳಿ ಪದೇಪದೇ ಹೇಳಿದರೂ ಸಹ ಅವರು ಹಿಡಿಸಿಕೊಂಡಿಲ್ಲ. ಹಾಗಾಗಿ ಆ ಮಹಿಳೆ ಬಸ್‌ನಿಂದ ಕೆಳಕ್ಕೆ ಜಿಗಿದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದಾರೆ ಆಕೆ.


ಸಂಪೂರ್ಣ ವಿವರಗಳನ್ನು ನೋಡುವುದಾದರೆ... ತಮಿಳುನಾಡಿನ ವಿರುದ್ ನಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಡಯಾನ್ ಕುಳಂ ಮೂಲದ ಪಾಂಡಿಯಮ್ಮಾಲ್ ಎಂಬ ಮಹಿಳೆ ಬಸ್‌ನಲ್ಲಿ ಅಂಡಿಪಟ್ಟಿಯಿಂದ ಶ್ರೀವಿಲ್ಲಿ ಪುತ್ತೂರಿಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಆಕೆಗೆ ಪ್ರಕೃತಿ ಕರೆ ಬಂದಿದೆ.. ಅಂದರೆ ಮೂತ್ರ ವಿಸರ್ಜನೆಗೆ ಅವಸರವಾಗಿದೆ. ಡ್ರೈವರ್ ಮತ್ತು ಕಂಡಕ್ಟರನ್ನು ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ಲಿಸುವಂತೆ ಕೇಳಿದ್ದಾರೆ. ಆದರೆ ಡ್ರೈವರ್ ಈಗಲೇ ತಡವಾಗಿದೆ, ಸದ್ಯಕ್ಕೆ ಎಲ್ಲೂ ಬಸ್ ನಿಲ್ಲಲ್ಲ. ಒಬ್ಬರು ಇಳಿದರೆ ಅದರ ಹಿಂದೆಯೇ ಒಬ್ಬಬ್ಬರೇ ಇಳಿಯುತ್ತಾರೆ. ಬಸ್ ಎಲ್ಲಿಸಿ ನಿಲ್ಲಿಸುತ್ತದೋ ಅಲ್ಲೇ ಮೂತ್ರ ವಿಸರ್ಜನೆ ಮಾಡಿ ಎಂದು ಹೇಳಿದ್ದಾರೆ. ಆಕೆ ಎಷ್ಟು ವಿನಂತಿಸಿಕೊಂಡರೂ ಅವರು ಕೇಳಿಲ್ಲ.

ಆಕೆ ಬಸ್ಸಿನಲ್ಲಿ ನಾಲ್ಕು ಜನರ ಮುಂದೆ ಅವಮಾನ ಮಾಡಿಕೊಳ್ಳುವುದು ಇಷ್ಟವಿಲ್ಲದೆ, ಮೂತ್ರವನ್ನೂ ತಡೆದುಕೊಳ್ಳಲು ಸಾಧ್ಯವಾಗದೆ ಬಸ್‌ನಿಂದ ಧುಮುಕಿದಳು. ಅದರಿಂದ ಶಾಕ್ ಆದ ಇತರೆ ಪ್ಯಾಸೆಂಜರ್‌ಗಳು ಕೂಡಲೆ ಬಸ್ ನಿಲ್ಲಿಸಿದರು. ಆಕೆ ಕಾಲಿಗೆ ಪ್ಯಾಕ್ಚರ್ ಜತೆಗೆ ಗಾಯಗಳೂ ಆಗಿವೆ.

ಬಳಿಕ ಆಕೆಯನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯಕ್ಕೆ ಆಕೆ ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಬಸ್ ಡ್ರೈವರ್ ಮತ್ತು ಕಂಡಕ್ಟರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರದಲ್ಲಿ ಆರ್‌ಟಿಸಿ ಸಹ ತುಂಬಾ ಗರಂ ಆಗಿದೆ. ತಮಿಳುನಾಡು ಆರ್‌ಟಿಸಿ ಅಧಿಕಾರಿಗಳು ಬಸ್ ಡ್ರೈವರ್ ಮತ್ತು ಕಂಡಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕಂಡಕ್ಟರ್ ಮತ್ತು ಡ್ರೈವರ್ ಮೊದಲೇ ಬಸ್ ನಿಲ್ಲಿಸಿದ್ದರೆ ಇಷ್ಟೆಲ್ಲಾ ದುರಂತ, ಅವಮಾನ ಆಗುತ್ತಿತ್ತೇ... ಯಾವುದಕ್ಕೂ ಸ್ವಲ್ಪ ಕಾಮನ್‌ಸೆನ್ಸ್ ಇರಬೇಕಲ್ಲವೇ...?

No comments