Header Ads

test

ಫೆಬ್ರವರಿ ತಿಂಗಳು ಎಂದರೆ ಭಯ ಬೀಳುತ್ತಿರುವ ಲವರ್ಸ್, ಟೂ ಅನ್ನಿಸುತ್ತಿರುವ ಬಜರಂಗ ದಳ..!!

ಫೆಬ್ರವರಿ ತಿಂಗಳು ಎಂದರೇನೇ ಎಲ್ಲರಿಗೂ ನೆನಪಾಗುವುದು ವ್ಯಾಲೆಂಟೇನ್ಸ್ ಡೇ. ಫೆಬ್ರವರಿ 14 ಅಂದರೆ ಲವರ್ಸ್‌ಗೆ ತುಂಬಾ ಇಷ್ಟ. ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳು ಮಾಡುವ ಹಂಗಾಮ ಅಷ್ಟಿಷ್ಟಲ್ಲ. ಆದರೆ ಪ್ರೇಮಿಗಳ ದಿನ ಪ್ರೇಮಿಗಳು ಅಲ್ಲದೆ ಇನ್ನೊಬ್ಬರು ಸಹ ಹಂಗಾಮ ಮಾಡುತ್ತಾರೆ. ಅವರೇ ಬಜರಂಗ ದಳ ಕಾರ್ಯಕರ್ತರು.


ಅಯ್ಯೋ ಬಜರಂಗ ದಳ..!
ಪ್ರೀತಿ ಎಂಬ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂದು ಹಾಡುವ ಹುಡುಗರಿದ್ದರು ಒಂದು ಕಾಲದಲ್ಲಿ, ಆದರೆ ಪ್ರೇಮಿಗಳ ದಿನಾಚರಣೆಯಂದು ಪ್ರೇಮ ಪರೀಕ್ಷೆ ಬರೆಯಬೇಕು ಎಂದರೇನೇ ಭಯಬೀಳುತ್ತಿದ್ದಾರೆ. ಅದಕ್ಕೆ ಕಾರಣ ಬಜರಂಗ ದಳ. ಸಿಕ್ಕಿಬಿದ್ದರೆ ಕಥೆ ಅಷ್ಟೇ. ಮದುವೆ, ಮರ್ಯಾದೆ... ಒಂದೇ, ಎರಡೇ ಬಜರಂಗ ದಳ ಎಂದರೆ ಸಾಮಾನ್ಯರಿಗೆ ಖುಷಿ, ಪ್ರೇಮಿಗಳಿಗೆ ಭಯ.

ಅಣ್ಣ ಅಣ್ಣ ಬೇಡ ಅಣ್ಣಾ, ನನ್ನ ತಂಗಿ ಅವಳು..:
ಆ ದಿನ ಬಜರಂಗ ದಳದ ಕಾರ್ಯಕರ್ತರ ಕೈಗೆ ಸಿಕ್ಕಿದರೆ ಕಥೆ ಅಷ್ಟೇ... ಅಣ್ಣ ಅಣ್ಣ ಬೇಡ ಅಣ್ಣ ಎಂದು ಗೋಗರೆಯುತುವುದು ಕೆಲವರ ಪಾಡು. ಇನ್ನೂ ಕೆಲವರು ಅಣ್ಣ ಅವಳು ನನ್ನ ತಂಗಿ, ದಯವಿಟ್ಟು ಬಿಟ್ಟು ಬಿಡಿ ಅಣ್ಣ ಎಂದು ಅಂಗಲಾಚುವವರು. ಕಡೆಗೆ ಬಜರಂಗ ದಳದ ಕಾರ್ಯಕರ್ತರ ಕೈಲಿ ಬುಕ್ ಆಗುತ್ತಾರೆ ಎಂದೋ ಒಂದು ದಿನ.

ಪೊಲೀಸರು ಇದ್ದರೂ..:
ಪೊಲೀಸರು ಮಾತ್ರ ಫೆಬ್ರವರಿ 14ರಂದು ಯಾರಾದರೂ ಬಜರಂಗ ದಳದವರು ಗಲಾಟೆ ಮಾಡಿದರೆ ಅವರನ್ನು ಅರೆಸ್ಟ್ ಮಾಡುತ್ತೀವಿ ಎಂದು ಎಚ್ಚರಿಸಿರುತ್ತಾರೆ. ಪಟ್ಟಣಗಳಲ್ಲಿ ಬಜರಂಗ ದಳದ ಪ್ರಭಾವ ಅಷ್ಟಾಗಿ ಇರಲ್ಲ. ಆದರೆ ಬೆಂಗಳೂರು, ಮಂಗಳೂರು, ಹುಬ್ಬಳಿಯಂತಹ ನಗರಗಳಲ್ಲಿ ಬಜರಂಗ ದಳ ಪ್ರಭಾವ ಹೆಚ್ಚಾಗಿ ಇರುತ್ತದೆ. ಮುಖ್ಯವಾಗಿ ಪಾರ್ಕ್‌ಗಳಲ್ಲಿ..

ಫೆಬ್ರವರಿ 14ರಂದು ಸಿಂಗಲ್‌ಗಳಿಗೆ ಹಬ್ಬವೋ ಹಬ್ಬ..:
ಪ್ರೀತಿ ಭಗ್ನವಾದವರು, ಪ್ರೀತಿಯನ್ನು ಕಳೆದುಕೊಂಡವರ ಸೇಡೆಲ್ಲಾ ಬಜರಂಗದ ದಳದ ಜತೆಗೆ ಕೈ ಜೋಡಿಸಿ ಪ್ರೇಮಿಗಳ ಮೇಲೆ ತೀರಿಸಿಕೊಳ್ಳುತ್ತಾರೆ. ಒಂದು ರೀತಿ ಹೇಳಬೇಕು ಎಂದರೆ ಸಿಂಗಲ್ಸ್ ಬಹಳಷ್ಟು ಮಂದಿ ಫೆಬ್ರವರಿ 14ಕ್ಕೆ ಎದುರು ನೋಡುತ್ತಿರುತ್ತಾರೆ. ಫೆಬ್ರವರಿ 14ರಂದು ಏನೆಲ್ಲಾ ನಡೆಯುತ್ತದೋ ಕಾದು ನೋಡಬೇಕು.

ಹಿಂಸಾಚಾರ ಬೇಡ...:
ಆದರೆ ಉತ್ತರದ ಕಡೆ ಬಜರಂಗ ದಳ ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳನ್ನು ಸದೆಬಡಿಯುತ್ತಿತ್ತು. ಸಿಕ್ಕಿದ ಕಡೆ ಅವರನ್ನು ಹೊಡೆಯುತ್ತಿದ್ದರು. ಈ ರೀತಿ ಹಿಂಸಾಚಾರಕ್ಕೆ ಕೈ ಹಾಕಿದರೆ ಭಾರಿ ಮೌಲ್ಯ ತೆರಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸುತ್ತಿದ್ದಾರೆ. ಫಾರಿನ್ ಸಂಪ್ರದಾಯವಾದ ವ್ಯಾಲೆಂಟೇನ್ಸ್ ಡೇಯನ್ನು ನಮ್ಮ ದೇಶದಲ್ಲಿ ಆಚರಿಸಬಾರದು ಎಂಬ ಮುಖ್ಯ ಉದ್ದೇಶ ಎಂದು ಕೆಲವು ಬಜರಂಗ ದಳ ಕಾರ್ಯಕರ್ತರು ಹೇಳುತ್ತಿದ್ದಾರೆ.

No comments