Header Ads

test

ಹುಡುಗರು ನೋಡಿದ ಕೂಡಲೆ ಹುಡುಗಿಯರ ಆಲೋಚನೆ ಯಾವ ರೀತಿ ಇರುತ್ತದೆ ಗೊತ್ತಾ..?

ರಸ್ತೆಯಲ್ಲಿ ಯಾವುದೇ ಯುವತಿಯನ್ನು ಸಡನ್ ಆಗಿ ನೋಡಿದ ಕೂಡಲೆ ಆಹಾ ಏನ್ ಇದ್ದಾಳೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುವುದೋ, ಸೂಪರ್ ಆಗಿದ್ದಾಳೆ ಎಂದು ಪಕ್ಕದ ಗೆಳಯನಿಗೆ ಹೇಳುವುದನ್ನೂ ಹುಡುಗರು ಮಾಡುತ್ತಿರುತ್ತಾರೆ. ಸಾಧ್ಯವಾದರೆ ಆಕೆಯ ಜತೆಗೆ ಮಾತನಾಡಲು ಪ್ರಯತ್ನಿಸುವುದು, ಇಲ್ಲದಿದ್ದರೆ ಕಾಂಟಾಕ್ಟ್ ನಂಬರ್ ತೆಗೆದುಕೊಂಡು ಗೆಳೆತನ, ಆ ಮೂಲಕ ಪ್ರೀತಿ ಪ್ರೇಮ... ಈ ರೀತಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.. ಆದರೆ ಹುಡುಗರ ವಿಚಾರದಲ್ಲಿ ಹುಡುಗಿಯರು ಅಷ್ಟು ಆತುರಪಡಲ್ಲ. ಆದರೆ ಒಬ್ಬ ಹುಡುಗನನ್ನು ನೋಡಿದ ಕೂಡಲೆ ಐ ಮೀನ್ ಎಲ್ಲರಿಗೂ ಅಲ್ಲ, ಆಗಾಗ ಗ್ರೀಕ್ ಗಾಡ್‌ನಂತಹ ಯುವಕರು ಕಾಣಿಸಿದ ಕೂಡಲೆ ಹುಡುಗಿಯರು ಯಾವ ರೀತಿ ಭಾವಿಸಿಕೊಳ್ಳುತ್ತಾರೆ ಎಂಬ ಉದಾಹರಣೆಗಳು ನಿಮಗಾಗಿ.

ಏನಿದ್ದಾನ್ ಕಣೆ.. ಎಲ್ಲಿರುತ್ತಾರೋ ಇವರೆಲ್ಲಾ.. ನಮ್ಮ ಸಂಬಂಧಿಕರಲ್ಲೋ, ಸಹಪಾಠಿಗಳಲ್ಲೇ ಯಾಕಿರಲ್ಲ... ನಮ್ಮ ಸುತ್ತಲೂ ಇರುತ್ತಾರೆ ಸೋಡಾಬುಡ್ಡಿ ಕನ್ನಡಕ ಧರಿಸಿ, ಕ್ರಾಪ್ ಬಾಚಿಕೊಂಡ ಹುಡುಗರು ಎಂದು ಬೇಸರಿಸಿಕೊಳ್ಳುತ್ತಾರೆ.



ಕನಿಷ್ಠ ಅವನ ಹೆಸರು ಗೊತ್ತಾದರೂ ಸಾಕು, ಸಾಮಾಜಿಕ ಮಾಧ್ಯಮದಲ್ಲಿ ಹುಡುಕಿದರೆ ಅವನ ಎಲ್ಲಾ ಜಾತಕ ನಮ್ಮ ಕೈಯಲ್ಲೇ... ಬಳಿಕ ಅವನನ್ನು ಬೀಳಿಸುವುದು ತುಂಬಾ ಈಜಿ... ಹೆಸರು ತಿಳಿದುಕೊಳ್ಳುವುದು ಹೇಗೆ...? ನೇರವಾಗಿ ಕೇಳೋಣವೇ.. ಅಯ್ಯೋ ಇಷ್ಟು ಫಾಸ್ಟ್ ಅಂದುಕೊಳ್ಳುತ್ತಾನೇನೋ... ಕೇಳದಿದ್ದರೆ ಮಿಸ್ ಆಗುವಂತಿದ್ದಾನೆ...ಛೇ..

ನಮಗೆ ಗೊತ್ತಿರುವ ಫ್ರೆಂಡ್ಸ್‌ನಲ್ಲಿ ಯಾರಿಗಾದರೂ ಇವರು ಗೊತ್ತೇನೋ...ತಿಳಿದುಕೊಂಡರೆ ಆಗಲ್ಲವೇ...ಏನೋ ಸಬೂಬು ಹೇಳಿ ಇಂತಹವರು ಗೊತ್ತು ಎಂದು ತಿಳಿದುಕೊಂಡರೆ ಹೇಗೆ... ಒಳ್ಳೆ ಐಡಿಯಾ ಅಲ್ಲವೇ..?

ನಾವು ನೋಡಿದ ಗ್ರೀಕ್ ಗಾಡ್ ಯಾರೊಂದಿಗಾದರೂ ಮಾತನಾಡಿದರೂ ತಪ್ಪು... ಹೋಗಲಿ ಬಿಡು ಎಂದು ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವುದು... ಆ ಹುಡುಗಿ ಬಹುಶಃ ಅವನ ಫ್ರೆಂಡ್ ಎಂದು ಗೊತ್ತಾದರೆ ಹಮ್ಮಯ್ಯ ಎಂದು ನಿಟ್ಟುಸಿರು ಬಿಡುವುದು...

ಪ್ರತಿ ದಿನ ಚೆನ್ನಾಗಿ ರೆಡಿ ಆಗುತ್ತಿದ್ದೆ... ನನ್ನ ಟೈಮ್ ಬ್ಯಾಡ್ ಅನ್ನಿಸುತ್ತದೆ... ಚೆನ್ನಾಗಿ ರೆಡಿ ಆಗದ ದಿನವೇ ಇವನು ಕಾಣಿಸಬೇಕಾ..? ಛೇ ಛೇ..!!

ನೋಡಿ ನಗೋಣವೇ... ಮತ್ತೆ ನಗುತ್ತಾನಾ, ಪಾಪ ಹುಚ್ಚಿ ಅಂದುಕೊಳ್ಳುತ್ತಾನೆ... ಯಾಕೆ ಬಂತು... ನೋಡಿದ ಕೂಡಲೆ ನಗುವುದು, ಹಾಯ್ ಹೇಳಿದರೆ ಓವರ್ ಎಂದುಕೊಳ್ಳುತ್ತಾನೆ... ನಿಧಾನಕ್ಕೆ ಬುಟ್ಟಿಗೆ ಹಾಕಿಕೊಳ್ಳೋಣ. ಒಂದು ವೇಳೆ ಅವನೇ ಏನಾದರೂ ಈ ಹುಡುಗಿಯನ್ನು ನೋಡಿ ನಕ್ಕಿದರೆ ಇನ್ನು ಜಗತ್ತು ಗೆದ್ದಷ್ಟು ಸಂತೋಷ... ಇದು ಕನಸೇ... ನಿಜವೇ... ನಕ್ಕಿದ್ದು ನನ್ನು ನೋಡಿಯೇನಾ... ಹೇಳಲಾಗದ ಸಂತೋಷ..

No comments