ಮೃತ ಪತಿಯ ಫೋಟೋ ಎದುರಲ್ಲೇ ಮಗುವನ್ನು ತೋರಿಸಿದ ಅಮೃತಾ: ಹೃದಯ ಮುರಿಯುವ ದೃಶ್ಯ ವೈರಲ್.
ಕಳೆದ ವರ್ಷ (2018) ಸೆಪ್ಟಂಬರ್ 14ರಂದು ಮಡದಿಯ ತಂದೆಯ ಕಡೆಯವರಿಂದ, ತಾಯಿ ಹಾಗೂ ಮಡದಿಯ ಎದುರಲ್ಲೇ ಬರ್ಬರವಾಗಿ ಹತ್ಯೆಗೆ ಒಳಗಾದ ಪ್ರಣಯ್ ಪತ್ನಿ ಅಮೃತಾ ಕಳೆದ ವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆ ಮಗುವಿನ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.ಪ್ರಣಯ್ ಎಂಬ ಯುವಕ ಮೇಲ್ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ತನ್ನ ಪತ್ನಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪರೀಕ್ಷೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಿಂದಿರುಗುತ್ತಿದ್ದ ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದ ವಿಚಾರ ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಯುವತಿಯ ತಂದೆಯ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು.
ಅಮೃತಾ ಮದುವೆಯಾದ ಹೊಸತರಲ್ಲಿ ತಂದೆ ಮಾರುತಿ ರಾವ್ ಮಗಳನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು ತೆಗೆಸುವಂತೆ ಒತ್ತಡವು ಹಾಕಿದ್ದರು. ಆದರೆ ಪಟ್ಟು ಹಿಡಿದ ಅಮೃತಾ ಪ್ರಾಣ ಹೋದರು ಮಗುವನ್ನು ಕೊಲ್ಲಲಾರೆ ಎಂದು ಹೇಳಿದ್ದಳು. ಆದರೆ ಇದನ್ನು ಸಹಿಸಿದ ತಂದೆ ಕೆಲ ದಿನಗಳ ಬಳಿಕ ಒಂದು ಕೋಟಿ ರೂಪಾಯಿ ಸುಪಾರಿ ಕೊಟ್ಟು ಅಳಿಯನನ್ನೇ ಕೊಲ್ಲಿಸಿದ್ದರು.ಪ್ರಣಯ್ ಹತ್ಯೆಯ ಬಳಿಕವೂ ಅಮೃತಾಳಿಗೆ ಅಬರ್ಷನ್ ಮಾಡಿಸುವಂತೆ ಒತ್ತಾಯಿಸಲಾಗಿದೆ ಎನ್ನಲಾಗಿತ್ತು. ಆದರೆ ಅಮೃತಾ ಮಗುವನ್ನು ಉಳಿಸಿಕೊಂಡು ಇದೀಗ ಮುದ್ದಾದ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾಳೆ. ಈ ಫೋಟೋ ಫೇಸ್ಬುಕ್ನಲ್ಲಿ ಜನ ಶೇರ್ ಮಾಡಿಕೊಂಡಿದ್ದಾರೆ. ಅದಲ್ಲದೇ ಅಮೃತಾ ತನ್ನ ಮಗುವಿನ ತಂದೆಯ ಪೋಟೋ ಹಿಂದೆಯೇ ‘ಡ್ಯಾಡ್ ಇಸ್ ಫಾರ್ ಎವರ್ ಮೈ ಹೀರೋ’ ಎಂದು ಪೋಸ್ಟರ್ ಹಾಕಿಸಿ ಪೋಟೋ ತೆಗೆಸಿಕೊಂಡಿದ್ದಾಳೆ..

Post a Comment