Header Ads

test

ನಿಮ್ಮ ಮನೆಯಲ್ಲಿ, ಪರಿಸರದಲ್ಲಿ ಇರುವ ಗಿಡಗಳು ಲೈಟ್‌ಗಳ ರೀತಿ ಹೊಳೆದರೆ..? ಶಾಕಿಂಗ್ ಅನ್ನಿಸುತ್ತದೆ ಅಲ್ಲವೇ..!

ನೀವು ನಿಮ್ಮ ಮನೆಯಲ್ಲಿ ಹೂಕುಂಡಗಳಲ್ಲಿ ಬೆಳೆಸುವ ಗಿಡ ಕತ್ತಲಾದ ಕೂಡಲೆ ಅದಷ್ಟಕ್ಕದೇ ಲೈಟ್ ರೀತಿ ಹೊಳೆದರೆ... ಹೇಗಿರುತ್ತದೆ..? ಕೇಳಲು ತುಂಬಾ ಶಾಕಿಂಗ್ ಆಗಿದೆಯಲ್ಲವೇ.. ಇನ್ನು ನೀವು ಹೊರಗೆ ಹೋದರೆ.... ಬೀದಿಯಲ್ಲಿ ಲೈಟ್‌‍ಗಳಿಗೆ ಬದಲಾಗಿ ಗಿಡಗಳೇ ಲೈಟ್‌ಗಳಂತೆ ಹೊಳೆದರೆ..? ಕಚೇರಿಯಲ್ಲಿ, ಮನೆಗಳಲ್ಲಿ ನಾವು ಇಟ್ಟುಕೊಳ್ಳುವ ಲೈಟ್‌ಗಳಿಗೆ ಬದಲಾಗಿ ಗಿಡಗಳನ್ನು ಇಟ್ಟುಕೊಂಡರೆ... ಅವುಗಳಿಂದ ಲೈಟ್ ತರಹ ಕಾಂತಿ ಬಂದರೆ..? ತುಂಬಾ ಅದ್ಭುತ ಅನ್ನಿಸುತ್ತದೆ ಅಲ್ಲವೇ.. ಹೌದು, ನಿಜ. ಅದಕ್ಕಿಂತ ಅಚ್ಚರಿ ಇನ್ನೊಂದಿರಲ್ಲ. ಆದರೆ ಅದು ಸಾಧ್ಯವೇ? ಸಾಧ್ಯವಾಗುತ್ತದೆ ಎಂದೇ ಹೇಳಬಹುದು. ಶಾಕ್ ಆಗಬೇಡಿ. ಇದು ನಿಜ. ಅಮೆರಿಕದ ಮೆಸ್ಸಾಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.. ಆ ಅಸಾಧ್ಯವನ್ನು ಶೀಘ್ರದಲ್ಲೇ ಸುಸಾಧ್ಯ ಮಾಡಲಿದೆ.


ರಾತ್ರಿ ಹೊತ್ತು ಮಿಂಚು ಹುಳು ಕತ್ತಲಲ್ಲಿ ನಮಗೆ ಹೊಳೆಯುತ್ತಾ ಕಾಣಿಸುತ್ತವೆ ಅಲ್ಲವೇ. ಅವುಗಳ ಹಿಂಭಾಗದಿಂದ ಬೆಳಕು ಬರುತ್ತಿರುತ್ತದೆ. ಆದರೆ ಗಿಡಗಳನ್ನು ಲೈಟ್‌ಗಳಂತೆ ಬೆಳಗಿಸಲು ಮೆಸ್ಸಾಚೂಸೆಟ್ಸ್ ಆಫ್ ಟೆಕ್ನಾಲಜಿ (ಎಂಐಟಿ) ವಿಜ್ಞಾನಿಗಳು ಮಿಂಚುಹುಳುಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಮಿಂಚುಹುಳುಗಳಿಂದ ಆ ರೀತಿ ಬೆಳಕು ಬರಲು ಕಾರಣ luciferin ಎಂಬ ಅಣು. ಇದು Luciferase ಎಂಬ ಎಂಜೈಮ್, ಇನ್ನೊಂದು ಕೋ-ಎಂಜೈಮ್ ಅಣುವಿನ ಸಹಾಯದಿಂಮ್ದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ಶಕ್ತಿಯೇ ಕಾಂತಿ ರೂಪದಲ್ಲಿ ಹೊರಗೆ ಬರುತ್ತದೆ. ಹಾಗಾಗಿಯೇ ಮಿಂಚುಹುಳು ಹಿಂಬದಿ ಭಾಗ ಹೊಳೆಯುತ್ತಿರುತ್ತದೆ.

