ಫೇಸ್ಬುಕ್ನಲ್ಲಿ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು. ಹೇಗೆ ಗೊತ್ತಾ..?
ಸಾಮಾಜಿಕ ಮಾಧ್ಯಮದ ಆಪ್ಸ್ ಎಷ್ಟೇ ನಮಗೆ ಲಭ್ಯವಿದ್ದರೂ ಅವುಗಳೆಲ್ಲದಕ್ಕಿಂತ ಫೇಸ್ಬುಕ್ನಲ್ಲಿ ಒಂದು ವಿಶೇಷತೆ ಇದೆ. ಆ ಆಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅನೇಕ ಹೊಸ ಫೀಚರ್ಗಳನ್ನು ಫೇಸ್ಬುಕ್ ನಮಗೆ ನೀಡುತ್ತಿದೆ. ಅದರಲ್ಲಿ ತಾಜಾ ಆಗಿ ಲಭ್ಯವಾಗುತ್ತಿರುವ ಇನ್ನೊಂದು ಫೀಚರ್... ಮೊಬೈಲ್ ರೀಚಾರ್ಜ್. ಹೌದು, ನೀವು ಕೇಳಿದ್ದು ನಿಜ. ಸದ್ಯಕ್ಕೆ ಬಳಕೆದಾರರು ತಮ್ಮ ಪ್ರೀಪೇಯ್ಡ್ ಮೊಬೈಲ್ ರೀಚಾರ್ಜ್ಗಳನು ಫೇಸ್ಬುಕ್ನಲ್ಲಿ ಮಾಡಿಕೊಳ್ಳಬಹುದು. ಇದಕ್ಕಾಗಿ ಇತರೆ ಆಪ್ಸ್ಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಹಾಗಿದ್ದರೆ ಫೇಸ್ಬುಕ್ನಲ್ಲಿ ಮೊಬೈಲ್ ರೀಚಾರ್ಜ್ ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಈಗ ತಿಳಿದುಕೊಳ್ಳೋಣ.
3. ಆ ಬಳಿಕ ಒಂದು ವಿಂಡೋ ಓಪನ್ ಆಗುತ್ತದೆ. ಅದರಲ್ಲಿ ರೀಚಾರ್ಜ್ ನೌ ಎಂಬ ಆಪ್ಷನ್ ಇರುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
4. ಕೂಡಲೆ ಇನ್ನೊಂದು ವಿಂಡೋ ಓಪನ್ ಆಗುತ್ತದೆ. ಅದರಲ್ಲಿ ಯೂಸರ್ ತನ್ನ ಮೊಬೈಲ್ ಸಂಖ್ಯೆ, ಆಪರೇಟರನ್ನು ಆಯ್ಕೆ ಮಾಡಿಕೊಳ್ಳಬೇಕು.
6. ಬಳಿಕ ಮೊದಲು ಪ್ರೊಸೀಡ್ ಆದರೆ ಆರ್ಡರ್ ಡೀಟೇಲ್ಸ್ ಎಂಬ ಪೇಜ್ ಬರುತ್ತದೆ. ಅದರಲ್ಲಿ ಆರ್ಡರ್ ವಿವರಗಳನ್ನು ಮತ್ತೊಮ್ಮೆ ಚೆಕ್ ಮಾಡಿಕೊಳ್ಳಬೇಕು. ಎಲ್ಲವೂ ಕರೆಕ್ಟ್ ಆಗಿ ಇದೆ ಅನ್ನಿಸಿದರೆ ಯೂಸರ್ ಪೇಮೆಂಟ್ ವಿವರಗಳನ್ನು ಎಂಟರ್ ಮಾಡಬೇಕು.
7. ಬಳಿಕ ಪ್ಲೇಸ್ ಆರ್ಡರ್ ಬಟನ್ ಪ್ರೆಸ್ ಮಾಡಬೇಕು. ಬಳಿಕ ಬರುವ ಸ್ಟೆಪ್ಸ್ ಫಾಲೋ ಆಗಿ ಸಾಕು. ಇದರಿಂದ ರೀಚಾರ್ಜ್ ಪ್ರೋಸೆಸ್ ಆಗುತ್ತದೆ. ಮೊಬೈಲ್ ರೀಚಾರ್ಜ್ ಆಗುತ್ತದೆ. ಬಳಿಕ ಕೂಡಲೆ ರೀಚಾರ್ಜ್ಗೆ ಸಂಬಂಧಿಸಿದ ರಸೀದಿ ಜನರೇಟ್ ಆಗುತ್ತದೆ. ಅದು ಅಗತ್ಯ ಅನ್ನಿಸಿದರೆ ಕೂಡಲೆ ಸೇವ್ ಮಾಡಿಕೊಳ್ಳಬಹುದು. ಈ ರೀತಿ ಫೇಸ್ಬುಕ್ನಲ್ಲಿ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು.
ಆದರೆ ಆಂಡ್ರಾಯ್ಡ್ ಪ್ಲಾಟ್ಫಾಂ ಮೇಲೆ ಫೇಸ್ಬುಕ್ ಆಪ್ ಬಳಸುತ್ತಿರುವವರಿಗೆ ಈ ಮೊಬೈಲ್ ರೀಚಾರ್ಜ್ ಸೌಲಭ್ಯ ಲಭ್ಯವಿದೆ. ಇತರೆ ಡಿವೈಸ್ಗಳಲ್ಲಿ ಈ ಸೌಲಭ್ಯ ಇಲ್ಲ.
Post a Comment