Header Ads

test

ಮದುವೆ ಯಾಕೆ ಮಾಡಿಕೊಳ್ಳಬೇಕು ಗೊತ್ತಾ..? ಮೂರು ಕಾರಣಗಳಿವೆ..! ನೀವು ಅಂದುಕೊಂಡಿದ್ದಂತೂ ಅಲ್ಲ!

ಎರಡು ಹೃದಯಗಳನ್ನು ಒಂದು ಮಾಡುವ ಕಾರ್ಯವೇ ವಿವಾಹ... ಅದುವರೆಗೂ ಬೇರೆಬೇರೆಯಾಗಿ ಇದ್ದ ಸ್ತ್ರೀ ಪುರುಷರನ್ನು ದಂಪತಿಗಳಾಗಿ ಬೆರೆಸುವುದೇ ವಿವಾಹದ ಉದ್ದೇಶ... ಕೆಲವರು ಪ್ರೀತಿಸಿ ಮದುವೆಯಾಗುತ್ತಾರೆ.. ಇನ್ನೂ ಕೆಲವರು ಯಾವುದೇ ಪರಿಚಯ ಇಲ್ಲದಿದ್ದರೂ ಮದುವೆಯಾದ ಬಳಿಕ ಅವರ ನಡುವೆ ಪ್ರೀತಿಯನ್ನು ಚಿಗುರಿಸುವಷ್ಟು ಮಹತ್ವ ವಿವಾಹ ಬಂಧನಕ್ಕೆ ಇದೆ... ಸಹಜೀವನ, ಕಾಂಟ್ರಾಕ್ಟ್ ಮ್ಯಾರೇಜಸ್ ಬಂದು ವಿವಾಹ ಬಂಧನದಲ್ಲಿ ಬಿರುಕು ಬಿಟ್ಟಿದೆ ಎಂದೇ ಹೇಳಬಹುದು. ಬದಲಾದ ಜೀವನಶೈಲಿ, ಧಾವಂತದ ಜೀವನದಲ್ಲಿ ಬಂಧನಕ್ಕಿಂತ ಹೆಚ್ಚಾಗಿ ಕರಿಯರ್‌ನಲ್ಲಿ ಮುಂದೆ ಬರಲು ಆಸಕ್ತಿ ತೋರುವುದು... ಮದುವೆ ಯಾಕೆ... ಅಗತ್ಯವೇ ಎಂಬ ಆಲೋಚನಾ ಧೋರಣೆ ಇಂದಿನ ಯುವ ಜನಾಂಗದ್ದು.. ಮದುವೆ ಯಾಕೆ ಎಂಬ ಪ್ರಶ್ನೆಗೆ ಉತ್ತರವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು..



ಪ್ರತಿ ಮನುಷ್ಯನೂ ಮೂರು ಋಣಗಳ ಜತೆಗೆ ಹುಟ್ಟುತ್ತಾನೆ. 1. ಋಷಿ ಋಣ 2. ದೇವ ಋಣ 3. ಪಿತೃ ಋಣ ಈ ಮೂರು ಋಣಗಳನ್ನು ತೀರಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಋಣಗಳನ್ನು ತೀರಿಸದಿದ್ದರೆ ಇನ್ನೊಂದು ಜನ್ಮ ಎತ್ತಬೇಕಾಗುತ್ತದೆ. ಮಾನವ ಜನ್ಮಕ್ಕೆ ಸಾರ್ಥಕತೆ ಜನ್ಮ ರಾಹಿತ್ಯ. ಆದಕಾರಣ ಪ್ರತಿಯೊಬ್ಬರೂ ಋಣ ವಿಮುಕ್ತರಾಗಬೇಕು. ವೇದಾಧ್ಯಯನ, ಯಜ್ಞ ಮಾಡುವುದು, ಸಂತಾನ ಪಡೆಯುವುದು ಇವು ಮಾನವನು ಕಡ್ಡಾಯವಾಗಿ ಮಾಡಬೇಕಾದ ವಿಧಿಗಳು ಎಂದು ವೇದ ಹೇಳುತ್ತದೆ.

