Header Ads

test

ಟೀಚರ್ ಬೋರ್ಡ್ ಮೇಲೆ ಆ ರೀತಿ ಬರೆಯಲು ಹೇಳಿದಾಗ ಆ ಯುವತಿ ಕಣ್ಣೀರಾದಳು..! ಪ್ರತಿಯೊಬ್ಬರೂ ತಿಳಿದುಕೊಳ್ಳಿ!

ಗಂಡ, ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳು... ಎಂದಿನಂತೆ ಆ ದಿನ ಸಹ ಆಫೀಸಿಗೆ ಹೋದರು.. ಅದೇ ದಿನ ಆಫೀಸಿನಲ್ಲಿ ಒಂದು ಪರ್ಸನಾಲಿಟಿ ಡೆವಲಪ್‌ಮೆಂಟ್ ಕ್ಲಾಸನ್ನು ವ್ಯವಸ್ಥೆ ಮಾಡಿದ್ದರು ಕಚೇರಿ ನಿರ್ವಾಹಕರು. ಅದರಲ್ಲಿ ಈ ದಂಪತಿಗಳು ಸಹ ಭಾಗವಹಿಸಿದ್ದರು. ಟ್ರೈನರ್ ಬಂದರು, ಪರ್ಸನಾಲಿಟಿ ಡೆವಲಪ್‌ಮೆಂಟ್ ಮೇಲೆ ಕ್ಲಾಸ್ ಆರಂಭಿಸಿದ.. ಪ್ರಾಕ್ಟಿಕಲ್ ಆಗಿ ಏನೋ ಹೇಳಬೇಕು ಎಂದುಕೊಂಡ. ಪತಿ ಪತ್ನಿಯಲ್ಲಿ ಒಬ್ಬರನ್ನು ಬರಲು ಹೇಳಿದ.. ಪತ್ನಿ ಹೋದಳು. ಆಕೆ ಕೈಗೆ ಚಾಕ್‌ಪೀಸ್ ಕೊಟ್ಟು ನಿಮಗೆ ತುಂಬಾ ಇಷ್ಟವಾದ 30 ಹೆಸರುಗಳನ್ನು ಬೋರ್ಡ್ ಮೇಲೆ ಬರೆಯಿರಿ ಎಂದ. ಆಕೆ ತನಗೆ ಬೇಕಾದವರ, ಗೆಳೆಯರನ್ನೂ ನೆನಪು ಮಾಡಿಕೊಂಡು ಪಟ ಪಟ ಎಂದು 30 ಹೆಸರುಗಳನ್ನು ಬೋರ್ಡ್ ಮೇಲೆ ತುಂಬಿದಳು.


ಗುಡ್ ಈಗ ಬರೆದ ಹೆಸರುಗಳಿಂದ 20 ಹೆಸರುಗಳನ್ನು ಅಳಿಸಿ ಎಂದು ಹೇಳಿದ ಟ್ರೈನರ್.. ಆಗ ಆಕೆ ಆಲೋಚಿಸಿ ತನಗೆ ಅಷ್ಟಾಗಿ ಅಗತ್ಯವಿಲ್ಲ ಎಂದುಕೊಂಡವರ ಹೆಸರುಗಳನ್ನು ಅಳಿಸಿದಳು. ಮತ್ತೆ ಆರು ಹೆಸರುಗಳನ್ನು ಅಳಿಸಿ ಎಂದ ಟ್ರೈನರ್. ಈ ಸಲ ಚೆನ್ನಾಗಿ ಯೋಚಿಸಿ ಆರು ಹೆಸರುಗಳನ್ನು ಅಳಿಸಿದಳು.

ಈಗ ಉಳಿದ ನಾಲ್ಕು ಹೆಸರುಗಳಲ್ಲಿ ಎರಡನ್ನು ತೆಗೆಯಿರಿ ಎಂದ. ತುಂಬಾ ನೋವಿನಿಂದ ತನ್ನ ತಂದೆತಾಯಿ ಹೆಸರುಗಳನ್ನು ಡಿಲೀಟ್ ಮಾಡಿದಳು ಆ ಉದ್ಯೋಗಿ. ಈಗ ಉಳಿದ ಎರಡು ಹೆಸರುಗಳಲ್ಲಿ ಒಂದು ಹೆಸರನ್ನು ತೆಗೆದುಬಿಡಿ ಎಂದ ಟ್ರೈನರ್.. ಆಗ ಆಕೆ ಎರಡೂ ಕೈಗಳಿಂದ ತನ್ನ ಮುಖಕ್ಕೆ ಅಡ್ಡಲಾಗಿ ಹಿಡಿದು ಅಳಲು ಶುರು ಮಾಡಿದಳು....ಹೂ.. ಅಳಿಸಿ.. ಒಂದು ಹೆಸರು ಎಂದ ಟ್ರೈನರ್...ಹಾಗೆಯೇ ಅಳುತ್ತಿದ್ದಳು... ಮಗು ಹುಟ್ಟಿದ ದಿನ, ಆ ಮಗುವನ್ನು ಪ್ರೀತಿಯಿಂದ ಬೆಳೆಸಿದ್ದು ಒಂದೊಂದೇ ನೆನಪಾಗುತ್ತಿದ್ದವು. ಆದರೂ ಸರಿ... ಎಂದುಕೊಂಡು ತನ್ನ 3 ವರ್ಷದ ಮಗುವಿನ ಹೆಸರನ್ನು ಅಳಿಸಿದಳು.

ಬೋರ್ಡ್ ಮೇಲೆ ಒಂದೇ ಹೆಸರು ಉಳಿದಿದೆ... ಆ ಹೆಸರು ಯಾರದೋ ಅಲ್ಲ.. ತನ್ನ ಗಂಡನದು. ಆಗ ಹೇಳಿದ ಟ್ರೈನರ್ ಗಂಡ ಹೆಂಡತಿ ಸಂಬಂಧ, ಅನುರಾಗ ಎಂದರೆ ಈ ರೀತಿ ಇರುತ್ತದೆ. ಹೆತ್ತು ಬೆಳೆಸಿದ ತಂದೆತಾಯಿ, ಹೆತ್ತ ಕೂಸನ್ನೂ ಬೇಡ ಎಂದು... ಗಂಡನ ಹೆಸರನ್ನು ಹಾಗೆಯೇ ಅಳಿಸದೆ ಯಾಕೆ ಬಿಟ್ಟಳು ಎಂದರೆ... ಕೊನೆಯತನಕ ಒಬ್ಬರಿಗೆ ಒಬ್ಬರು ಜತೆಯಾಗಿ ಇರುವುದು ಅವರಿಬ್ಬರೇ ಎಂಬ ಟ್ರೈನರ್. ಅದುವರೆಗೂ ನಿಶ್ಯಬ್ದವಾಗಿದ್ದ ಹಾಲ್ ಕರತಾಡನದಿಂದ ಮಾರ್ದನಿಸಿತು.

1 comment: