Header Ads

test

ನನ್ನ ಮಗು ಮುಖದಲ್ಲಿ ಇರುವ ಕಿರುನಗೆ ನನ್ನನ್ನು ಬದುಕಿಸುತ್ತಿದೆ.. ಹಾರ್ಟ್ ಟಚಿಂಗ್ ಸ್ಟೋರಿ..!

ನನ್ನ ಮಗಳು ಬದುಕುತ್ತಾಳೆಂದು ಯಾರೂ ಅಂದುಕೊಂಡಿರಲಿಲ್ಲ. ನನಗೆ ಮದುವೆಯಾದ 10 ವರ್ಷಗಳಿಗೆ ಸಂತಾನ ಆಯಿತು. ನನ್ನ ಮಗಳು ತಿಂಗಳು ತುಂಬುವ ಮೊದಲೇ ಜನಿಸಿದಳು. 3 ತಿಂಗಳು ಮುಂಚಿತವಾಗಿ ನನಗೆ ಡೆಲಿವರಿ ಆಯಿತು. ಹಾಗಾಗಿ ನನ್ನ ಮಗು ಉಳಿಯಲ್ಲ ಎಂದು, ಆಕೆಯನ್ನು ಬಿಡಬೇಕೆಂದು, ಆಕೆಗೆ ದೂರವಾಗಿ ಇರಬೇಕೆಂದು ನನಗೆ ಗ್ರಾಮಸ್ಥರು ಸೂಚಿಸಿದರು. ಆದರೂ ನಾನು ಕೇಳಲಿಲ್ಲ. ನನ್ನ ಮಗು ನನ್ನೊಂದಿಗೆ ಇರುತ್ತಾಳೆಂದು ಅವರಿಗೆ ಹೇಳಿದೆ. ಆ ರೀತಿ ಇದ್ದರೆ ಮಗು ಸತ್ತು ಹೋದರೆ ನಾನು ತೀವ್ರವಾಗಿ ಕುಗ್ಗಿಹೋಗುತ್ತೇನೆ ಎಂದು ಗ್ರಾಮಸ್ಥರು ಹೇಳಿದರು. ಅವರೊಂದಿಗೆ ಜೋರಾಗಿ ವಾದಿಸಿದೆ. ನನ್ನ ಮಗು ಬದುಕುತ್ತದೆಂದು ಹೇಳಿದೆ. ನನ್ನ ಗಂಡ ನನಗೆ ಸಹಕರಿಸಿದ. ಇದರಿಂದ ಇಬ್ಬರೂ ಗ್ರಾಮ ಬಿಟ್ಟು ದೂರ ಹೊರಟು ಹೋದೆವು.


ನನ್ನ ಮಗುವನ್ನು ಕಾಪಾಡಲು ನನ್ನ ಗಂಡ ಏನೇ ಮಾಡಲು, ಎಷ್ಟು ದೂರ ಹೋಗಲೂ ಸಿದ್ಧ ಎಂದು ಹೇಳಿದ. ಅದು ನನಗೆ ಸಾಕಷ್ಟು ಧೈರ್ಯವನ್ನು ನೀಡಿತು. ನನ್ನ ಮಗು ನನ್ನಿಂದ ದೂರ ಅಲ್ಲ ಎಂದು ನನ್ನ ಹೃದಯ ಹೆಳುತ್ತಿದೆ. ನನ್ನ ಮಗು ನನ್ನ ಕನಸಿನ ರೂಪ ಎಂದು ಯಾರಿಗೂ ಗೊತ್ತಿಲ್ಲ. ಆಕೆ ನನ್ನಲ್ಲಿ ಬೆಳೆಯುವ ಮುನ್ನವೇ ಅದೆಷ್ಟೋ ವರ್ಷಗಳಿಂದ ಜತೆಗೆ ಇದ್ದಾಳೆ. ನನ್ನ ಮಗು ನನಗೆ ಹೊಸಬಳಲ್ಲ. ನನ್ನ ಮಗುವಿನ ಮುಖವನ್ನು ಹುಟ್ಟುವ ಮುನ್ನವೇ ನೋಡಿದೆ. ನಾವು ಒಂದು ಸಿಟಿಗೆ ಬಂದೆವು. 6 ತಿಂಗಳ ಕಾಲ ನನಗೂ, ನನ್ನ ಗಂಡನಿಗೂ ಮಗು ಆರೋಗ್ಯದ ಬಗ್ಗೆ ಆತಂಕ ಇತ್ತು. ನಾವು ನಿತ್ಯ ನಿದ್ದೆ ಸಹ ಸಹಿಯಾಗಿ ಹೋಗುತ್ತಿರಲಿಲ್ಲ.

