Header Ads

test

ಸೂಪರ್ ಸ್ಟಾರ್ ಮಗಳನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು!!

ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ವಿವಾಹ ವಾರದ ಹಿಂದೆ ಅದ್ದೂರಿಯಾಗಿ ನಡೆದ ಸಂಗತಿ ಗೊತ್ತಿರುವುದೇ. ಉದ್ಯಮಿ ವಿಶಾಗನ್‌ರನ್ನು ಸೌಂದರ್ಯ ಎರಡನೇ ಮದುವೆಯಾದರು. 2016ರಲ್ಲಿ ಮೊದಲ ಪತಿ ಅಶ್ವಿನ್‌ರಿಂದ ವಿಚ್ಛೇದನ ಪಡೆದ ಈಕೆ ಆ ಬಳಿಕ ಪರಿಚಯವಾದ ವಿಶಾಗನ್ ಪ್ರೀತಿಯಲ್ಲಿ ಸಿಲುಕಿದಳು. ಇಬ್ಬರ ಕುಟುಂಬಿಕರ ಒಪ್ಪಂದದ ಪ್ರಕಾರ ಮದುವೆಯನ್ನೂ ಆಗಿದ್ದಾರೆ. ಮದುವೆಗೆ ಚಿತ್ರರಂಗದ ಗಣ್ಯರು, ಬಾಲಿವುಡ್ ಪ್ರಮುಖರು ಹಾಜರಾಗಿದ್ದಾರೆ. ಮದುವೆ ಸಂಭ್ರಮ ಮುಗಿಸಿಕೊಂಡು ಸೌಂದರ್ಯ ಮತ್ತು ವಿಶಾಗನ್ ಹನಿಮೂನ್‌ಗೆ ಹೋದರು. ಹನಿಮೂನ್‌ನಲ್ಲಿ ತಾವು ಎಂಜಾಯ್ ಮಾಡುತ್ತಿರುವುದಾಗಿ ಸೌಂದರ್ಯ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


ಸೌಂದರ್ಯ ಪೋಸ್ಟ್‌ಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ದೇಶದಲ್ಲಿ ಅತ್ಯಂತ ವಿಷಾದಕರ ಪರಿಸ್ಥಿತಿ ನೆಲೆಸಿದೆ. 40 ಮಂದಿ ಭಾರತೀಯ ಸೈನಿಕರನ್ನು ಉಗ್ರರು ಮಾನವ ಬಾಂಬ್ ಸ್ಫೋಟಿಸಿರುವ ಭೀಕರ ಘಟನೆ ನಡೆದಿದೆ. 20 ವರ್ಷಗಳ ನಂತರ ನಡೆದ ಅತ್ಯಂತ ಭೀಕರ ಉಗ್ರ ದಾಳಿ ಇದು ಎನ್ನುತ್ತಿದ್ದಾರೆ. ದೇಶದಾದ್ಯಂತ ತೀವ್ರ ಆಕ್ರೋಶ ಮಡುಗಟ್ಟಿದೆ. ಸೈನಿಕರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮಟ್ಟದ ಪ್ರಚಾರ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ಸೌಂದರ್ಯ ಮಾತ್ರ ಹನಿಮೂನ್ ಪಿಕ್ಸ್ ಹಾಕಿರುವುದು ತೀವ್ರ ಅಸಹನೆಗೆ ಗುರಿ ಮಾಡಿದೆ.

ಸೌಂದರ್ಯ ವರ್ತನೆ ವಿರುದ್ಧ ನೆಟ್ಟಿಗಾರು ಕುಪಿತಗೊಂಡಿದ್ದಾರೆ. ನಿಮಗೆ ಬುದ್ಧಿ ಇದೆಯೇ ಮೇಡಂ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ವಿಷಾದಕರ ಪರಿಸ್ಥಿತಿಯಲ್ಲಿ ಇಂತಹ ಸಿಲ್ಲಿ ಪೋಸ್ಟ್‌ಗಳು ಏನು. ನಿಮಗೆ ಸಮಾಜದ ಬಗ್ಗೆ, ದೇಶದ ಬಗ್ಗೆ ಕನಿಷ್ಠ ಜವಾಬ್ದಾರಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಹನಿಮೂನ್ ಎಂಬುದು ನಿಮ್ಮ ವೈಯಕ್ತಿಕ ವಿಷಯ ಆಗಬಹುದು. ಆದರೆ ಸಾಮಾಜಿಕ ಮಧ್ಯಮಗಳಲ್ಲಿ ಈ ಸಮಯದಲ್ಲಿ ಫೋಟೋಗಳನ್ನು ಹಾಕಿರುವುದು ಬಹಳ ದೊಡ್ಡ ತಪ್ಪು ಎಂದು ನೆಟ್ಟಿಗರು ಪರಿಗಣಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಸೌಂದರ್ಯ ಇದುವರೆಗೂ ಯಾವುದೇ ರಿಯಾಕ್ಷನ್ ನೀಡಿಲ್ಲ. ಟೀಕಿಸುವವರ ಜತೆಗೆ ಅವರನ್ನು ಬೆಂಬಲಿಸುವವರೂ ಇದ್ದಾರೆ. ಈ ಸಂಗತಿ ಬಗ್ಗೆ ನೀವೇನಂತೀರಾ? ಸೌಂದರ್ಯ ಮಾಡಿದ್ದು ಸರಿ ಅಂತೀರಾ? ತಪ್ಪು ಅಂತೀರಾ? ನಿಮ್ಮ ಉತ್ತರವನ್ನು ಕಾಮೆಂಟ್ ರೂಪದಲ್ಲಿ ನೀಡಿ.

No comments