Header Ads

test

8 ತಿಂಗಳ ಹಿಂದೆ ಮದುವೆ... ಉಗ್ರ ದಾಳಿಯಲ್ಲಿ ಹುತಾತ್ಮರಾದ ಗುರು ಕಣ್ಣೀರ ಕಥೆ

ಜಮ್ಮಿ ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮನಾದ ವೀರ ಯೋಧರ ಕುಟುಂಬ ಸದಸ್ಯರು ಎಷ್ಟೆಲ್ಲಾ ನೋವನುಭವಿಸುತ್ತಿದ್ದಾರೋ ಅವರ ಪತಿಸ್ಥಿತಿ ಊಹಿಸಿಕೊಂಡರೇನೇ ಹೃದಯ ನುಚ್ಚು ನೂರಾಗುತ್ತದೆ. 40 ಮಂದಿ ಸೈನಿಕರನ್ನು ಕಳೆದುಕೊಂಡ ನಾವು ಅದೆಷ್ಟು ಬೇಸರಪಡುತ್ತೀದ್ದೀವೋ, ಇನ್ನು ಅವರ ಕುಟುಂಬಿಕರ ಪತಿಸ್ಥಿತಿ ಎಷ್ಟು ಶೋಚನೀಯ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಮರರಾದ ಸೈನಿಕರ ಕುಟುಂಬದ ಬೆಂಬಲಕ್ಕೆ ನಿಲ್ಲಲು ಸರಕಾರ ಮತ್ತು ಸಾರ್ವಜನಿಕರು ಮುಂದೆ ಬರುತ್ತಿದ್ದಾರೆ. ಅದೆಷ್ಟೇ ಆರ್ಥಿಕ ಸಹಾಯ ಮಾಡಿದರೂ, ಅದೆಷ್ಟೇ ಅವರಿಗೆ ಸಹಕಾರ ನೀಡಿದರೂ ಕಳೆದುಕೊಂಡರವ ಕೊರತೆಯನ್ನು ಭರಿಸಲು ಸಾಧ್ಯವಿಲ್ಲ. 40 ಮಂದಿಯ ಎಲ್ಲಾ ಕುಟುಂಬಗಳೂ ಕಣ್ಣೀರಿನಲ್ಲಿ ಮುಳುಗಿವೆ.


ಕರ್ನಾಟಕ ಮೂಲದ ಗುರು ವಿಷಯ ಮಾತ್ರ ತುಂಬಾ ವಿಶೇಷ ಎಂದು ಹೇಳಬಹುದು. ಮಂಡ್ಯದ ಗಂಡು ಗುರು 8 ತಿಂಗಳ ಹಿಂದೆ ಕಲಾವತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಮದುವೆಯಾದ್ದ ಕೂಡಲೆ ಬಾರ್ಡರ್‌ಗೆ ಹೊರಟು ಹೋದ. ಬಾರ್ಡರ್‌ಗೆ ಹೋದ ಗುರು ಆಗಾಗ ಬರುತ್ತಾ ಇದ್ದ. ಇತ್ತೀಚೆಗೆ ಮನೆಗೆ ಬಂದು 15 ದಿನಗಳ ಕಾಲ ಇದ್ದು ಹೋಗಿದ್ದರು. ಗುರು ಹೋಗುವ ಸಮಯದಲ್ಲಿ ಕಲಾವತಿ ನಾನು ಬರುತ್ತೇನೆ ಎಂದು ಹಠ ಹಿಡಿದಿದ್ದರು. ಇನ್ನೊಮ್ಮೆ ಬಂದಾಗ ಖಂಡಿತ ಕರೆದೊಯ್ಯುತ್ತೇನೆ ಎಂದು, ಅಲ್ಲೇ ವ್ಯವಸ್ಥೆ ಮಾಡಿ ಬರುತ್ತೇನೆ ಎಂದು ಹೇಳಿ ಹೋಗಿದ್ದ.

ಗುರು ಜತೆಗೆ ಹೋಗಲು ತುಂಬಾ ಆಸಕ್ತಿಯಿಂದ ಎದುರು ನೋಡುತ್ತಿದ್ದ ಕಲಾವತಿಗೆ ಆರ್ಮಿ ಅಧಿಕಾರಿಗಳಿಂದ ಬಂದ ಫೋನ್‍ ಹೃದಯ ನುಚ್ಚು ನೂರಾಗುವಂತೆ ಮಾಡಿತು. ಆಕೆ ಅದೆಷ್ಟೋ ಅಸೆಯಿಂದ ಹೊಸ ಜೀವನಕ್ಕೆ ಅಡಿ ಇಟ್ಟಿದ್ದರು. ಗುರುವನ್ನು ತನ್ನ ಸರ್ವಸ್ವ ಎಂದುಕೊಂಡಿದ್ದರು. ಆದರೆ ಗುರು ದೇಶಕ್ಕಾಗಿ ಪ್ರಾಣ ಅರ್ಪಿಸಿ ಎಲ್ಲರಿಗೂ ಶೋಕ ಉಳಿಸಿ ಹೊರಟು ಹೋದ. ವೀರ ಸೈನಿಕ ಗುರು ಪತ್ನಿ ಕಲಾವತಿ ಕಣ್ಣೀರನ್ನು ನೋಡಿದ ಸ್ಥಳೀಯರ ಕರುಳು ಚುರ್ ಎನ್ನುತ್ತಿತ್ತು.

ಬಂದು ಕರೆದೊಯ್ಯುತ್ತೇನೆ ಎಂದ. ಒಬ್ಬನೇ ಯಾಕೆ ಹೋದೆ ಎಂದು ಆಕೆ ಅಳುತ್ತಿದ್ದರೆ ಆಕೆಯನ್ನು ಹೇಗೆ ಸಮಾಧಾನಪಡಿಸಬೇಕೋ ಯಾರಿಗೂ ಅರ್ಥವಾಗಲಿಲ್ಲ. 8 ತಿಂಗಳ ವೈವಾಹಿಕ ಜೀವನದಲ್ಲಿ ಗುರು ಹೆಚ್ಚಾಗಿ ಬಾರ್ಟರ್‌ನಲ್ಲೇ ಇದ್ದ. ಆದರೂ ಸಹ ಕಲಾವತಿ ತನ್ನ ಗಂಡ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರಂತೆ. ಈ ಸಲ ಬಂದು ಕರೆದೊಯ್ಯುತ್ತೇನೆ ಎಂದ ಗುರು ಒಬ್ಬನೇ ಬಾರದ ಲೋಕಕ್ಕೆ ಹೋಗಿದ್ದಾನೆ. ಕಲಾವತಿ ಕಣ್ಣೀರು ನಿಲ್ಲುತ್ತಿಲ್ಲ.

No comments