ಆದರೆ ಮಿಂಚುಹುಳುಗಳು ಕಾಂತಿಯನ್ನು ಹೊರಚೆಲ್ಲಲು ಕಾರ್ಣವಾದ ಅದೇ ಅಣುಗಳು, ಎಂಜೈಮ್‌ಗಳನ್ನು ಎಂಐಟಿ ತಜ್ಞರು ಹಲವು ಗಿಡಗಳ ಎಲೆಗಳಿಗೆ ನ್ಯಾನೋ ಅಣುಗಳ ರೂಪದಲ್ಲಿ ಕಳುಹಿಸಿದರು. ಆ ಎಲೆಗಳು ಸಹ ಮಿಂಚುಹುಳುಗಳ ರೀತಿ ಹೊಳಪನ್ನು ಬೀರಲು ಪ್ರಾರಂಭಿಸಿದವು. ಅದರೆ ಆರಂಭದಲ್ಲಿ ಆ ಎಲೆಗಳು ಕೇವಲ ೪೫ ನಿಮಿಷಗಳ ಕಾಲ ಮಾತ್ರ ಕಾಂತಿಯನ್ನು ಹೊರಹೊಮ್ಮಿಸಿದವು. ವಿಜ್ಞಾನಿಗಳು ಕೆಲವು ಬದಲಾವಣೆಗಳನ್ನು ಮಾಡಿ ಅ ಸಮಯವನ್ನು 3.5 ಗಂಟೆಗಳಿಗೆ ಹೆಚ್ಚಿಸಿದರು. ಈ ಹಿನ್ನೆಲೆಯಲ್ಲಿ ಎಲೆಗಳಿಂದ ಬರುವ ಕಾಂತಿ ಗುಣಮಟ್ಟ ಸಹ ಹೆಚ್ಚಾಯಿತು. ಆ ಕಾಂತಿಯಲ್ಲಿ ಪುಸ್ತಕಗಳನ್ನು ಓದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎಂಐಟಿ ವಿಜ್ಞಾನಿಗಳು ಹೇಳಿದ್ದಾರೆ.