1. ಋಷಿ ಋಣ: ಬ್ರಹ್ಮ ಚರ್ಯೆಯಲ್ಲಿ ಮಾಡಬೇಕದ ವೇದಾಧ್ಯಯನ ಮಾಡಿ ಬ್ರಹ್ಮಚರ್ಯ ಮೂಲಕ ಋಷಿ ರುಣ ತೀರಿಸಬೇಕು. ಪುರಾಣಗಳ ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ಅದನ್ನು ನೀಡುವ ಮೂಲಕ ಈ ಋಣವನ್ನು ತೀರಿಸಬೇಕು.

2. ದೇವ ಋಣ: ನೀರು, ಗಾಳಿ, ಬೆಳಕು, ಆಹಾರವನ್ನು ಪ್ರಸಾದಿಸುತ್ತಿರುವವರಿಗೆಲ್ಲಾ ನಾವು ಸಾಕಷ್ಟು ಆಭಾರಿಯಾಗಿರುತ್ತೇವೆ. ಆದಕಾರಣ ಆ ಋಣವನ್ನು ತೀರಿಸದಿದ್ದರೆ ನಾವು ಕೃತಜ್ಞರಾಗುತ್ತೇವೆ. ಯಜ್ಞ ಎಂದರೆ ತ್ಯಾಗ. ಯಜ್ಞದ ಮೂಲಕ ದೇವತೆಗಳು ತೃಪ್ತಿ ಪಡೆಯುತ್ತಾರೆ. ಯಜ್ಞ ಯಾಗಾದಿಗಳನ್ನು ಮಾಡುವುದು, ಮಾಡಿಸುವ ಮೂಲಕ ಈ ಋಣವನ್ನು ತೀರಿಸಿಕೊಳ್ಳಬೇಕು. ಇದರಿಂದ ಕಾಲಕಾಲಕ್ಕೆ ಮಳೆ ಸುರಿಯುತ್ತದೆ. ಬೆಳೆ ಫಲಸು ಹೆಚ್ಚುತ್ತದೆ. ಬರಗಾಲ ನೀಗುತ್ತದೆ.

3. ಪಿತೃ ಋಣ: ತಂದೆತಾಯಿ ಪ್ರತ್ಯಕ್ಷ ದೇವರು, ನಮಗೆ ಜನ್ಮ ನೀಡಿ ಬೆಳೆಸಿ ಪೋಷಿಸಿದವರು. ಸತ್ಸಾಂತನವನ್ನು ಪಡೆಯುವ ಮೂಲಕ ಈ ಋಣವನ್ನು ತೀರಿಸಿಕೊಳ್ಳಬೇಕು. ವಂಶವನ್ನು ಅವಿಚ್ಛಿನ್ನವಾಗಿ ಮುಂದುವರೆಸುವ ಮೂಲಕ, ಪಿತೃ ದೇವತೆಗಳಿಗೆ ತರ್ಪಣಾದಿ ಕ್ರಿಯೆಗಳನ್ನು ನಿರ್ವಹಿಸಿ ಯೋಗ್ಯರಾದ ಸಂತಾನವನ್ನು ಪಡೆಯುವ ಮೂಲಕ ಪಿತೃ ಋಣ ತೀರಿಸಿಕೊಳ್ಳಬೇಕು. ಸಂತಾನ ಪಡೆಯಬೇಕು ಎಂದರೆ ಮದುವೆಯಾಗಬೇಕು ಅಲ್ಲವೇ! "ಪ್ರಜಾತಂತುಂ ಮಾವ್ಯವತ್ಸೇತ್ಸಿಃ" ಎನ್ನುತ್ತದೆ ವೇದ. ಅಂದರೆ ವಂಶ ಪರಂಪರೆಯನ್ನು ಮುರಿಯಬೇಡ.

No comments