Header Ads

test

ಕತ್ತರಿಸಿದ ಈರುಳ್ಳಿಯನ್ನು ಬೆಳಗಿನ ತನಕ ಹಾಗೆಯೇ ಬಿಟ್ಟರೆ ... ವಿಷವಾಗಿ ಬದಲಾಗುತ್ತದಾ? ಇದು ಎಷ್ಟರಮಟ್ಟಿಗೆ ನಿಜ.

ಅದೆಷ್ಟೋ ಪೋಷಕಾಂಶಗಳ ಆಗರವಾಗಿರುವ ಈರುಳ್ಳಿಯನ್ನು ನಾವು ನಿತ್ಯ ಆಹಾರದ ಭಾಗವಾಗಿ ತಿನ್ನುವುದರಿಂದ ಅದರಿಂದ ನಮಗೆ ಸಾಕಷ್ಟು ಆರೋಗ್ಯಕರವಾದ ಲಾಭಗಳಿವೆ. ಆದರೆ ಅವುಗಳ ಬಗೆಗಿನ ಒಂದು ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ, ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಷ್ಟಕ್ಕೂ ಆಸಕ್ತಿ ಮೂಡಿಸಿರುವ ಈರುಳ್ಳಿ ಬಗೆಗಿನ ಆ ವದಂತಿ ಏನೆಂದರೆ... ಈರುಳ್ಳಿಯಲ್ಲಿನ ಘಾಟು ವಾಸನೆ ಕಾರಣ ಅರ್ಧ ಹೆಚ್ಚಿದ ಈರುಳ್ಳಿಯನ್ನು ಹಾಗೆಯೇ ಇಟ್ಟರೆ ಬ್ಯಾಕ್ಟೀರಿಯಾ, ಸೂಕ್ಷ್ಮ ಕ್ರಿಮಿಗಳನ್ನು ಹೆಚ್ಚಾಗಿ ಆಕರ್ಷಿಸುತ್ತವಂತೆ. ಹಾಗಾಗಿ ಹೆಚ್ಚು ಹೊತ್ತು ಹಾಗೆಯೇ ಇಟ್ಟರೆ ಬ್ಯಾಕ್ಟೀರಿಯಾ, ಕ್ರಿಮಿಗಳು ಹೆಚ್ಚಾಗಿ ಸೇರಿಕೊಳ್ಳುತ್ತವೆ. ಹಾಗಾಗಿ ಹೆಚ್ಚು ಹೊತ್ತು ಕಟ್ ಮಾಡಿ ಇಟ್ಟಿದ ಈರುಳ್ಳಿಯನ್ನು ಬಳಸಿದರೆ ಬ್ಯಾಕ್ಟೀರಿಯಾ ಎಲ್ಲಾ ನಮ್ಮ ದೇಹಕ್ಕೆ ಸೇರಿ ಸೋಂಕು, ಹೊಟ್ಟೆ ನೋವು ಉಂಟು ಮಾಡುತ್ತದೆ. ಒಂದು ದಿನಕ್ಕಿಂತಲೂ ಹೆಚ್ಚು ಹೊತ್ತು ಹಾಗೆಯೇ ಇಟ್ಟಿದ ಈರುಳ್ಳಿ ತಿನ್ನುವುದರಿಂದ ಈ ರೀತಿ ನಡೆಯುತ್ತದಂತೆ. ಹಾಗಾಗಿ ಈರುಳ್ಳಿಯನ್ನು ಕಟ್ ಮಾಡಿದ ಕೂಡಲೆ ಬಳಸಬೇಕಂತೆ. ಅಷ್ಟೇ ಹೊರತು ಅವನ್ನು ಹೆಚ್ಚು ಹೊತ್ತು ಕತ್ತರಿಸಿ ಇಡಬಾರದಂತೆ. ಇದಿಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುವ ಈರುಳ್ಳಿ ಮೇಲಿನ ವದಂತಿ.


