Header Ads

test

ದುರ್ವಾಸೆನೆ ಬರುವ ಹಣ್ಣಿನ ಬೆಲೆ ರೂ.70 ಸಾವಿರ, ಈ ಹಣ್ಣಿಗಾಗಿ ಮುಗಿಬೀಳುತ್ತಿರುವ ಜನ, ಯಾಕೆ ಗೊತ್ತಾ..?

ಚರಂಡಿ, ಬೆವರಿನ ದುರ್ಗಂಧ ಬೀರುವ ಸಾಕ್ಸ್ ವಾಸನೆ ಬರುವ ಹಣ್ಣಿನ ಬಗ್ಗೆ ಎಂದಾದರೂ ಕೇಳಿದ್ದೀರಾ... ಎಲ್ಲಿಯಾದರೂ ಈ ಹಣ್ಣಿನ ಬಗ್ಗೆ ಓದಿದ್ದೀರಾ.. ಭೂಮಿ ಮೇಲೆ ಇಂತಹ ಹಣ್ಣು ಸಹ ಇದೆ ಎಂಬುದೇ ಅಚ್ಚರಿಯ ಸಂಗತಿ. ಹಾಗಿದ್ದರೆ ಈ ಹಣ್ಣಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದರ ಬೆಲೆ ಅಕ್ಷರಶಃ ರೂ.71 ಸಾವಿರ (1000 ಡಾಲರ್). ಇಷ್ಟಕ್ಕೂ ಈ ಹಣ್ಣಿನಲ್ಲಿ ಅಂತಹ ವಿಶೇಷತೆ ಏನಿದೆ? ಅಂತಿದ್ದೀರಾ? ಇದು ತುಂಬಾ ಅಪರೂಪದ ಹಣ್ಣು. ಆಗ್ನೇಯ ಏಷ್ಯಾದಲ್ಲಿ ಸಿಗುವ ಈ ಹಣ್ಣಿನ ಹೆಸರು ಡುರಿಯನ್. ಜೆ-ಕ್ವೀನ್ ಹೈಬ್ರಿಡ್ ಜಾತಿಗೆ ಸೇರಿದ ಈ ಹಣ್ಣನ್ನು ಇಂಡೋನೇಷ್ಯಾದವರು ಹಣ್ಣುಗಳ ರಾಜ ಎಂದೇ ಭಾವಿಸುತ್ತಾರೆ. ಇವು ಗುಂಡಗಿನ ಆಕಾರದಲ್ಲಿ ಇದ್ದು... ಅಪರೂಪಕ್ಕೆ ಲಭಿಸುವ ಕಾರಣ ಇದಕ್ಕೆ ಅಷ್ಟೆಲ್ಲಾ ಬೆಲೆ ಇದೆ.



ಈ ಹಣ್ಣಿನಿಂದ ಬರುವ ದುರ್ವಾಸನೆ ಕಾರಣ ಸಿಂಗಪುರದಲ್ಲಿನ ಕೆಲವು ಹೋಟೆಲ್ಸ್ ಇದನ್ನು ನಿಷೇಧಿಸಿವೆ. ಆದರೆ ಇಂಡೋನೇಷ್ಯಾದಲ್ಲಿ ಈ ಹಣ್ಣು 1000 ಡಾಲರ್‌ಗೆ ಮಾರಾಟವಾಗುತ್ತದೆ. ಈ ಸಂಗತಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇಷ್ಟಕ್ಕೂ ಈ ಹಣ್ಣಿನಲ್ಲಿ ಅಂತಹ ವಿಶೇಷತೆ ಏನಿದೆ ಎಂದರೆ...ಇದು ಆರೋಗ್ಯಕರವಾದ ಹಣ್ಣು. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿರುತ್ತದೆ. ವಿಟಮಿನ್ ಸಿ, ಪೊಟ್ಯಾಷಿಯಂ ಹೇರಳವಾಗಿರುವ ಹಣ್ಣಿದು. ಅಷ್ಟೇ ಅಲ್ಲ ಸ್ನಾಯುಗಳನ್ನು ಇದು ಬಲಪಡಿಸುತ್ತದೆ. ಚರ್ಮದ ಆರೋಗ್ಯಕ್ಕೆ ಹಾಗೂ ಕಡಿಮೆ ರಕ್ತದ ಒತ್ತಡ ಇರುವವರಿಗೆ ಈ ಹಣ್ಣು ಸಂಜೀವಿನಿ ಇದ್ದಂತೆ. ಒಂದು ಚಿಕ್ಕ ಗಾತ್ರದ ಡುರಿಯನ್ ಹಣ್ಣಿನಲ್ಲಿ 23 ಗ್ರಾಂ ಡಯಟರಿ ಫೈಬರ್ ಅಂಶ ಇರುತ್ತದೆ. ಆದರೆ ಇದನ್ನು ಅತಿಯಾಗಿ ತಿನ್ನುವಂತಿಲ್ಲ. ಇದನ್ನು ಜಾಸ್ತಿ ತಿಂದರೆ ಉಸಿರಾಟದ ತೊಂದರೆ, ತಲೆ ಸುತ್ತುವುದು ಮುಂತಾದ ಸಮಸ್ಯೆಗಳು ಕಾಣಿಸುತ್ತವೆ.

ಇದನ್ನು ತರಕಾರಿಯಾಗಿಯೂ ಬಳಸುತ್ತಾರೆ. ಕೆಲವು ಕಡೆ ಈ ಹಣ್ಣಿನ ಮಾರಾಟ ನಿಷೇಧ. ಯಾಕೆಂದರೆ ಕೆಟ್ಟ ವಾಸನೆ ಕಾರಣ. ದೋರೆಗಾಯಿ ಕಹಿಯಾಗಿರುತ್ತದೆ. ಅದೇ ಹಣ್ಣಾದರೆ ಸಿಹಿಯಿಂದ ಕೂಡಿರುತ್ತದೆ. ಗಿಡದಲ್ಲೇ ಹಣ್ಣಾಗಿ ಕೆಳಗೆ ಬಿದ್ದ ಹಣ್ಣುಗಳು ಚೆನ್ನಾಗಿರುತ್ತವೆ. ಕೃತಕವಾಗಿ ಹಣ್ಣಾಗಿಸಿದರೆ ಅಷ್ಟು ರುಚಿ ಇರಲ್ಲ.

No comments