Header Ads

test

ಊಟ ಮುಗಿಸಿಕೊಂಡು ಹಾಸ್ಟೆಲ್‍ಗೆ ಹೋಗುತ್ತಿದ್ದ ಕೆಲವು ವಿದ್ಯಾರ್ಥಿನಿಯರ ಮೇಲೆ ವೀರ್ಯ ತುಂಬಿದ ಬಲೂನ್‌ಗಳನ್ನುಎಸೆದು ಓಡಿಹೋದರು

ಸಮಾಜದಲ್ಲಿ ತಮ್ಮ ಸುತ್ತಲೂ ಇರುವ ಮಹಿಳೆಯರನ್ನು ಆಗಾಗ ಆ ದೃಷ್ಟಿಯಿಂದ ನೋಡುವವರು ಜೀವನದಲ್ಲಿ ಯಾವಾಗಲೂ ಬದಲಾಗಲ್ಲ. ತಮ ಮನೋಭಾವವನ್ನೂ ಬದಲಾಯಿಸಿಕೊಳ್ಳಲ್ಲ. ಸಂದರ್ಭ ಏನೇ ಆದರೂ ಸರಿ ಅವರನ್ನು ಹಿಂಸಿಸಲು, ಅವರ ಮೇಲೆ ಅತ್ಯಾಚಾರ ಎಸಗಲು ಕಾಮುಕರು ಸಿದ್ಧವಾಗಿರುತ್ತಾರೆ. ಇದರ ಜತೆಗೆ ಅವರು ಮಾಡುವ ಅಸಭ್ಯ ಚೇಷ್ಟೆಗಳು ಸಹ ಹೇಳಲಾರದಷ್ಟು ನೀಚವಾಗಿ ಇರುತ್ತವೆ. ಅಷ್ಟೆಲ್ಲಾ ದಾರುಣವಾಗಿ ಕೆಲವರು ವರ್ತಿಸುತ್ತಾರೆ. ದೆಹಲಿ ಯೂನಿವರ್ಸಿಟಿಯಲ್ಲೂ ಇಂತಹದ್ದೇ ಹೇಳಲಾರದ, ನಾಚಿಕೆಗೇಡಿನ ಸಂಗತಿಯೊಂದು ನಡೆದಿದೆ. ಅದೇನೆಂದರೆ..


ದೇಶದ ರಾಜಧಾನಿಯ ಪ್ರತಿಷ್ಠಿತ ಲೇಡಿ ಶ್ರೀರಾಮ್ ಮಹಿಳಾ ವಿದ್ಯಾಲಯ ಅದು. ಜನಸಂದಣಿಯಿಂದ ಕೂಡಿರುವ ಲಾಲಾ ಲಜಪತ್ ರಾಯ್ ಮಾರ್ಗದಲ್ಲಿ ಇದೆ. ಆ ವಿದ್ಯಾಲಯಕ್ಕೆ ಸ್ವಲ್ಪ ದೂರದಲ್ಲಿ ಹಾಸ್ಟೇಲ್ ಸಹ ಇದೆ. ಮಧ್ಯಾಹ್ನ ಊಟ ಮುಗಿಸಿಕೊಂಡು ಹಾಸ್ಟೆಲ್‌ಗೆ ಹೋಗುತ್ತಿದ್ದ ಕೆಲವು ವಿದ್ಯಾರ್ಥಿನಿಯರ ಮೇಲೆ ಅಪರಿಚಿತರು ವೀರ್ಯ ತುಂಬಿದ ಬಲೂನ್‌ಗಳನ್ನು ಎಸೆದು, ಓಡಿಹೋಗಿದ್ದಾರೆ. ಶನಿವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೋಲಿ ಬಣ್ಣಗಳನ್ನು ತುಂಬಿದ ಬಲೂನ್‌ಗಳನ್ನು ತಮ್ಮ ಮೇಲೆ ಎಸೆದಿದ್ದಾಗಿ ಭಾವಿಸಿದ್ದಾಗಿ ತಿಳಿಸಿದ್ದಾರೆ. ಆ ಬಳಿಕ ಅಸಲಿ ಸಂಗತಿ ಗೊತ್ತಾಗಿ ಬೆಚ್ಚಿಬಿದ್ದಿದ್ದಾರೆ.

ವೀರ್ಯ ತುಂಬಿದ ಬಲೂನ್‌ಗಳನ್ನು ಹಿಂದಿನಿಂದ ತಮ್ಮ ಮೇಲೆ ಎಸೆದರೆಂದು, ಹಾಗಾಗಿ ತಾವು ಆ ಕಿಡಿಗೇಡಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಹ್ಯಾಪಿ ಹೋಲಿ ಎಂದು ಕೇಕೆ ಹಾಕುತ್ತಾ ಓಡಿಹೋದರು ಎಂದಿದ್ದಾರೆ. ಈ ಘಟನೆ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಲೇಡಿ ಶ್ರೀರಾಮ್ ವಿದ್ಯಾಲಯ ಪ್ರಿನ್ಸಿಪಾಲ್, ಹಾಸ್ಟೆಲ್ ಸೆಕ್ಯುರಿಟಿ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ನೊಂದ ವಿದ್ಯಾರ್ಥಿನಿಯರು ನಾಗಾಲ್ಯಾಂಡ್ ಮೂಲದವರು. ಟೊಲಿನೋ ಛಿಷಿ ಎಂಬ ವಿದ್ಯಾರ್ಥಿನಿ ತಾನು ಎದುರಿಸಿದ ಈ ಘಟನೆ ಬಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಆಕೆ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿದ ಬಳಿಕ ಅದು ಈಗ ವೈರಲ್ ಆಗಿದೆ. ನಾಗಾಲ್ಯಾಂಡ್ ಮೂಲದ ಈಕೆ ಶಿಕ್ಷಣಕ್ಕಾಗಿ ದೆಹಲಿ ವಿಶ್ವವಿದ್ಯಾಲಯಕ್ಕೆ ಬಂದರೆ ಅಲ್ಲಿನ ವಿದ್ಯಾರ್ಥಿ ಈ ರೀತಿ ಮಾಡಿದ್ದಾನೆ. ನಿಜವಾಗಿ ಈ ರೀತಿಯ ಘಟನೆ ಯಾರಿಗೂ ಎದುರಾಗಬಾರದು. ಇಂತಹ ಅಸಭ್ಯಕರ ಕೆಲಸ ಮಾಡಿದಕ್ಕೆ ಆ ವಿಕೃತಕಾಮಿಗೆ ಕಠಿಣವಾಗಿ ಶಿಕ್ಷಿಸಬೇಕು..!

No comments