ಆದರೆ ಮೇಲೆ ತಿಳಿಸಿದ ಈರುಳ್ಳಿ ವದಂತಿಯಲ್ಲಿ ಎಳ್ಳಷ್ಟೂ ವಾಸ್ತವ ಇಲ್ಲವಂತೆ. ಇದನ್ನು ನಂಬಬೇಕಾದ ಕೆಲಸ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಯಾಕೆಂದರೆ ಈರುಳ್ಳಿಗೆ ಇರುವ ಘಾಟು ವಾಸನೆ ಕಾರಣ ಅದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಸೇರಿಕೊಳ್ಳಲ್ಲ. ಅಂತಹ ಸ್ಥಿತಿಯಲ್ಲಿ ಈರುಳ್ಳಿಯಲ್ಲಿ ಯಾವ ಬ್ಯಾಕ್ಟೀರಿಯಾ ಸಹ ವೃದ್ಧಿಯಾಗಲ್ಲ. ಆದರೆ ಅದನ್ನು ಹೆಚ್ಚುವ ಸಮಯದಲ್ಲಿ, ಸಂಗ್ರಹಿಸುವ ಸಮಯದಲ್ಲಿ ಸ್ವಚ್ಛತೆಯನ್ನು ಪಾಲಿಸಬೇಕು. ಇಲ್ಲದಿದ್ದರೆ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತದೆ. ಸ್ವಚ್ಛವಾಗಿ ಹೆಚ್ಚಿ ಪ್ರತ್ಯೇಕ ಪಾತ್ರೆಯಲ್ಲಿ ಸ್ವಚ್ಛವಾದ ಪದ್ಧತಿಯಲ್ಲಿ ಸಂಗ್ರಹಿಸಿದರೆ 2-3 ದಿನಗಳವರೆಗೂ ಈರುಳ್ಳಿ ಕೆಡದಂತೆ ಇರುತ್ತದೆ, ಅವನ್ನು ಯಾವುದೇ ಭಯವಿಲ್ಲದಂತೆ ಬಳಸಬಹುದು ಎಂದಿದ್ದಾರೆ ತಜ್ಞರು. ಕೇವಲ ಈರುಳ್ಳಿ ಅಷ್ಟೇ ಅಲ್ಲ. ಯಾವುದೇ ಆಹಾರವಾದರೂ ಸ್ವಚ್ಛವಾದ ವಾತಾವರಣದಲ್ಲಿ ಇಡಬೇಕು ಎಂದು, ಕೈಗಳು ಸ್ವಚ್ಛವಾಗಿ ಇದ್ದಾಗ ಅದನ್ನು ಮುಟ್ಟಬೇಕು ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲವೇ. ಸ್ವಚ್ಛತೆ ಕಾಪಾಡಿದರೆ ಅರ್ಧದಷ್ಟು ಕಾಯಿಲೆಗಳು ಹತ್ತಿರ ಸುಳಿಯಲ್ಲ.

ಈರುಳ್ಳಿ ಗುಣಗಳುಃ
  • ನೆಗಡಿ, ಕೆಮ್ಮು ಕಫ‌ಕ್ಕೆ ಈರುಳ್ಳಿಯ ರಸಕ್ಕೆ (2 ಚಮಚ), ಜೇನು ತುಪ್ಪ (2 ಚಮಚ), 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ನೀಡಿದರೆ ಮಕ್ಕಳಲ್ಲಿ ನೆಗಡಿ, ಕೆಮ್ಮು ಕಫ‌ ಶಮನವಾಗುತ್ತದೆ.

  • ಪುಟ್ಟ ಮಕ್ಕಳಿಗೆ ಇಡೀ ಬಿಳಿ ಈರುಳ್ಳಿ /ಕೆಂಪು ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ಸೇವಿಸಲು ನೀಡಿದರೆ ಕೆಮ್ಮು ಕಫ‌ ನಿವಾರಣೆಯಾಗುತ್ತದೆ. ಇದು ರಕ್ತವರ್ಧಕವೂ ಹೌದು.

  • ಈರುಳ್ಳಿಯನ್ನು ಕತ್ತರಿಸಿ ಬೆಲ್ಲ , ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

No comments