Header Ads

test

ಟಿಫಿನ್‌ ಆಗಿ ಇಡ್ಲಿ, ದೋಸೆ, ವಡೆ ತಿನ್ನುತ್ತಿದ್ದೀರಾ.? ಆದರೆ ಈ ಖಾಯಿಲೆ ಬಾರದೆ ಇರಲ್ಲ.!

ಮೂರು ಹೊತ್ತೂ ಅನ್ನ ತಿಂದರೆ ದಪ್ಪ ಆಗುತ್ತೇವೆ. ಆದಕಾರಣ ಬೆಳಗ್ಗೆ, ರಾತ್ರಿಗೆ ಟಿಫಿನ್ ಮಾಡುತ್ತೇವೆ ಎಂದುಕೊಳ್ಳಿ ಸ್ವಲ್ಪವಾದರೂ ಹೆಚ್ಚಾದ ತೂಕವನ್ನು ಇಳಿಸಿಕೊಳ್ಳಬಹುದು. ಬಹಳಷ್ಟು ಮಂದಿ ತೂಕ ಇಳಿಸಿಕೊಳ್ಳಲು ಅನುಸರಿಸುವ ವಿಧಾನ ಇದೇ.. ಕೆಲವರು ದಿನ ಪೂರ್ತಿ ಕಾಫಿ, ಟೀಗಳ ಮೇಲೆ ಆಧಾರಪಡುತ್ತಾರೆ. ಅದರ ಮೂಲಕ ಹಸಿವು ಕಡಿಮೆಯಾಗಿ ತಿನ್ನುವುದನ್ನು ಕಡಿಮೆ ಮಾಡಿ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಆಲೋಚನೆ ಕೆಲವರದು. ಆದರೆ ಟೀ, ಕಾಫಿಯಿಂದ ನಿಮಗೆ ಗೊತ್ತಿಲ್ಲದೆ ನಿಮ್ಮ ದೇಹಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ.. ಇಡ್ಲಿ, ದೋಸೆಯಂತಹ ಟಿಫಿನ್ಸ್ ನಿತ್ಯ ತಿನ್ನುವುದರಿಂದ ಜೀರ್ಣ ವ್ಯವಸ್ಥೆಗೆ ಹೊಡೆತ ಬೀಳುತ್ತದೆ.


ಹಳೆ ಕಾಲದಲ್ಲಿ ನಮ್ಮ ಹಿರಿಯರಾದರೆ ಬೆಳಗ್ಗೆಯೇ ದೇಹಕ್ಕೆ ಒಳ್ಳೆಯ ಪೋಷಕಾಂಶಗಳನ್ನು, ಪುಷ್ಟಿ ನೀಡುವಂತಹ ಆಹಾರ ತೆಗೆದುಕೊಳ್ಳುತ್ತಿದ್ದರು. ಅದರಲ್ಲೂ ಮೊಸರನ್ನ, ರಾಗಿ ಮುದ್ದೆ, ಜೋಳದ ರೊಟ್ಟಿಯಂತಹ ಪೋಷಕಗಳ ಪರವಾಗಿ ಬೆಲೆ ಕಟ್ಟಲಾಗದ ಆಹಾರಗಳಿವೆ. ಆ ಬಳಿಕ ಎಲ್ಲರೂ ಮೂರು ಹೊತ್ತು ಅನ್ನ ತಿನ್ನುವುದು ಅಭ್ಯಾಸವಾಯಿತು. ಈಗ ಬೆಳಗ್ಗೆ ಟಿಫಿನ್ಸ್ ಮಧ್ಯಾಹ್ನ ಅನ್ನ, ರಾತ್ರಿಗೆ ಅಲ್ಪಾಹಾರ ಹೆಸರಿನಲ್ಲಿ ಮತ್ತೆ ಟಿಫಿನ್ಸ್ ತಿನ್ನುತ್ತಿದ್ದಾರೆ. ಉಳಿದ ಟಿಫಿನ್ಸ್‌ಗೆ ಹೋಲಿಸಿದರೆ ಇಡ್ಲಿ ಒಳ್ಳೆಯದೇ ಆದರೂ ಅದರಲ್ಲಿ ಸಾಂಬಾರ್, ಶುಂಠಿ ಚಟ್ನಿ, ಕಾರದಪುಡಿ, ತುಪ್ಪ... ಈ ರೀತಿ ಎಲ್ಲವನ್ನೂ ಸೇರಿಸಿ ತಿನ್ನುವುದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಹೆಚ್ಚಾಗುತ್ತದೆ.

