Header Ads

test

ಸೌಂದರ್ಯ ರಜನಿಕಾಂತ್ ಭಾವೋದ್ವೇಗ... ಮಗನನ್ನು ಒಡಲಲ್ಲಿ ಕೂರಿಸಿಕೊಂಡು..

ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ವಿವಾಹ ಸೋಮವಾರ ವಿಶಾಖನ್ ವನಗಮುಡಿಯೊಂದಿಗೆ ಅದ್ದೂರಿಯಾಗಿ ನಡೆಯಿತು. ಚೆನ್ನೈನ ಎಂಆರ್‌ಸಿ ನಗರದಲ್ಲಿ ಇರುವ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸೌಂದರ್ಯ-ವಿಶಾಖನ್ ಜೋಡಿ ಒಂದಾಯಿತು. ಈ ಕಾರ್ಯಕ್ರಮಕ್ಕೆ ಸಿನಿಮಾ, ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿದ್ದರು. ಆದರೆ ಮದುವೆ ಬಳಿಕ ಸೌಂದರ್ಯ ಭಾವೋದ್ವೇಗಕ್ಕೆ ಒಳಗಾಗಿ ಟ್ವೀಟ್ ಮಾಡಿದ್ದಾರೆ.


"ನನ್ನ ಜೀವನದಲ್ಲಿ ಅತ್ಯಂತ ಮುಖ್ಯವಾದ ವ್ಯಕ್ತಿಗಳು ಮೂವರು... ಅಪ್ಪ, ನನ್ನ ಮಗ, ನನ್ನ ಜೀವನಕ್ಕೆ ಅಡಿಯಿಟ್ಟಿರುವ ನನ್ನ ವಿಶಾಗನ್" ಎಂಬ ಶೀರ್ಷಿಕೆಯನ್ನು ಹಾಕಿದ್ದಾರೆ. ಮದುವೆಯಲ್ಲಿ ತೆಗೆದ ಕೆಲವು ಫೋಟೋಗಳನ್ನು ಸೌಂದರ್ಯ ಟ್ವಿಟರ್‌‍ನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋಗಳಲ್ಲಿ ಭಾವೋದ್ವೇಗ ಸನ್ನಿವೇಶಗಳು ಕಾಣಿಸುತ್ತವೆ. ವಿಶಾಖನ್ ತಾಳಿ ಕಟ್ಟುವ ಸಮಯದಲ್ಲಿ ಸೌಂದರ್ಯ ಭಾವೋದ್ವೇಗಕ್ಕೆ ಒಳಗಾದರು. ಆಕೆಯ ಜತೆಗೆ ಲತಾ ರಜನಿಕಾಂತ್, ಐಶ್ವರ್ಯಾ ಧನುಷ್ ಕಣ್ಣಾಲಿಗಳು ತುಂಬಿ ಬಂದವು. ಇದರ ಜತೆಗೆ #ಮಿಸ್ಟರ್ ಅಂಡ್ ಮಿಸಸ್, #ನಾವು ಒಂದಾದೆವು ಎಂಬ ಹ್ಯಾಶ್ ಟ್ಯಾಗ್‌ ಜತೆಗೆ ಪತಿ, ಮಗ, ತಂದೆಯೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರತಿ ಸಂದರ್ಭದಲ್ಲೂ ಸೌಂದರ್ಯ ತಮ್ಮ ಮಗನನ್ನು ಜತೆಗೇ ಇಟ್ಟುಕೊಂಡಿದ್ದರು. ಮದುವೆ ಬಳಿಕ ಮಗನನ್ನು ಒಡಲಲ್ಲಿ ಕೂರಿಸಿಕೊಂಡು ಸಂಭ್ರಮಿಸಿದರು.

ಫೋಟೋಗಳಲ್ಲಿ ರಜನಿಕಾಂತ್ ತಮ್ಮ ಮಗಳಿಗೆ ಧೈರ್ಯ ತುಂಬುತ್ತಿದ್ದಾರೆ. ಅದೇ ರೀತಿ ಸೌಂದರ್ಯ ತನ್ನದೇ ಸ್ಟೈಲ್‌ನಲ್ಲಿ ತೆಗೆಸಿಕೊಂಡಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ. ತನ್ನನ್ನು ಇಷ್ಟೆಲ್ಲಾ ಚೆಂದವಾಗಿ ಅಲಂಕರಿಸಿದವರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಮೇಕಪ್ ಮಾಡಿದವರ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

ಸೌಂದರ್ಯ ರಜನಿಕಾಂತ್ ಅವರಂತೆಯೇ ವಿಶಾಖನ್‍ಗೂ ಇದು ಎರಡನೇ ಮದುವೆ. ಮ್ಯಾಗಜಿನ್ ಒಂದರ ಸಂಪಾದಕಿ ಕನಿಖಾ ಕುಮಾರನ್ ಅವರನ್ನು ಮಿಶಾಖನ್ ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದಾರೆ. ಇನ್ನು ಸೌಂದರ್ಯ ಸಹ ಅಷ್ಟೇ ಉದ್ಯಮಿ ಅಶ್ವಿನ್‍ರನ್ನು ವರಿಸಿದ್ದರು. ಬಳಿಕ ಭಿನ್ನಾಭಿಪ್ರಾಯಗಳ ಕಾರಣ 2017ರಲ್ಲಿ ಇವರಿಬ್ಬರೂ ದೂರವಾದರು. ಇವರಿಗೆ ಮೂರು ವರ್ಷದ ವೇದ್ ಕೃಷ್ಣ ಹೆಸರಿನ ಮಗ ಇದ್ದಾನೆ.

ಚೆನ್ನೈನಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಈ ರಿಸೆಪ್ಷನ್ ನೆರವೇರಿದ್ದು ಗೊತ್ತೇ ಇದೆ. ಕುಟುಂಬಿಕರು, ಬಂಧುಮಿತ್ರರನ್ನು ಮಾತ್ರ ಈ ಆರತಕ್ಷತೆ ಕಾರ್ಯುಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು ಈಗ ವೈರಲ್ ಆಗುತ್ತಿವೆ.



No comments