Header Ads

test

ಆಕಾಶ್ ಅಂಬಾನಿ, ಶ್ಲೋಕಾ ಕಣ್ಣು ಕುಕ್ಕುವ ಮದುವೆ ಆಮಂತ್ರಣ ಪತ್ರಿಕೆ ನೋಡಿ [ವೀಡಿಯೋ]

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆಯಲ್ಲಿ ಈಗ ಮದುವೆ ಹಬ್ಬ. ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಮದುವೆ ಡೈಮಂಡ್ ಕಿಂಗ್ ಎಂದೇ ಕರೆಸಿಕೊಂಡಿರುವ ರಸ್ಸೆಲ್ ಮೆಹ್ತಾ ಮಗಳು ಶ್ಲೋಕಾ ಮೆಹ್ತಾ ಜತೆಗೆ ನಡೆಯಲಿದೆ. ಇದೇ ಮಾರ್ಚ್ 9ರಂದು ಇವರಿಬ್ಬರು ಮದುವೆ ಬಂಧನದ ಮೂಲಕ ಒಂದಾಗಲಿದ್ದಾರೆ. ಇಷಾ ಅಂಬಾನಿ ಮದುವೆ ಆಮಂತ್ರಣದಂತೆಯೇ ಆಕಾಶ್ ಅಂಬಾನಿ ಆಹ್ವಾನ ಪತ್ರಿಕೆಯನ್ನು ಸಹ ಅತ್ಯಂತ ಅದ್ದೂರಿಯಾಗಿ ತಯಾರಿಸಲಾಗಿದೆ.



ಇಬ್ಬರೂ ಶ್ರೀಮಂತರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಆಹ್ವಾನ ಪತ್ರಿಕೆಯನ್ನು ದೊಡ್ಡ ಬಾಕ್ಸ್‌ನಲ್ಲಿ ಇಟ್ಟು ಅದರ ಮೇಲೆ ರಾಧಾಕೃಷ್ಣರ ಚಿತ್ರಗಳನ್ನು ಆ್ಯನಿಮೇಷನ್ ಮಾಡಿಸಲಾಗಿದೆ. ಬಾಕ್ಸ್‌ನಲ್ಲಿ ಬೆಳ್ಳಿಯಲ್ಲಿ ಮಾಡಿದ ರಾಧಾಕೃಷ್ಣರ ಪ್ರತಿಮೆಗಳಿಂದ ಕೂಡಿದ ಬೆಳ್ಳಿ ಫೋಟೋಗಳನ್ನು ಇಡಲಾಗಿದೆ. ಅದರ ಅಡಿಗೆ ವಿವಾಹ ಆಹ್ವಾನ ಪತ್ರಿಕೆಯನ್ನು ಇಡಲಾಗಿದೆ. ಅಂಬಾನಿ ಕುಟುಂಬದ ಸಾಮರ್ಥ್ಯಕ್ಕೆ ತಕ್ಕಂತೆ ಆಹ್ವಾನ ಪತ್ರಿಕೆಯನ್ನು ಡಿಸೈನ್ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಮುಕೇಶ್‌ ಪುತ್ರ ಆಕಾಶ್‌ ಅಂಬಾನಿ ಮತ್ತು ವಜ್ರದ ಉದ್ಯಮಿ ರಸ್ಸೆಲ್‌ ಮೆಹ್ತಾ ಪುತ್ರಿ ಶ್ಲೋಕಾ ಅವರ ವಿವಾಹ ಮಹೋತ್ಸವವು ಮಾ.9ರಂದು ನಡೆಯಲಿದೆ. ಕಳೆದ ವರ್ಷ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು.

ಮುಂಬಯಿನಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವಲ್ಡ್‌ ಸೆಂಟರ್‌ನಲ್ಲಿ ಮೂರು ದಿನಗಳ ಮದುವೆಯು ಮುಂದಿನ ತಿಂಗಳು ನಡೆಯಲಿದೆ. ಆರತಕ್ಷತೆಯು ಮಾ.11ರಂದು ನಡೆಯಲಿದೆ. ಸಹಜವಾಗಿಯೇ ಈ ಮದುವೆಗೆ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು ಮತ್ತು ನಾನಾ ವಲಯಗಳ ಸೆಲಬ್ರಿಟಿಗಳ ದಂಡೇ ಆಗಮಿಸುವ ನಿರೀಕ್ಷೆ ಇದೆ. ಮದುವೆಗೆ ಮುನ್ನ ಮೂರು ದಿನಗಳ ಕಾರ್ಯಕ್ರಮವನ್ನು ಸ್ವಿಜರ್ಲೆಂಡ್‌ನಲ್ಲಿ ಆಯೋಜಿಸಲಾಗುತ್ತದೆ. ಫೆ.23ರಿಂದ 25ರ ತನಕ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 500 ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ರಣಬೀರ್‌ ಕಪೂರ್‌, ಕರಣ್‌ ಜೋಹಾರ್‌ ಸೇರಿದಂತೆ ಬಾಲಿವುಡ್‌ ತಾರಾ ಬಳಗವೇ ಮದುವೆಗೆ ಹಾಜರಾಗುವ ನಿರೀಕ್ಷೆ ಇದೆ.

https://www.instagram.com/p/Bt01qdgj6fy/?utm_source=ig_embed

ಈ ಹಿಂದೆ ಆಕಾಶ್ ಮತ್ತು ಶ್ಲೋಕಾ ಮೆಹಂದಿ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್ ದಂಪತಿಗಳು ಸೇರಿದಂತೆ ಶಾರುಖ್ ಖಾನ್ ದಂಪತಿಗಳು, ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಕಿರಣ್ ರಾವ್, ರಣಬೀರ್ ಕಪೂರ್, ಆಲಿಯಾ ಭಟ್, ಐಶ್ವರ್ಯಾ ರೈ ಬಚ್ಚನ್, ಕತ್ರಿನಾ ಕೈಫ್‌ನಂತಹ ಬಾಲಿವುಡ್ ತಾರೆಗಳು ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದರು. ಇದೇ ಸಂದರ್ಭದಲ್ಲಿ ಆಕಾಶ್ ತಾಯಿ ನಿತಾ ಅಂಬಾನಿ ಮಾಡಿರುವ ನೃತ್ಯ ಎಲ್ಲರನ್ನೂ ಸೆಳೆದಿತ್ತು.

No comments