ಅದೇ ರೀತಿ ಅಕ್ಕಿಗಿಂತ ಉದ್ದಿನ ಬೇಳೆಯಲ್ಲಿ ಹೆಚ್ಚು ಕ್ಯಾಲರಿ ಇರುತ್ತದೆ. ಇವು ಸಕ್ಕರೆ ಅಂಶವನ್ನು ಹೆಚ್ಚಿಸುತ್ತವೆ. ಈ ರೀತಿ ಪ್ರತಿ ದಿನ ಟಿಫಿನ್ಸ್ ತಿನ್ನುವುದರಿಂದ ಕರುಳು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅದೇ ರೀತಿ ಜೀರ್ಣ ವ್ಯವಸ್ಥೆ ಸಂಪೂರ್ಣ ಹಾಳಾಗುತ್ತದೆ. ವಾತ ಖಾಯಿಲೆಗಳು, ಕೀಲು ನೋವಿನಂತಹವು ಬರುತ್ತವೆ. ನಿತ್ಯ ಇಡ್ಲಿ, ದೋಸೆ, ವಡೆ, ಪೂರಿ, ಪರೋಟದಂತಹ ಟಿಫಿನ್ಸ್ ದೀರ್ಘಕಾಲದಿಂದ ಎಂದರೆ ಹತ್ತು ಹದಿನೈದು ವರ್ಷ ತಿನ್ನುತ್ತಿದ್ದರೆ ಅವರಿಗೆ ಸಕ್ಕರೆ ಖಾಯಿಲೆ ಬರುತ್ತದಂತೆ.. ಆದಕಾರಣ ವಾರದಲ್ಲಿ ಒಂದೆರಡು ಸಲಕ್ಕೆ ಮಾತ್ರ ಟಿಫಿನ್ಸ್‌ಗೆ ಸೀಮಿತ ಆಗಬೇಕು.

ಬೆಳಗಿನ ಹೊತ್ತು ಮೊಸರನ್ನ, ಇನ್ನು ರಾತ್ರಿ ಉಳಿದ ಅನ್ನದಲ್ಲಿ ಮೊಸರನ್ನು ಬೆರೆಸಿ ಇಟ್ಟುಕೊಂಡು ಬೆಳಗ್ಗೆ ತಿನ್ನುವುದು, ಅಥವಾ ಮೊಳಕೆ ಕಾಳನ್ನು, ಹಣ್ಣು, ಖರ್ಜೂರದಂತಹವು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೆಲವು ದಿನಗಳಲ್ಲೇ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಗಮನಿಸಬಹುದು. ಅದೇ ರೀತಿ ಮಧ್ಯಾಹ್ನಕ್ಕೆ ಹೊಟ್ಟೆ ತುಂಬ ತಿನ್ನಬೇಕು. ಕೆಲವರು ಉಪವಾಸದ ಹೆಸರಲ್ಲಿ ರಾತ್ರಿ ಹೊತ್ತು ಅನ್ನ ತಿನ್ನಲ್ಲ. ಅಂತಹವರು ಮತ್ತೆ ಇಡ್ಲಿ, ದೋಸೆ, ಬೋಂಡಾ, ಚಪಾತಿ, ಪರೋಟಾದಂತಹವನ್ನು ಚೆನ್ನಾಗಿ ತಿನ್ನುತ್ತಿರುತ್ತಾರೆ. ಆದರೆ ಆ ರೀತಿ ಮಾಡುವುದರಿಂದ ಸಾಮಾನ್ಯವಾಗಿ ಅನ್ನ ತಿನ್ನುವುದಕ್ಕಿಂತ ಹೆಚ್ಚು ದೇಹಕ್ಕೆ ನಷ್ಟ. ಅದೇ ರೀತಿ ರಾತ್ರಿ ಹೊತ್ತು ಲೈಟಾಗಿ ತಿನ್ನುವುದರಿಂದ ಆರೋಗ್ಯವಾಗಿ ಇರುತ್ತಾರೆ. ಹಾಗಾಗಿ ಒಳ್ಳೆಯ ಆರೋಗ್ಯ ನಿಮ್ಮದಾಗಿಸಿಕೊಳ್ಳಿ. ಯಾಕೆಂದರೆ ಆರೋಗ್ಯವೇ ಮಹಾಭಾಗ್ಯ ಅಲ್ಲವೇ?

No comments