Header Ads

test

ಮದುವೆಯಲ್ಲಿ ಎರ‍್ರಾ ಬಿರ‍್ರಿ ಕುಣಿತ ... ಚರಂಡಿಗೆ ಉರುಳಿ ಬಿದ್ದ ಮದು ಮಗ!!

ಮದುವೆ ಸಂಭ್ರಮ ಮುಗಿಲು ಮುಟ್ಟಿತ್ತು. ಎಣ್ಣೆ, ಸಂಭ್ರಮದಲ್ಲಿ ಮೈಮರೆತು ಡ್ಯಾನ್ಸ್ ಮಾಡಿದರು. ಸ್ವಲ್ಪ ಹೊತ್ತಿಗೆಲ್ಲಾ ಅವರ ಆನಂದ ಠುಸ್ ಆಯಿತು. ಎಲ್ಲರೂ ಡ್ರೈನೇಜ್‌ನಲ್ಲಿ ಬಿದ್ದರು. ಛೀ... ಥೂ ಎನ್ನುವಂತಾಯಿತು. ಅದರಲ್ಲಿ ಮದುಮಗ ಸಹ ಇದ್ದಾನೆ.



ನೋಯಿಡಾದಲ್ಲಿನ ಹೋಷಿಯಾರ್‌‍ಪೂರ್ ಮೂಲದ ಒಂದು ಕುಟುಂಬ... ಮಗನ ಮದುವೆಗೆಂದು ಫಂಕ್ಷನ್ ಹಾಲು ಬುಕ್ ಮಾಡಿತು. ಹಾಲ್‌ಗೂ ರಸ್ತೆಗೂ ನಡುವೆ ಒಂದು ಚರಂಡಿ ಇದ್ದ ಕಾರಣ ಫಂಕ್ಷನ್ ಹಾಲ್ ಮಾಲೀಕರು ಆ ಚರಂಡಿ ಮೇಲೆ ನಾಲ್ಕು ಹಲಗೆ ಹಾಕಿ ತಾತ್ಕಾಲಿಕ ಬ್ರಿಡ್ಜ್‌ ವ್ಯವಸ್ಥೆ ಮಾಡಿದ್ದರು. ಅದಾಗಲೆ ಮದುವೆ ಮಂಟಪಕ್ಕೆ ಬಂದ ವಧು ಕಡೆಯ ಬಂಧುಗಳು ಮದುಮಗನಿಗಾಗಿ ಕಾಯುತ್ತಿದ್ದರು. ಬಾಜಾ ಭಜಂತ್ರಿಗಳಿಂದ ಮದುಮಗನನ್ನು ಕರೆತರುತ್ತಿದ್ದಾರೆ. ಉತ್ಸಾಹವಾಗಿ ಡ್ಯಾನ್ಸ್ ಮಾಡುತ್ತಾ ಮದುವೆ ಮಂಟಪಕ್ಕೆ ಬರುತ್ತಿದ್ದಾರೆ. ನಡುವೆ ಚರಂಡಿ ಇದೆ ಎಂದು ಅದರ ಮೇಲೆ ಹಲಗೆ ಹಾಕಿದ್ದಾರೆಂಬ ವಿಷಯವನ್ನು ಮರೆತು ಎದ್ದು ಬಿದ್ದು ಡ್ಯಾನ್ಸ್ ಮಾಡುತ್ತಿದ್ದಾರೆ.

ಒಮ್ಮೆಲೆ ಬಹಳಷ್ಟು ಮಂದಿ ಅದರ ಮೇಲೆ ಹತ್ತಿದ ಬಳಿಕ ಅವರ ತೂಕ, ತೂರಾಟ ತಡೆಯದೆ ಅದು ಮುರಿದು ಬಿದ್ದು ಎಲ್ಲರೂ ಚರಂಡಿಗೆ ಬಿದ್ದಿದ್ದಾರೆ. ಅದರಲ್ಲೂ ಮದುವೆ ವಸ್ತ್ರಗಳಲ್ಲಿ ಮಿಂಚುತ್ತಿದ್ದ ಮದು ಮಗ ಸಹ ಇದ್ದ. ಇದನ್ನು ನೋಡಿದ ಬೇರೆಯವರು ಇದೇನು ಪಜೀತಿ ಗುರು ಎಂದುಕೊಂಡು ಚರಂಡಿಗೆ ಬಿದ್ದವರನ್ನು ಮೇಲೆತ್ತಿದರು.

ಮದು ಮಗ ಧರಿಸಿದ ಆಭರಣಗಳೆಲ್ಲಾ ಚರಂಡಿ ಪಾಲಾಗಿವೆ. ಕಾಲುವೆಗೆ ಬಿದ್ದ 15 ಮಂದಿಯನ್ನು ಮೇಲೆತ್ತಲಾಯಿತು. ಪ್ರಾಣ ನಷ್ಟ ನಡೆಯದ ಕಾರಣ ಮದುವೆಯವರೆಲ್ಲಾ ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಫಂಕ್ಷನ್ ಹಾಲ್‌ನ ಮಾಲೀಕರ ಜತೆಗೆ ಗಲಾಟೆ, ರಂಪಾಟ ಮಾಡಿಕೊಂಡು ಹಾಲ್ ಬುಕಿಂಗ್‌ಗಾಗಿ ಕಟ್ಟಿದ ರೂ.3 ಲಕ್ಷ ವಾಪಸ್ ನೀಡುವಂತೆ ಜಗಳ ಮಾಡಿದ್ದಾರೆ.

ಅದಕ್ಕೆ ಮಾಲೀಕರು ಅಂಗೀಕರಿಸದ ಕಾರಣ ಮದುವೆ ಏರ್ಪಾಟುಗಳನ್ನು ಪ್ರಾರಂಭಿಸಿದರು ಕುಟುಂಬಿಕರು. ಮದು ಮಗನಿಗೆ ಸ್ನಾನ ಮಾಡಿಸಿ ಸ್ವಚ್ಛಗೊಳಿಸಿ ಕರೆದುಕೊಂಡು ಬಂದು ಹಸೆಮಣೆ ಮೇಲೆ ಕೂರಿಸಿದರು. ಮುಹೂರ್ತಕ್ಕೂ ಮೊದಲು ಅಪಶಕುನ ಎದುರಾದರೂ ಸಮಯಕ್ಕೆ ಸರಿಯಾಗಿ ಮದು ಮಗಳ ಕೊರಳಿಗೆ ಮೂರು ಗಂಟು ಹಾಕಿ ತಾಳಿ ಕಟ್ಟಿದ್ದಾನೆ ಮಗು ಮಗ. ಒಟ್ಟಾರೆ ಮದುವೆಗೆ ಶುಭಂ ಬೋರ್ಡ್ ಬಿದ್ದಿದೆ. ಒಟ್ಟಾರೆ ಈ ರೀತಿಯ ಪರಿಸ್ಥಿತಿ ಯಾರಿಗೂ ಬರಲಬಾರದು ಅಲ್ಲವೇ?

No comments