ಅಂತಹ ಪರಿಸ್ಥಿತಿಯಲ್ಲಿ ಒಂದು ದಿನ ನನ್ನ ಮಗುಗಿನ ಒಂದು ರಾತ್ರಿ ಉಸಿರಾಡಲು ಕಷ್ಟವಾಯಿತು. ಅವಳನ್ನು ನನ್ನ ಮಡಿಲಲ್ಲಿ ಮಲಗಿಸಿಕೊಂಡು ರಾತ್ರಿಯಲ್ಲಾ ಎಚ್ಚರಿಕೆಯಿಂದ ನೋಡಿಕೊಂಡೆ. ನನ್ನ ಮಗುವಿನ ಚಿಕಿತ್ಸೆಗಾಗಿ ಗಂಡ ಇದ್ದ ಒಂದು ಆಟೋವನ್ನೂ ಮಾರಿದ. ಬರುಬರುತ್ತಾ ನನ್ನ ಮಗುವಿನ ಆರೋಗ್ಯ ಕ್ಷೀಣಿಸಿತು. ಉಸಿರಾಡುವುದು ಕಷ್ಟವಾಯಿತು. ನನ್ನನ್ನು ಬಿಟ್ಟು ಹೋಗಬೇಡ ಎಂದು ನಿತ್ಯ ಹೇಳುತ್ತಿದ್ದೆ. ನಾನು ಎಷ್ಟು ದಿನಗಳಿಂದ ಅವಳಿಗಾಗಿ ನಿರೀಕ್ಷಿಸುತ್ತಿದ್ದೆ ಎಂಬುದನ್ನು ಹೇಳುತ್ತಿದ್ದೆ. ನಾನು ಎಷ್ಟು ಪ್ರೀತಿಸುತ್ತಿದ್ದೀನಿ ಎಂಬುದನ್ನು ಹೇಳುತ್ತಿದ್ದೆ. ನನ್ನ ಗಂಡ ನನ್ನ ಮಾತುಗಳನ್ನು ಕೇಳಿ ಮೌನವಾಗಿ ಇದ್ದುಬಿಡುತ್ತಿದ್ದರು.

ಒಂದು ದಿನ ರಾತ್ರಿ ನನ್ನ ಗಂಡ ಮಗುವನ್ನು ಚಂದ್ರನಂತೆ ಇದ್ದೀಯ ಎಂದ. ಚಂದ್ರಬಿಂಬದಂತಹ ಮುಖ ಇದೆ ಎಂದು ಹೇಳಿದ. ಹಾಗಾಗಿ ಆಕೆಗೆ ಚಾಂದಿನಿ ಎಂದುದ್ ಹೆಸರು ಇಟ್ಟೆವು. ಅಚ್ಚರಿ.. ನನ್ನ ಮಗು ಉಳಿಯಿತು. ಈಗ ಆಕೆಗೆ 5 ವರ್ಷಗಳು. ಆ ದಿನ ರಾತ್ರಿ ನಾನು ಪ್ರಾರ್ಥಿಸಿದ ದೇವರು ನನ್ನನ್ನು ಕರುಣಿಸಿದ. ಹಾಗಾಗಿಯೇ ನನ್ನ ಮಗು ಈಗ ನನ್ನ ಎದುರು ಜೀವಂತವಾಗಿದ್ದಾಳೆ. ಆಕೆ ಮುಖದಲ್ಲಿನ ಕಿರುನಗೆ ನನ್ನನ್ನು ಈಗಲೂ ಬದುಕಿಸುತ್ತಿದೆ.

--ಆಸ್ಮಾ ತನ್ನ ಮಗಳು ಚಾಂದಿನಿ (5)ಯೊಂದಿಗೆ ...

No comments