ರತಿಕ್ರೀಡೆಗೂ, ನೀರು ಹೆಚ್ಚು ಕುಡಿಯುವುದಕ್ಕೂ ಸಂಬಂಧ ಏನು?
ಪುರುಷರಾದರೆ ನಿತ್ಯ 3.7 ಲೀಟರ್ಗಳು, ಮಹಿಳೆಯರಾದರೆ ನಿತ್ಯ 2.7 ಲೀಟರ್ ನೀರು ದೇಹದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದಕ್ಕೆ ಮೀರಿದ ಹೆಲ್ತ್ ಟಿಪ್ ಇನ್ನೊಂದಿಲ್ಲ. ಯಾವ ವೈದ್ಯರೂ ನೀಡಲ್ಲ ಎಂದು ನಮ್ಮೆಲ್ಲರಿಗೂ ಗೊತ್ತು. ಆದರೆ ನೀರು ಜಾಸ್ತಿ ಕುಡಿಯದಿದ್ದರೆ ಶೃಂಗಾರ ಜೀವನಕ್ಕೂ ಸಹ ಹೊಡೆತ ಬೀಳಲಿದೆ. ಅದೇ ಶುದ್ಧವಾದ ನೀರು ಕುಡಿದರೆ ಶೃಂಗಾರ ಜೀವನ ಉತ್ತಮವಾಗುತ್ತದೆ ಎಂಬುದು ಗೊತ್ತಾ?
- * ನೀರು ಕಡಿಮೆ ಕುಡಿದರೆ ಅದು ಡೀಹೈಡ್ರೇಷನ್ಗೆ ದಾರಿಯಾಗುತ್ತದೆ. ಹೈಡ್ರೇಟೆಡ್ ಆಗಿ ಇಲ್ಲದ ದೇಹ ಸುಸ್ತಾಗುತ್ತದೆ. ಅದರಿಂದ ಹೆಚ್ಚು ಹೆಚ್ಚು ರತಿಕ್ರೀಡೆಯಲ್ಲಿ ಮುಂದುವರೆಯಲು ಸಾಧ್ಯವಾಗಲ್ಲ. ಶೃಂಗಾರದ ಬಗ್ಗೆ ಅನಾಸಕ್ತಿ ಉಂಟಾಗುತ್ತದೆ.
- * ಮಹಿಳೆಯರು ಶೃಂಗಾರ ಆರಂಭಿಸಬೇಕಾದರೆ ಲೂಬ್ರಿಕೇಷನ್ ತುಂಬಾ ಅಗತ್ಯ. ಯೋನಿ ಲೂಬ್ರಿಕೇಶ್ ಆದರೆ ಕೆಲಸ ಸುನಾಯಾಸ ಆಗುತ್ತದೆ. ನೀರು ಚೆನ್ನಾಗಿ ಕುಡಿದರಷ್ಟೇ ಇದು ಸಾಧ್ಯವಾಗುತ್ತದೆ.
- * ನಮ್ಮ ದೇಹದಲ್ಲಿನ ಮಲಿನಗಳನ್ನು, ಟಾಕ್ಸಿನ್ಸ್ ತೊಲಗಿಸಲು ನೀರು ಉಪಯೋಗಕ್ಕೆ ಬರುತ್ತದೆ ಎಂದು ಬಹಳಷ್ಟು ಓದಿರುತ್ತೇವೆ. ಆರೋಗ್ಯಕರವಾದ ದೇಹವೇ, ಆರೋಗ್ಯಕರವಾದ ಶೃಂಗಾರಕ್ಕೆ ಸಾಧನ.
- * ನೀರು ಚೆನ್ನಾಗಿ ಕುಡಿದರೇನೇ ಚರ್ಮದ ಮೇಲೆ ಮೃತಕಣಗಳು ಕಡಿಮೆ ಇದ್ದು, ಚರ್ಮ ಕಾಂತಿಯುತವಾಗಿ, ಸುಂದರವಾಗಿ ಇರುತ್ತದೆ. ಶೃಂಗಾರ ಜೀವನದಲ್ಲಿ ಆರೋಗ್ಯಕರವಾದ ಚರ್ಮ ಯಾವ ರೀತಿಯ ಪಾತ್ರ ಪೋಷಿಸುತ್ತದೋ ವಿಶೇಷವಾಗಿ ಹೇಳಬೇಕಾದ ಅಗತ್ಯವಿಲ್ಲ.
- * ದೇಹದಲ್ಲಿ ಸೆಲ್ಸ್ ಎಲ್ಲಾ ಚೆನ್ನಾಗಿ ಕೆಲಸ ಮಾಡಬೇಕು ಎಂದರೆ ಒಳ್ಳೆಯ ವಾಟರ್ ಇಂಟೇಕ್ ಕಡ್ಡಾಯವಾಗಿ ಇರಬೇಕು. ಹಾಗಾಗಿಯೇ ನೀರು ಚೆನ್ನಾಗಿ ಕುಡಿಯಬೇಕು. ಆಗ ಹಾರ್ಮೋನ್ ತೊಂದರೆ ಅಷ್ಟಾಗಿ ಇರಲ್ಲ. ಶೃಂಗಾರ ಸಮಸ್ಯೆಗಳು ಬರಲ್ಲ.
- * ನೀರು ಚೆನ್ನಾಗಿ ಕುಡಿದರೇನೇ ಉತ್ಪತ್ತಿ ಚೆನ್ನಾಗಿ ಆಗುತ್ತದೆ.
- * ಬೆಳಗ್ಗೆ ನೀರು ಕುಡಿದ ಬಳಿಕ ಸ್ವಲ್ಪ ಸಮಯದವರೆಗೆ ಯಾವುದೇ ಆಹಾರವನ್ನು ಸೇವಿಸಬಾರದು. ಇದನ್ನು ಮಾತ್ರ ಗಮನದಲ್ಲಿಡಬೇಕು.
- * ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ಪೌಷ್ಟಿಕ ದ್ರವ್ಯಗಳ ಹೀರಿಕೆಯನ್ನು ಸುಧಾರಿಸುತ್ತದೆ. ಜೀರ್ಣಕಾರಿ ವ್ಯವಸ್ಥೆಯನ್ನು ಸ್ವಯಂಚಾಲಿತವಾಗಿ ಮಾಡುವುದರ ಜತೆಗೆ ಇನ್ನೂ ಇತರ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತದೆ.
- * ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ರಕ್ತದಿಂದ ವಿಷಕಾರಿ ಅಂಶವನ್ನು ಹೊರ ಹಾಕುತ್ತದೆ. ನೀರು ಕುಡಿಯುವುದರಿಂದ ಹೊಸ ರಕ್ತ ಕಣಗಳು ಮತ್ತು ಸ್ನಾಯು ಜೀವಕೋಶಗಳ ಸೃಷ್ಟಿಯನ್ನು ಸುಧಾರಿಸುತ್ತದೆ ಹಾಗೂ ತೂಕ ಕಳೆದುಕೊಳ್ಳಲು ಸಹಕಾರಿಯಾಗುತ್ತದೆ.
Post a Comment