Header Ads

test

ಆಕೆ ಕೆಲಸದವಳಾಗಿ, ಅಂಧಳಾಗಿ, ಗರ್ಭಿಣಿಯಾಗಿ ಮಾರು ವೇಷ ಧರಿಸುತ್ತಿರುತ್ತಾರೆ.. ಯಾಕೆ ಎಂದು ಗೊತ್ತಾದರೆಖಂಡಿತ ಗೌರವಿಸುತ್ತೀರ!

ನಾವು ನಿತ್ಯ ಜೀವನದಲ್ಲಿ ಆಗಾಗ ಡಿಟೆಕ್ಟೀವ್ ಕಥೆಗಳನ್ನು ಕೇಳುತ್ತಿರುತ್ತೇವೆ. ಇನ್ನು ಇದೇ ವಿಚಾರದ ಬಗ್ಗೆ ಅನೇಕ ಸಿನಿಮಾಗಳನ್ನು ಸಹ ನೋಡುತ್ತಿರುತ್ತೇವೆ. ಆದರೆ ನಿಜವಾಗಿ ಡಿಟೆಕ್ಟೀವ್‌ಗಳ ಪ್ರಭಾವ ನಮ್ಮ ದೇಶಕ್ಕಿಂತಲೂ ವಿದೇಶಗಳಲ್ಲಿ ಹೆಚ್ಚು. ಆದರೆ ಈಗ ಟ್ರೆಂಡ್ ಬದಲಾಗಿದೆ. ನಮ್ಮ ದೇಶದಲ್ಲೂ ಡಿಟೆಕ್ಟೀವ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈಗ ನಾವು ಹೇಳಲಿರುವುದು ಸಹ ಹೆಸರಾಂತ ಡಿಟೆಕ್ಟೀವ್ ಬಗ್ಗೆ. ಆದರೆ ಆ ಡಿಟೆಕ್ಟೀವ್ ಒಬ್ಬ ಮಹಿಳೆ. ಇನ್ನೂ ವಿಶೇಷ ಏನೆಂದರೆ.. ಆಕೆ ನಮ್ಮ ದೇಶದ ಮೊದಲ ಮಹಿಳಾ ಡಿಟೆಕ್ಟೀವ್. ಹೌದು ನೀವು ಕೇಳಿದ್ದು ನಿಜ. ಆಕೆ ಹೆಸರು ರಜನಿ ಪಂಡಿತ್..!



ರಜನಿ ಪಂಡಿತ್ 1983ರಿಂದ ಡಿಟೆಕ್ಟೀವ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಸ್ವಂತ ಡಿಟೆಕ್ಟೀವ್ ಏಜೆನ್ಸಿ ಮೂಲಕ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ರಜನಿ ಪಂಡಿತ್ ಡಿಟೆಕ್ಟೀವ್ ಸರ್ವಿಸಸ್ ಹೆಸರಿನಲ್ಲಿ ಈಕೆ ಡಿಟೆಕ್ಟೀವ್ ಏಜೆನ್ಸಿ ನಡೆಸುತ್ತಿದ್ದಾರೆ. ಆದರೆ ಈ ಡಿಟೆಕ್ಟೀವ್ ಏಜೆನ್ಸಿಯನ್ನು ರಜನಿ ಇನ್‍ವೆಸ್ಟಿಗೇಷನ್ ಬ್ಯೂರೋ ಎಂದು ಸಹ ಕರೆಯುತ್ತಾರೆ. ಯಾಕೆಂದರೆ ಆಕೆ ಬಹಳಷ್ಟು ಕ್ಲಿಷ್ಟಕರವಾದ ಪ್ರಕರಣಗಳನ್ನು ಸಹ ಸುನಾಯಾಸವಾಗಿ ಪರಿಹರಿಸಿದ್ದಾರೆ. ಈಗ ಇವರೆ ಏಜೆನ್ಸಿಯಲ್ಲಿ ಒಟ್ಟು 20 ಮಂದಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಈಕೆ ತನ್ನ ಏಜೆನ್ಸಿ ಮೂಲಕ 75 ಸಾವಿರ ಪ್ರಕರಣಗಳನ್ನು ಭೇಧಿಸಿದ್ದಾರೆ. ಹಾಗಾಗಿ ಇವರ ಹೆಸರು ಈಗ ಮುಂಬೈನಲ್ಲಿ ಮಾರ್ದನಿಸುತ್ತಿದೆ. ಬಹಳಷ್ಟು ಮಂದಿ ಬಿಝಿನೆಸ್ ಮಂದಿ, ರಾಜಕಾರಣಿಗಳು, ಫಿಲಂ ಸ್ಟಾರ್ಸ್ ಸಹ ಈಕೆಯ ಡಿಟೆಕ್ಟೀವ್ ಸೇವೆಗಳನ್ನು ಪಡೆದಿದ್ದಾರೆ.

