Header Ads

test

ರಜನಿಕಾಂತ್ ಮಗಳ ಎರಡನೇ ಮದುವೆ... ಮೊದಲ ಆಮಂತ್ರಣ ಪತ್ರಿಕೆ ಯಾರಿಗೆ ಗೊತ್ತಾ, ಯಾವುದೇ ದುರಾಲೋಚನೆಇಲ್ಲ!

ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಮಗಳು ಸೌಂದರ್ಯಾ ರಜನಿಕಾಂತ್ ಎರಡನೇ ಮದುವೆಗೆ ಸಿದ್ಧವಾಗುತ್ತಿರುವ ಸಂಗತಿ ಗೊತ್ತೇ ಇದೆ. ಕಳೆದ ವರ್ಷ ನಿಶ್ಚಿತಾರ್ಥ ಸಹ ನಡೆದಿತ್ತು. ಪ್ರಮುಖ ನಟ, ಉದ್ಯಮಿಯಾಗಿರುವ ವಿಶಾಗನ್ ವನಂಗಮೂಡಿಯನ್ನು ಸೌಂದರ್ಯ ಎರಡನೇ ಮದುವೆಯಾಗುತ್ತಿದ್ದಾರೆ. ಫೆಬ್ರವರಿ 11ರಂದು ನಡೆಯಲಿರುವ ಇವರ ವಿವಾಹಕ್ಕೆ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ಕೆಲ ದಿನಗಳ ಹಿಂದೆ ಸೌಂದರ್ಯ ರಜನಿಕಾಂತ್ ಮದುವೆಗೆ ಸಂಬಂಧಿಸಿದ ವಸ್ತ್ರಗಳನ್ನು ಖರೀದಿಸುತ್ತ ಶಾಪಿಂಗ್ ಮಾಲ್‌ನಲ್ಲಿ ಕಾಣಿಸಿದರು. ವಿವಾಹಕ್ಕೆ ಕಡಿಮೆ ಸಮಯ ಇದ್ದ ಕಾರಣ ರಜನಿ ಸ್ವತಃ ಕಾರ್ಯೋನ್ಮುಖರಾಗಿ ಪ್ರಮುಖರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ.


ರಜನಿಕಾಂತ್ ಸ್ವತಃ ಸಿನಿಮಾ, ರಾಜಕೀಯ ಮುಖಂಡರ ಮನೆಗೆ ಹೋಗಿ ಆಹ್ವಾನಿಸುತ್ತಿದ್ದಾರೆ. ತನ್ನ ಮಗಳ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ರಜನಿಕಾಂತ್ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ತಿರುನಾವಕ್ಕರಾಸನ್‌ಗೆ ನೀಡಿದರು. ಮೊದಲ ಪತ್ರಿಕೆ ಅವರಿಗೆ ಕೊಡಲು ಕಾರಣ ಏನಿರಬಹುದು ಎಂಬುದನ್ನೂ ರಜನಿಕಾಂತ್ ವಿವರಿಸಿದ್ದಾರೆ. ನನ್ನ ಮಗಳ ಮದುವೆಯ ಕೆಲಸಗಳನ್ನೆಲ್ಲಾ ಅವರೇ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಮೊದಲ ಪತ್ರಿಕೆ ಅವರಿಗೆ ಕೊಡಬೇಕು ಎನ್ನಿಸಿತು ಎಂದು ರಜನಿಕಾಂತ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಬಹಳಷ್ಟು ಮಂದಿ ರಾಜಕೀಯ ಗಣ್ಯರನ್ನು ಭೇಟಿ ಮಾಡಿ ಅವರನ್ನೆಲ್ಲಾ ತನ್ನ ಮಗಳ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಈ ಬಗ್ಗೆ ರಜನಿ ಮಾಧ್ಯಮಗಳ ಜತೆಗೆ ಮಾತನಾಡುತ್ತಾ... ನಾನು ಸದ್ಯಕ್ಕೆ ರಾಜಕೀಯ ಗಣ್ಯರನ್ನು ಭೇಟಿಯಾಗುತ್ತಿರುವುದು ನನ್ನ ಮಗಳ ಮದುವೆಗೆ ಆಹ್ವಾನಿಸಲು. ಇದರಲ್ಲಿ ಯಾವುದೇ ರಾಜಕೀಯ, ದೂರಲೋಚನೆ ಇಲ್ಲ. ದಯವಿಟ್ಟು ಈ ವಿಷಯದಲ್ಲಿ ರಾಜಕೀಯ ಬೆರೆಸಬೇಡಿ ಎಂದು ರಜನಿ ವಿನಂತಿಸಿಕೊಂಡಿದ್ದಾರೆ.

ರಜನಿಕಾಂತ್ ಖ್ಯಾತ ನಟ ಪ್ರಭು ಮನೆಗೂ ಭೇಟಿ ನೀಡಿದ್ದರು. ತನ್ನ ಮಗಳ ಮದುವೆಗೆ ಬರಬೇಕು ಎಂದು ಹೇಳಿ ಲಗ್ನಪತ್ರಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ರಜನಿಕಾಂತ್ ಜತೆಗೆ ತೆಗೆಸಿಕೊಂಡಿರುವ ಫೋಟೋಗಳು ಪ್ರಭು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಭು ಮಗ ವಿಕ್ರಮ್ ಪ್ರಭು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾ... ಇವರ ಸ್ನೇಹವನ್ನು ನೋಡುತ್ತಿದ್ದರೆ ಖುಷಿಯಾಗುತ್ತದೆ ಎಂದು ರಜನಿ, ಪ್ರಭು ಇರುವ ಫೋಟೋ ಹಂಚಿಕೊಂಡಿದ್ದಾರೆ.

ಇನ್ನು ಸೌಂದರ್ಯ ರಜನಿಕಾಂತ್ 2010ರಲ್ಲಿ ಅಶ್ವಿನ್ ಎಂಬ ಉದ್ಯಮಿಯನ್ನು ವರಿಸಿದ್ದರು. ಭಿನ್ನಾಭಿಪ್ರಾಯಗಳ ಕಾರಣ 2017ರಲ್ಲಿ ಈ ಜೋಡಿ ವಿಚ್ಛೇದನ ಪಡೆದು ದೂರವಾಯಿತು. ಇವರಿಗೆ ಒಬ್ಬ ಮಗ ಸಹ ಇದ್ದಾನೆ. ಸದ್ಯಕ್ಕೆ ವಿಶಾಗನ್ ಎಂಬ ನಟನ ಜತೆಗೆ ಎರಡನೇ ಮದುವೆಯಾಗುತ್ತಿದ್ದಾರೆ. ಚೆನ್ನೈನಲ್ಲಿನ ಸ್ಟಾರ್ ಹೋಟೆಲ್‌ನಲ್ಲಿ ಫೆಬ್ರವರಿ 11ರಂದು ಇವರ ವಿವಾಹ ಅದ್ದೂರಿಯಾಗಿ ನಡೆಯಲಿದೆ. ಆ ಬಳಿಕ ಆರತಕ್ಷತೆ ಕಾರ್ಯಕ್ರಮವನ್ನೂ ಭರ್ಜರಿಯಾಗಿ ನಡೆಸಲು ಸಿದ್ಧವಾಗಿದೆ ರಜನಿಕಾಂತ್ ಕುಟುಂಬ.

No comments