Header Ads

test

ಆಕೆ "ಗೂಗಲ್"ನಲ್ಲಿ ಏನೆಂದು "ಸರ್ಚ್" ಮಾಡಿದಳು ಗೊತ್ತಾ..? ಕೊನೆಗೆ ರಿಸಲ್ಟ್ ನೋಡಿ ಶಾಕ್ ಆದಳು..!

ನನಗೊಂದು ಡೌಟ್ ಬಂದಿದೆ..? ಈ ಪ್ರಶ್ನೆಯನ್ನು ಯಾರೊಂದಿಗಾದರೂ ಅಂದರೆ ಸಾಕು. ಕೂಡಲೆ ಗೂಗಲ್ ಮಾಡು ಎನ್ನುತ್ತಾರೆ. ನಾವು ಸಹ ಯಾವುದೇ ಡೌಟ್ ಬಂದರೂ ಗೂಗಲ್‌ನ್ನು ಕೇಳುತ್ತಿರುತ್ತೇವೆ. ಮೊದಲೇ ಇದು ಸ್ಮಾರ್ಟ್‌ಫೋನ್ ಯುಗ. ಮೇಲಾಗಿ ಅಂಬಾನಿಯವರು ಜಿಯೋ ಆಫರ್‌ನೊಂದಿಗೆ ನಮಗೆ ಇಂಟರ್‌ನೆಟ್ ಅಂಗೈನಲ್ಲಿ ಸುಲಭವಾಗಿ ಸಿಗುವಂತೆ ಮಾಡಿದ್ದಾರೆ. ವೈಫೈ ಇಲ್ಲದ ಮನೆ, ವಾಟ್ಸಾಪ್, ಫೇಸ್‌ಬುಕ್ ಬಳಸದ ಮನುಷ್ಯ ಇರಲ್ಲ ಅಂದುಕೊಳ್ಳುತ್ತೇನೆ.



ಸ್ಮಾರ್ಟ್‌ಫೋನ್ ಎಂಬುದು ಕೈಯಲ್ಲಿ ಒಂದು ಭಾಗವಾದ ದಿನಗಳಿವು. ಅಂತಹದ್ದು ಪುಸ್ತಕಗಳನ್ನು ಪಕ್ಕಕ್ಕಿಟ್ಟು ಫೇಸ್‌ಬುಕ್ ಬಳಸುವ ನಮಗೆ ಯಾವುದೇ ಡೌಟ್ ಬಂದರೂ ಬಗೆಹರಿಸಲು ಗೂಗಲ್ ಉಪಯೋಗಿಸುತ್ತಿರುತ್ತೇವೆ. ಆದರೆ ಒಮ್ಮೆ ಏನೋ ಅಂದುಕೊಂಡರೆ ಇನ್ನೇನೋ ಆಯಿತು ಎಂಬಂತೆ. ಏನೋ ಹುಡುಕಿದರೆ ಇನ್ನೇನೋ ತೋರಿಸುತ್ತದೆ ಗೂಗಲ್. ಅಂತಹ ಕೆಲವು ಫನ್ನಿ ರಿಸಲ್ಟ್ಸ್ ನಿಮಗಾಗಿ!

ಮೇಕಪ್, ಫ್ಯಾಷನ್, ಹೆಲ್ತ್ ಟಿಪ್ಸ್ ಇಂಟರ್‌ನೆಟ್‌ನಲ್ಲಿ ನೋಡಿ ಫಾಲೋ ಆಗುತ್ತೇವೆ. ಕೊನೆಗೆ ಯಾವುದೇ ಫಲಿತಾಂಶ ಇರಲ್ಲ! ಇನ್ನು ಗೂಗಲ್ ಮ್ಯಾಪ್ ಇದೆ. ಲೊಕೇಷನ್ ಅರಕೆರೆ ಇಟ್ಟರೆ ಅದು ಅರಸಿಕೆರೆ ತೋರಿಸುತ್ತದೆ.

ಬೈ ಮಿಸ್ಟೇಕ್ ಹೆಲ್ತ್ ಚೆನ್ನಾಗಿಲ್ಲ ವೈದ್ಯರ ಬಳಿಗೆ ಯಾಕೆ ಎಂದು ಗೂಗಲ್ ನೋಡಿದರೆ... ನೆಗಡಿ, ಜ್ವರ ಇರುವ ಲಕ್ಷಣಗಳನ್ನು ಹುಡುಕಿದರೆ ಕ್ಯಾನ್ಸರ್ ಎಂದು ಕನ್ಪರ್ಮ್ ಮಾಡುತ್ತದೆ.

ಹೊರಗೆ ಹೋಗೋಣ ಎಂದುಕೊಂಡು.. ಮಳೆ ಬೀಳುತ್ತದೋ ಇಲ್ಲವೇ ಎಂಬು ಕ್ಲಾರಿಟಿಗಾಗಿ Weather Report ನೋಡಿದರೆ. ಸನ್ನಿ ಎಂದು ತೋರಿಸುತ್ತದೆ. ತೀರಾ ಹೊರಗೆ ಹೋದ ಬಳಿಕ ಮಳೆ ಶುರುವಾಗುತ್ತದೆ.

No comments