ಇನ್ನು ರಜನಿ ಪಂಡಿತ್ ಮುಖ್ಯವಾಗಿ ದಂಪತಿಗಳ ನಡುವೆ ಉಂಟಾಗುವ ಜಗಳಗಳನ್ನು ಪರಿಹರಿಸುವುದರಲ್ಲಿ ಅವರಿಗೆ ಸಲಹೆಗಳನ್ನು ತೋರುತ್ತಾರೆ. ಹೆಚ್ಚಾಗಿ ದಂಪತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಈಕೆಯ ಬಳಿಗೆ ಬರುತ್ತವೆ. ಅವೆಲ್ಲವನ್ನೂ ತನ್ನದೇ ಶೈಲಿಯಲ್ಲಿ ಈಕೆ ಪರಿಹರಿಸುತ್ತಾರೆ. ಆ ರೀತಿ ಮಾಡುವಾಗ ಈಕೆ ಮನೆ ಕೆಲಸದಳಾಗಿ, ಅಂಧಳಾಗಿ, ಗರ್ಭಿಣಿಯಾಗಿ, ಹೆದ್ದಾರಿ ಬಳಿ ವ್ಯಾಪಾರಿಯಾಗಿ ಬದಲಾಗಿ ಆಯಾ ವೇಷಗಳಲ್ಲಿ ತನ್ನ ಡಿಟೆಕ್ಟೀವ್ ಆರಂಭಿಸುತ್ತಾರೆ. ಆದರೆ ಈಕೆಯನ್ನು ಮಾರು ವೇಷದಲ್ಲಿ ನೋಡಿ ಅಸಲಿ ವೇಷ ನೋಡಿದರೆ ಯಾರೂ ಗುರುತಿಸಲ್ಲ. ಹೌದು ಮತ್ತೆ ಆ ರೀತಿ ಇದ್ದರೆ ಅಲ್ಲವೇ ನಮಗೆ ಡಿಟೆಕ್ಟೀವ್ ಎಂದು ಅನುಮಾನ ಬಾರದಂತೆ ಇರುತ್ತದೆ.

ಆ ರೀತಿ ರಜನಿ ಪಂಡಿತ್ ಡಿಟೆಕ್ಟೀವ್ ಕ್ಷೇತ್ರದಲ್ಲಿ ಪ್ರಗತಿ ಪಥದಲ್ಲಿ ಪಯಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅದೆಷ್ಟೋ ಪ್ರಶಸ್ತಿಗಳು ಆಕೆಯನ್ನು ಹುಡುಕಿಕೊಂಡು ಬಂದಿವೆ. ಈಕೆ ಫೇಸಸ್ ಬಿಹೈಂಡ್, ಮಾಯಾಜಾಲ್ ಎಂಬ ಎರಡು ಪುಸ್ತಕಗಳನ್ನೂ ರಚಿಸಿದ್ದಾರೆ. ಅವು ಸೂಪರ್ ಹಿಟ್ ಆದವು. ಮೊದಲ ಪುಸ್ತಕಕ್ಕೆ ಎರಡು ಪ್ರಶಸ್ತಿಗಳು ಬಂದಿದ್ದರೆ, ಎರಡನೇ ಕೃತಿಗೆ 6 ಪ್ರಶಸ್ತಿಗಳು ಲಭಿಸಿವೆ. ಇದರ ಜತೆಗೆ ಇನ್ನೂ 57 ಪ್ರಶಸ್ತಿಗಳು ಸಹ ಅವರನ್ನು ವರಿಸಿವೆ. ಇವರ ಜೀವನ ಕಥೆಯಾಧಾರವಾಗಿ ಟಿವಿಯವರು ಒಂದು ಸೀರಿಯಲ್ ಸಹ ತೆಗೆಯುತ್ತಿದ್ದಾರೆ. ಅದರ ಹೆಸರು ಡಿಟೆಕ್ಟೀವ್ ದೀದಿ. ಶೀಘ್ರದಲ್ಲೇ ಆ ಟಿವಿಯಲ್ಲಿ ಈ ಸೀರಿಯಲ್ ಆರಂಭವಾಗಲಿದೆ. ಅದಕ್ಕೆ ಸಂಬಂಧಿಸಿದ ಟ್ರೇಲರನ್ನು ಇಲ್ಲಿ ನೋಡಬಹುದು..! ಅದೇನೇ ಇರಲಿ ರಜನಿ ಪಂಡಿತ್ ಈ ರೀತಿ ದೇಶದಲ್ಲಿ ಮೊದಲ ಮಹಿಳಾ ಡಿಟೆಕ್ಟೀವ್ ಆಗಿ ಹೆಸರು ತಂದುಕೊಂಡಿರುವುದು ಅಭಿನಂದನಾರ್ಹ.

No comments