Header Ads

test

96 ವರ್ಷದಲ್ಲಿ 3ನೇ ತರಗತಿ ಪರೀಕ್ಷೆ ಪಾಸಾದ ಅಜ್ಜಿ.. ಹ್ಯಾಟ್ಸಾಫ್..!

ನಿಜವಾಗಿ ಛಲ, ಸಂಕಲ್ಪ ಇದ್ದರೆ... ಶಿಕ್ಷಣಕ್ಕೆ ವಯಸ್ಸು ಎಂಬುದು ಅಡ್ಡಿಯಾಗಲ್ಲ. ನಾವು ಸಾಯುವವರೆಗೂ ಕಲಿಯುತ್ತಲೇ ಇರಬಹುದು. ನಮ್ಮ ಸಮಾಜದಲ್ಲಿ ಇಂತಹ ಕೆಲಸ ಮಾಡುವವರು ತುಂಬಾ ಅಪರೂಪಕ್ಕೆ ಕಾಣುತ್ತಿರುತ್ತಾರೆ. ಇನ್ನು ಲೇಟ್ ವಯಸ್ಸಿನಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ ಓದಿಕೊಳ್ಳುವವರು ಸಹ ಕೆಲವು ಇರುತ್ತಾರೆ. ಹೌದು.. ಈಗ ನಾವು ಹೇಳಲಿರುವುದು ಸಹ ಅಂತಹದ್ದೇ ಆಸಕ್ತಿ ಇರುವ ಅಜ್ಜಿ ಬಗ್ಗೆ.. ಆಕೆ ಹೆಸರು ಕಾರ್ತ್ಯಾಯನಿ ಅಮ್ಮ. ವಯಸ್ಸು 96 ವರ್ಷಗಳು. ಆಕೆ ಶಿಕ್ಷಣದ ಬಗ್ಗೆ ಈಗ ಕೇರಳ ಮಾತ್ರವಷ್ಟೇ ಅಲ್ಲದೆ, ಇಡೀ ದೇಶದಲ್ಲೇ ಹಟ್ ಟಾಪಿಕ್ ಆಗಿದೆ.


ಕಾರ್ತ್ಯಾಯನಿ ಅಮ್ಮ ಮಗಳ ಹೀಸರು ಅಮ್ಮಿನಿ. ಆಕೆ ಆ ರಾಜ್ಯ ಸರಕಾರ ನಿರ್ವಹಿಸುವ ಸಾಕ್ಷರತೆ ಅಭಿಯಾನದ ಭಾಗವಾಗಿ 10ನೇ ತರಗತಿ ಓದಿದ್ದಾರೆ. ಇದರಿಂದ ತನ್ನ ಮಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡ ಅಮ್ಮ ಸಹ ಆ ಮಿಷನ್‌ನಲ್ಲಿ ಈ ವರ್ಷ ಜನವರಿಗೆ ದಾಖಲಾದರು. ಅದರ ಭಾಗವಾಗಿ ಅಮ್ಮ 3ನೇ ತರಗತಿವರೆಗೂ ಓದಿದರು. ಇತ್ತೀಚೆಗೆ 4ನೇ ತರಗತಿ ಪರೀಕ್ಷೆ ಬರದರು. ಅದರಲ್ಲಿ 30 ಅಂಕಗಳನ್ನು ರೀಡಿಂಗ್‌ಗೆ, 40 ಅಂಕಗಳನ್ನು ಮಲಯಾಳಂಗೆ, 30 ಅಂಕಗಳನ್ನು ಗಣಿತಕ್ಕಿವೆ. ಅಮ್ಮ ರೀಡಿಂಗ್‌ನಲ್ಲಿ 30ಕ್ಕೆ 30 ಅಂಕಗಳನ್ನು ಪಡೆದಿದ್ದಾರೆ. ಹಾಗಾಗಿ ಶೀಘ್ರದಲ್ಲೇ 4ನೇ ತರಗತಿ ಪೂರೈಸಲಿದ್ದಾರೆ. ಆದರೆ ಕಾರ್ತ್ಯಾಯನಿ ಅಮ್ಮ ಈ ರೀತಿ 3ನೇ ತರಗತಿ ಪರೀಕ್ಷೆ ಕ್ಲಿಯರ್ ಮಾಡುವ ಹೊತ್ತಿಗೆ ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ಆ ಪರೀಕ್ಷೆ ಬರೆದವರಲ್ಲಿ ಅತ್ಯಧಿಕ ವಯಸ್ಸಿನ ವಿದ್ಯಾರ್ಥಿ ಇವರು. 96ರ ವಯಸ್ಸಲ್ಲೂ ಅವರ ಛಲ, ಪರೀಕ್ಷೆ ಬರೆದದ್ದರ ಬಗ್ಗೆ ಎಲ್ಲರೂ ಅಭಿನಂದಿಸುತ್ತಿದ್ದಾರೆ.

ಕೇರಳ ರಾಜ್ಯ ಸಾಕ್ಷರತೆ ಅಭಿಯಾನ ಅಥಾರಿಟಿಯ ಲಿಟರಸಿ ಪರೀಕ್ಷೆಯಲ್ಲಿ ಪಾಸಾದ ಕಾರ್ಯಾಯನಿ ಅಮ್ಮನನ್ನು ಸಹಪಾಠಿಗಳಷ್ಟೇ ಅಲ್ಲದೆ, ರಾಜ್ಯದಾದ್ಯಂತ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ. ಆ ವಯಸ್ಸಿ ಓದಬೇಕು ಎಂಬ ಅವರ ಆಸಕ್ತಿಯನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಅದು ಮಹಿಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹಿಂದ್ರಾವರೆಗೂ ಹೋಯಿತು. ಇದರಿಂದ ಅವರು ಸಹ ಕಾರ್ತ್ಯಾಯನಿ ಅಮ್ಮನನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಮ್ಮನಿಗೆ ಪ್ರಶಂಸಿಸಿ ಬಹಳಷ್ಟು ಮಂದಿ ಟ್ವೀಟ್ ಮಾಡುತ್ತಿದ್ದಾರೆ. ಕಾರ್ತ್ಯಾಯನಿ ಅಮ್ಮ ಕೇರಳದ ಸಾಕ್ಷರತೆ ಮಿಷನಲ್ಲಿ 10ನೇ ತರಗತಿವರೆಗೂ ಓದಬೇಕೆಂದು ಬಯಸಿದ್ದಾರೆ. ಅವರ ಕನಸು ನಿಜವಾಗಲಿ ಎಂದು ನಾವೂ ಆಶಿಸೋಣ..!

No comments