Header Ads

test

ಪ್ರೇಮಿಗಳಿಗೆ ಅಸಲಿ ಹಬ್ಬ, ದೂರವಾಗುವ ಜೋಡಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆಯೇ? ಆನ್‌ಲೈನ್‌ನಲ್ಲಿ ಮದುವೆ..!

ಆನ್‌ಲೈನ್‌ನಲ್ಲಿ ಮೆಸೇಜ್‌ಗಳು, ವೀಡಿಯೋ ಕಾಲ್‍ಗಳಷ್ಟೇ ಅಲ್ಲ ಮದುವೆಗಳನ್ನೂ ಮಾಡಿಕೊಳ್ಳಬಹುದು ಈಗ. ಒಂದು ಕಾಲದಲ್ಲಿ ಪ್ರೇಮಿಗಳು ಮದುವೆಯಾಗಬೇಕು ಎಂದರೆ ರಿಜಿಸ್ಟರ್ ಮ್ಯಾರೇಜ್ ಕಚೇರಿ ಸುತ್ತ ಸುತ್ತಬೇಕಾಗಿತ್ತು. ಆದರೆ ಈಗ ಮದುವೆಯಾಗಬೇಕು ಎಂದರೆ ಆನ್‌ಲೈನ್‌ನಲ್ಲೇ ಮಾಡಿಕೊಳ್ಳಬಹುದು. ಇದೇನಿದು ಆನ್‌ಲೈನ್‌ನಲ್ಲಿ ಮದುವೆ ಹೇಗೆ ಸಾಧ್ಯ ಎಂದುಕೊಳ್ಳುತ್ತಿದ್ದೀರಾ? ಆನ್‌ಲೈನ್‌ನಲ್ಲಿ ಮದುವೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು ಎಂದು ಪಶ್ಚಿಮ ಬಂಗಾಳ ರಿಜಿಸ್ಟ್ರೇಷನ್ ಇಲಾಖೆ ಅಧಿಕಾರಿಗಳು ನೋಟಿಫಿಕೇಷನ್ ಬಿಡುಗಡೆ ಮಾಡಿದ್ದಾರೆ. ಈ ಸೌಲಭ್ಯ ಸದ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಜಾರಿಯಲ್ಲಿದೆ.

  • ಆನ್‌ಲೈನ್‌ನಲ್ಲಿ ಮದುವೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂದರೆ ನೀವು ಪಾಲಿಸಬೇಕಾಗಿರುವ ನಿಯಮಗಳು:

  • ಆನ್‌ಲೈನ್‌ನಲ್ಲಿ ಪಶ್ಚಿಮ ಬಂಗಾಲ್ ಮದುವೆ ರಿಜಿಸ್ಟ್ರೇಷನ್ ವೆಬ್‌ಸೈಟಿನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ದಾಖಲಿಸಬೇಕು.

  • ನಿಮ್ಮ ವಿಳಾಸ ದೃಢೀಕರಣ, ಬೆರಳಚ್ಚು, ಸಹಿ, ಐಡಿ ಫ್ರೂಫ್ ಅಪ್‌ಲೋಡ್ ಮಾಡಬೇಕು.

  • ನಿಮ್ಮ ಹತ್ತಿರದ ರಿಜಿಸ್ಟ್ರಾರನ್ನು ಆಯ್ಕೆ ಮಾಡಿಕೊಳ್ಳಬಹುದು.

  • ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮದುವೆಯಾಗುತ್ತಿರುವ ವ್ಯಕ್ತಿಗಳ ಮೊಬೈಲ್‌ಗೆ ಎಸ್‌ಎಂಎಸ್ ಬರುತ್ತದೆ ರಿಜಿಸ್ಟ್ರೇಷನ್ ಕಚೇರಿಯಿಂದ.

  • ಪತ್ರಗಳನ್ನು ಪರಿಶೀಲಿಸಿದ ಬಳಿಕ ಮದುವೆಯಾಗುತ್ತಿರುವವರ ಮನೆಗೆ ಬರುತ್ತಾರೆ ರಿಜಿಸ್ಟ್ರಾರ್.

  • ಮೂವರು ಸಾಕ್ಷಿಗಳು ಕಡ್ಡಾಯವಾಗಿ ಇರಬೇಕು. ಮೂವರ ಸಾಕ್ಷಿಗಳ ಸಮ್ಮುಖದಲ್ಲಿ ಮದುವೆಯನ್ನು ರಿಜಿಸ್ಟರ್ ಮಾಡಿ, ಕೂಡಲೆ ಮ್ಯಾರೇಜ್ ಸರ್ಟಿಫಿಕೇಟ್ ನೀಡುತ್ತಾರೆ ರಿಜಿಸ್ಟ್ರಾರ್.

ತುಂಬಾ ಸುಲಭವಾದ ಕೆಲಸ ಅಂದುಕೊಳ್ಳುತ್ತಿದ್ದೀರಾ ಅಲ್ಲವೇ? ಆದರೆ ಮದುವೆ ಬಳಿಕ ಸುಲಭ ಎಂಬ ಪದ ಕೇಳಿದರೇನೇ ಕೋಪ ಬರುತ್ತದೆ ನಿಮಗೆ. ಪ್ರೇಮ ವಿವಾಹಗಳಿಗೆ ಸಾಕಷ್ಟು ಉಪಯೋಗವಾಗಲಿದೆ ಈ ಪ್ರಕ್ರಿಯೆ.
ಇದನ್ನು ತಪ್ಪಾಗಿ ಬಳಕೆ ಮಾಡದೆ, ನಿಜವಾಗಿ ಪ್ರೀತಿ ಇರುವವರು ಈ ಪ್ರಕ್ರಿಯೆ ಮೂಲಕ ಸುಲಭವಾಗಿ ಮದುವೆ ಮಾಡಿಕೊಳ್ಳಬಹುದು. ಆದರೆ ಈ ಪ್ರಕ್ರಿಯೆ ಮೂಲಕ ದೂರವಾಗುವ ಪ್ರೇಮ ಜೋಡಿಗಳೇ ಹೆಚ್ಚು ಆಗುತ್ತವೆ. ಯಾಕೆಂದರೆ ಮದುವೆ ಇಷ್ಟು ಸುಲಭವಾಗಿ ಮಾಡಿಕೊಳ್ಳಬಹುದಾದ ಕಾರಣ ಟೈಮ್ ಪಾಸ್‌ಗೆ ಲವ್ ಮಾಡಿ ಏನೋ ಒಂದು ಹೇಳಿ ಶೀಘ್ರವಾಗಿ ಬೇಗ ದೂರವಾಗುತ್ತಾರೆ. ಆದಕಾರಣ ಈ ಪ್ರಕ್ರಿಯೆಯಿಂದ ಸ್ವಲ್ಪ ಬೇಗನೆ ದೂರವಾಗುವ ಅವಕಾಶಗಳು ಇರುತ್ತವೆ ಪ್ರೇಮಿಗಳಿಗೆ.

No comments