Header Ads

test

ಈಕೆಯನ್ನು ಪ್ರತಿ ಯುವತಿಯೂ ಆದರ್ಶವಾಗಿ ತೆಗೆದುಕೊಳ್ಳಬೇಕು.. ಏನು ಕಷ್ಟ ಬಂದಿದೆ ಅಂತ ಅಳಬೇಕು, ನಾನುಯಾವುದೇ ಕಾರಣಕ್ಕೂ ಅಳಲ್ಲ

ತವರುಮನೆಯಲ್ಲಿ ಮುದ್ದಾಗಿ ಬೆಳೆದ ಹುಡುಗಿ ಅತ್ತೆ ಮನೆಗೆ ಹೋಗುವ ಸಮಯದಲ್ಲಿ ಕಣ್ಣೀರಾಕುತ್ತಾಳೆ. ಎಷ್ಟೇ ಪ್ರೇಮ ವಿವಾಹವಾದರೂ, ಕಟ್ಟಿಕೊಳ್ಳುವವನನ್ನು ಎಷ್ಟೇ ಪ್ರೀತಿಸಿದರೂ, ಅದೆಷ್ಟೇ ಹತ್ತಿರದ ಸಂಬಂಧ ಮಾಡಿಕೊಂಡರೂ, ಅತ್ತೆ ಎಷ್ಟೇ ಒಳ್ಳೆಯವಳಾದರೂ ಸಹ ಮದುವೆ ಬಳಿಕ ಅತ್ತೆ ಮನೆಗೆ ಕಳುಹಿಸುವ ಸಮಯದಲ್ಲಿ ಪ್ರತಿ ಹುಡುಗಿ ಸಹ ಅಳುವುದು ಎಂಬುದು ಬಹಳ ಅಂದರೆ ಬಹಳ ಕಾಮನ್. ಆದರೆ ಈ ಬಂಗಾಳಿ ಯುವತಿ ಮಾತ್ರ ಅತ್ತೆ ಮನೆಗೆ ಹೋಗುವ ಸಂದರ್ಭದಲ್ಲಿ ಬಂಧುಗಳು ಅಳು ಎಂದು ಹೇಳಿದರೂ ಸಹ ನಾನು ಅಳಲ್ಲ, ಯಾಕೆ ಅಳಬೇಕು ಎಂದು ನಗುತ್ತಾ ಗಂಡನ ಜತೆಗೆ ಹ್ಯಾಪಿಯಾಗಿ ಹೊರಟು ಹೋದಳು. ಈ ಮದುವೆ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದೇ ವಾರದಲ್ಲಿ ಈ ವೀಡಿಯೋ ಒಟ್ಟು 50 ಲಕ್ಷಕ್ಕೂ ಅಧಿಕ ವ್ಯೂಸನ್ನು ಪಡೆದುಕೊಂಡಿದೆ.


ಸಂಪೂರ್ಣ ವಿವರಗಳನ್ನು ನೋಡುವುದಾದರೆ.. ಕೋಲ್ಕತ್ತಾ ಬೇಗಂಪೂರ್ ಮೂಲದ ಮೂಮ್ ಎಂಬ 24 ವರ್ಷದ ಯುವತಿಗೆ ವಿವಾಹವಾಯಿತು. ಮದುವೆ ಬಳಿಕ ಬಂಗಾಳಿ ಸಂಪ್ರದಾಯದ ಪ್ರಕಾರ ಮನೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ವಧು ಅಳುತ್ತಿರಬೇಕು. ಆಕೆಯ ಬಂಧುಗಳು ಸಮಾಧಾನ ಮಾಡುತ್ತಾ ಅಳು ನಿಲ್ಲಿಸಲು ಪ್ರಯತ್ನಿಸುತ್ತಾ ಹುಡುಗನ ಕೈಗೆ ಒಪ್ಪಿಸಿ ಕಳುಹಿಸುತ್ತಾರೆ. ಆದರೆ ಇಲ್ಲಿ ಸೀನ್ ರಿವರ್ಸ್ ಆಯಿತು. ಮೂಮ್ ಅಳದೆ, ಕಣ್ಣೀರಾಗದೆ ನಗುತ್ತಾ ಗಂಡನ ಜತೆಗೆ ಹೋದಳು. ಆದರೆ ಆಕೆಯ ಬಂಧುಗಳು ಮಾತ್ರ ಅಳುತ್ತಾ ಕಾಣಿಸಿಕೊಂಡರು. ಅಳುತ್ತಾ ಅವರನ್ನು ಅಳಬೇಡ ಎಂದು ನಗುತ್ತಾ ಮೂಮ್ ಎಲ್ಲರನ್ನೂ ಚಕಿತಗೊಳಿಸಿದ್ದಾಳೆ.

ಸಂಪ್ರದಾಯದ ಪ್ರಕಾರ ಅಳು ಎಂದು ಕೆಲವು ಹೇಳಿದರೂ ನಾನ್ಯಾಕೆ ಅಳಬೇಕು, ಇಷ್ಟಕ್ಕೂ ನನಗೆ ಏನು ಕಷ್ಟ ಬಂದಿದೆ ಎಂದು ಅಳಬೇಕು ಎಂದು ಜೋರಾಗಿ ಕೇಳಿದ್ದಾಳೆ. ನಾನು ಯಾವುದೇ ಕಾರಣಕ್ಕೂ ಅಳಲ್ಲ. ನನಗೆ ಅಳಬೇಕಾದ ಅಗತ್ಯ ಇಲ್ಲ ಎಂದು ಹೇಳಿದ್ದಾಳೆ.

ಮೂಮ್‍ರನ್ನು ಪ್ರತಿ ಯುವತಿಯೂ ಆದರ್ಶವಾಗಿ ತೆಗೆದುಕೊಳ್ಳಬೇಕು. ಈ ವೀಡಿಯೋ ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ನಾನಾ ರೀತಿಯ ಕಾಮೆಂಟ್ಸ್ ಕೇಳಿಬರುತ್ತಿವೆ. ಮದುವೆ ಹೆಣ್ಣು ಅತ್ತೆ ಮನೆಗೆ ಹೋಗುವಾಗ ಅಳುವುದು, ಆ ಬಳಿಕ ಹುಡುಗನನ್ನು ಅಳಿಸುವುದು ತುಂಬಾ ಕಾಮನ್. ಆದರೆ ಈಕೆ ಈಗ ಅಳದೆ, ಆ ಬಳಿಕ ಮದು ಮಗನನ್ನು ಅಳಿಸುತ್ತಾಳೇನೋ ಎಂಬ ಜೋಕ್‌ಗಳೂ ಹರಿದಾಡುತ್ತಿವೆ. ಒಟ್ಟಾರೆ ಮೂಮ್ ಒಮ್ಮೆಲೆ ಸೆಲೆಬ್ರಿಟಿ ಆಗಿ ಹೋಗಿದ್ದಾಳೆ.

https://www.facebook.com/100008422146416/videos/vb.100008422146416/2079429952347723/?type=2&video_source=user_video_tab

ನೀವು ಹುಡುಗಿಯಾದ್ದರೆ ಅಥವಾ ನಿಮಗೆ ಅಕ್ಕ ತಂಗಿ ಇದ್ದರೆ ಅವರಲ್ಲಿ ಸ್ಫೂರ್ತಿಯನ್ನು ತುಂಬಲು ಈ ಸಂಗತಿಯನ್ನು ತಪ್ಪದೆ ಹಂಚಿಕೊಳ್ಳಿ.

No comments