Header Ads

test

ದೇವರ ಬಳಿ ಬೇಡಿಕೊಳ್ಳುವ ಬೇಡಿಕೆಯನ್ನು ಹೊರಗೆ ಹೇಳಬಾರದು... ಯಾಕೆ ಗೊತ್ತಾ?

ಸಾಮಾನ್ಯವಾಗಿ ಪ್ರತಿಯೊಬ್ಬರೂ ದೇವಾಲಯಕ್ಕೆ ಹೋದರೂ, ಮನೆಯಲ್ಲಿ ಪೂಜೆ ಮಾಡಿದರೂ ಏನೋ ಒಂದು ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯ. ಆ ಬೇಡಿಕೆ ದೊಡ್ಡದಾದರೂ ಚಿಕ್ಕದಾದರೂ ಸರಿ ಹೊರಗೆ ಹೇಳಕೂಡದು ಎಂದು ಹಿರಿಯರು ಹೇಳುತ್ತಿರುತ್ತಾರೆ. ಆ ರೀತಿ ಹೊರಗೆ ಯಾಕೆ ಹೇಳಬಾರದು ಎನ್ನಲು ಒಂದು ಕಾರಣ ಇದೆ. ಆ ಕಾರಣದ ಬಗ್ಗೆ ಈಗ ವಿವರವಾಗಿ ತಿಳಿದುಕೊಳ್ಳೋಣ. ದೇವರನ್ನು ನಾವು ಬೇಡಿಕೊಂಡಿದ್ದೇವೆ ಎಂದರೆ ಅದು ನಮಗೆ ಸಾಧ್ಯವಾಗದ್ದೇ ಆಗಿರುತ್ತದೆ.


ಅಂತಹ ಕೋರಿಕೆಯನ್ನು ಭಗವಂತ ತೀರಿಸಿದರೆ ಆ ಆನಂದಕ್ಕೆ ಪಾರವೇ ಇರಲ್ಲ. ಒಂದು ವೇಳೆ ನಾವು ಕೋರಿಕೊಂಡ ಬೇಡಿಕೆಯನ್ನು ಹೊರಗೆ ತಿಳಿಸಿದರೆ ಕೇಳಿದವರು ಹೊರಗೆ ಆನಂದವಾಗಿ ಇದ್ದರೂ ಒಳಗೆ ಮಾತ್ರ ಬೇಡಿಕೆ ನೆರವೇರಬಾರದು ಎಂದುಕೊಳ್ಳುತ್ತಾರೆ. ಆ ಬೇಡಿಕೆ ನಮಗೆ ತೀರದಂತೆ ಇರಲು ಮಾನವ ಪ್ರಯತ್ನ ಮಾಡುವ ಅವಕಾಶಗಳು ಸಹ ತುಂಬಾ ಜಾಸ್ತಿನೇ ಇರುತ್ತವೆ. ಹಾಗಾಗಿ ನಮ್ಮ ಹಿರಿಯರು ಯಾವುದೇ ಆಚಾರ ಇಟ್ಟರೂ ಚೆನ್ನಾಗಿ ಆಲೋಚಿಸಿ ಮಾತ್ರ ಇಡುತ್ತಾರೆ. ನಮ್ಮ ಹಿರಿಯರು ಇಡುವ ಎಲ್ಲಾ ಆಚಾರಗಳಲ್ಲಿನ ಪರಮಾರ್ಥ ಇರುತ್ತದೆ.

ಆದರೆ ದೇವಸ್ಥಾನಕ್ಕೆ ಹೋದಾಗ ತೀರ್ಥವನ್ನು ತಿಂತುಕೊಂಡು ಮಾತ್ರ ತೆಗೆದುಕೊಳ್ಳಬೇಕು. ಅದೇ ಮನೆಯಲ್ಲಾದರೆ ಕುಳಿತು ತೆಗೆದುಕೊಳ್ಳಬಹುದು. ಬಹಳಷ್ಟು ಮಂದಿ ದೇವಸ್ಥಾನಕ್ಕೆ ಹೋದಾಗ ಕಣ್ಣು ಮುಚ್ಚಿ ನಮಸ್ಕಾರ ಹಾಕುತ್ತಿರುತ್ತಾರೆ. ಆ ರೀತಿ ಮಾಡುವುದು ತಪ್ಪು. ದೇವಸ್ಥಾನಕ್ಕೆ ಹೋದ ಕೂಡಲೆ ದೇವರನ್ನು ಮನತಣಿಯುವವರೆಗೂ ನೋಡಿ ಆ ಬಳಿಕ ಮಾತ್ರ ಕಣ್ಣು ಮುಚ್ಚಿಕೊಂಡು ನಮ್ಮ ಮನಸಿನ ಬೇಡಿಕೆಗಳನ್ನು ದೇವರಿಗೆ ನಿವೇದಿಸಬೇಕು.

No comments