ಆದರೆ ಎಂಐಟಿ ವಿಜ್ಞಾನಿಗಳು ಮಾಡುತ್ತಿರುವ ಈ ಪ್ರಯೋಗ ಸದ್ಯಕ್ಕೆ ಪ್ರಯೋಗಾತ್ಮಕ ಹಂತದಲ್ಲಿದೆ. ಆದರೆ ಇದು ಶೀಘ್ರದಲ್ಲೇ ಸಾಮಾನ್ಯ ಜನರಿಗೂ ಲಭ್ಯವಾಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಟೆಕ್ನಾಲಜಿಯನ್ನು ಜನರಿಗೆ ಹೇಗೆ ನೀಡಬಹುದು ಎಂಬುದೇ ಅವರ ಮುಂದಿರುವ ಅಸಲಿ ಸವಾಲು. ಯಾಕೆಂದರೆ ಅವರು ಹಲವು ತಾಂತ್ರಿಕ ಪದ್ಧತಿಗಳನ್ನು ಬಳಸಿ ನ್ಯಾನೋ ಅಣುಗಳನ್ನು ಗಿಡಗಳ ಎಲೆಗಳಿಗೆ ನೀಡಿದರು. ಆದರೆ ಸಾಮಾನ್ಯ ಜನರಿಗೆ ಲ್ಯಾಬ್‌ಗಳು, ತಾಂತ್ರಿಕ ಪದ್ಧತಿಗಳು ಲಭ್ಯವಿರಲ್ಲ ಅಲ್ಲವೇ. ಆದಕಾರಣ ಗಿಡಗಳ ಎಲೆಗಳೊಳಗೆ ನ್ಯಾನೋ ಅಣುಗಳನ್ನು ಕಳುಹಿಸಲು ಆ ಅಣುಗಳ ಒಂದು ವಿಶೇಷ ಪೇಯಿಂಟನ್ನು ತಯಾರಿಸಲಿದ್ದಾರೆ. ಆ ಪೇಯಿಂಟ್ ಎಲೆಗಳ ಮೇಲೆ ಸ್ಪ್ರೇ ಮಾಡಿದರೆ ಸಾಕು.. ಆ ನ್ಯಾನೋ ಅಣುಗಳ ಎಲೆಗಳೊಳಗೆ ಹೋಗುತ್ತವೆ. ಇದರಿಂದ ಎಲೆಗಳು ಹೊಳೆಯುತ್ತವೆ. ಅಂತಹ ಪೇಯಿಂಟನ್ನು ತಯಾರು ಮಾಡಬೇಕೆಂದು ಎಂಐಟಿ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಅದೇ ರೀತಿ ಇನ್ನಷ್ಟು ಪ್ರಯೋಗಳ ಮೂಲಕ ಕತ್ತಲಾದ ಕೂಡಲೆ ತನ್ನಷ್ಟಕ್ಕೆ ತಾನೇ ಹೊಳೆಯುವಂತೆ, ಬೆಳಕಾಗುತ್ತಿದ್ದಂತೆ ಕೂಡಲೆ ಅವು ನಂದುವಂತೆ, ಕಡಿಮೆ ನ್ಯಾನೋ ಅಣುಗಳು ಇದ್ದರೂ ಹೆಚ್ಚು ಕಾಂತಿಯನ್ನು ಹೆಚ್ಚು ಹೊತ್ತು ನೀಡುವ ಹಲವು ತಾಂತ್ರಿಕ ಪದ್ಧತಿಗಳನ್ನು ಸಹ ವಿಜ್ಞಾನಿಗಳು ಅಭಿವೃದ್ಧಿಪಡಿಸಲಿದ್ದಾರೆ. ಆದರೆ ಈ ಪದ್ಧತಿಗಳ ಮೂಲಕ ಗಿಡಗಳ ಜತೆಗೆ ಸುತ್ತಲೂ ಇರುವ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ತಾಂತ್ರಿಕತೆಯನ್ನು ಅವರು ಎಲ್ಲರಿಗೂ ಸಿಗುವಂತೆ ಮಾಡಲಿದ್ದಾರೆ. ಆದರೆ ಈ ರೀತಿ ಗಿಡಗಳು, ಮರಗಳು ಲೈಟ್‌ಗಳ ರೀತಿ ಹೊಳೆದರೆ ನಮಗೆ ಅಗತ್ಯವಾದ ಕಾಂತಿಯನ್ನು ಸರಬರಾಜು ಮಾಡಿದರೆ, ಆಗ ವಿದ್ಯುತ್ ಸಹ ಉಳಿತಾಯ ಮಾಡಬಹುದು, ಇದರಿಂದ ವಾತಾವರಣದಲ್ಲಿ ಕಾರ್ಬನ್ ಡೈಯಾಕ್ಸೈಡ್ ಪ್ರಯಾಣ ಸಹ ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.

ಗಿಡಗಳ ಒಳಕ್ಕೆ ಕಳುಹಿಸುವ ಆ ನ್ಯಾನೋ ಅಣುಗಳು ಗಿಡಗಳಲ್ಲಿ ಇರುವ ಜೀವ ಶಕ್ತಿಯನ್ನು ಪಡೆದುಕೊಂಡು ಎಲೆಗಳು ಹೊಳೆಯುವಂತೆ ಮಾಡುತ್ತವೆ. ಆದಕಾರಣ ಇದು ಸಂಪೂರ್ಣ ಪರಿಸರ ಸ್ನೇಹಿ ಪ್ರಕ್ರಿಯೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ ಈ ಪ್ರಕಾಶಿಸುವ ಗಿಡಗಳು ಬರಲು ಇನ್ನೆಷ್ಟು ಕಾಲ ಬೇಕಾಗುತ್ತದೋ... ಕಾದರೆ ಗೊತ್ತಾಗುತ್ತದೆ. ಈ ತಾಂತ್ರಿಕತೆ ಲಭ್ಯವಾದರೆ ನಾವು ಸಾಕಷ್ಟು ಇಂಧನವನ್ನೂ ಉಳಿತಾಯ ಮಾಡಬಹುದು, ಪರಿಸರವನ್ನೂ ಸಹ ರಕ್ಷಿಸಿದಂತವರಾಗುತ್ತೀವಿ.

No comments