Header Ads

test

ಹಿಂಬದಿಯಿಂದ ಅಪ್ಪಿಕೊಂಡು ಕುತ್ತಿಗೆ ಮೇಲೆ ಚುಂಬಿಸಿದೆ... ಅಷ್ಟರಲ್ಲಿ 6 ವರ್ಷದ ಪುಟಾಣಿಯೊಬ್ಬ ನಮ್ಮನ್ನು ನೋಡಿಮಾಡಿದ ಕೆಲಸಕ್ಕೆ ಶಾಕ್!

"ಕಳೆದ ವರ್ಷ ನಮ್ಮ ಮನೆಯಲ್ಲಿ ಒಂದು ಫಂಕ್ಷನ್ ನಡೆಯಿತು. ನಮ್ಮ ತಂದೆಯ ಬೆಸ್ಟ್ ಫ್ರೆಂಡ್ ಒಬ್ಬರು ಇದ್ದಾರೆ. ಅವರಿಗೆ ಮಗಳಿದ್ದಾಳೆ. ಆಕೆ ನನ್ನ ಗರ್ಲ್ ಫ್ರೆಂಡ್. ಒಮ್ಮೆ ಅವರು ತಮ್ಮ ಕುಟುಂಬ ಸಮೇತ ನಮ್ಮ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದರು. ಅವರ ಜತೆ ನನ್ನ ಗರ್ಲ್‍ ಫ್ರೆಂಡ್ ಸಹ ಇದ್ದಳು. ಬಹಳಷ್ಟು ಕಡಿಮೆ ಮಂದಿಯನ್ನು ಮಾತ್ರ ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆವು. ಒಟ್ಟು 60 ರಿಂದ 70 ಮಂದಿ ಅತಿಥಿಗಳು ಇರುತ್ತಾರೆ. ಆದರೆ ಹೊರಗೆ ಫಂಕ್ಷನ್ ನಡೆಯುತ್ತಿದ್ದರೆ ನಮ್ಮ ಮನೆಯ ಒಂದು ರೂಮಿನಲ್ಲಿ ನಮ್ಮ ಕುಟುಂಬಿಕರು ಸ್ವಲ್ಪ ಮಂದಿ, ನನ್ನ ಗರ್ಲ್ ಫ್ರೆಂಡ್, ನಾನು, ಕೆಲವರು ಅತಿಥಿಗಳಿದ್ದಾರೆ. ಎಲ್ಲರೂ ಕ್ಷೇಮ ಸಮಾಚಾರ ಮಾತನಾಡಿಕೊಳ್ಳುತ್ತಿದ್ದೇವೆ.


ಬಳಿಕ ಒಬ್ಬೊಬ್ಬರಾಗಿ ಎದ್ದು ಹೊರಗೆ ಫಂಕ್ಷನ್‌ಗೆ ಹೋದರು. ಆ ರೂಮಿನಲ್ಲಿ ನಾನು, ನನ್ನ ಗರ್ಲ್ ಫ್ರೆಂಡ್ ಮಾತ್ರ ಇಬ್ಬರೇ ಇದ್ದೀವಿ. ಅದರ ಅಡ್ವಾಂಟೇಜನ್ನು ನಾನು ತೆಗೆದುಕೊಂಡೆ. ಅವಳು ಕನ್ನಡಿ ಕಡೆಗೆ ನಿಂತಿದ್ದಳು. ನಾನು ಹಿಂಬದಿಯಿಂದ ಹೋಗಿ ಅವಳನ್ನು ತಬ್ಬಿಕೊಂಡೆ. ಅವಳ ಕುತ್ತಿಗೆ ಮೇಲೆ ಚುಂಬಿಸಿದೆ. ಆದರೆ ಆ ಸಮಯದಲ್ಲಿ 6 ವರ್ಷದ ಪೋರನೊಬ್ಬ ನಾವಿದ್ದ ಕಡೆಗೆ ಬಂದ. ನಮ್ಮ ರೂಮಿನೊಳಕ್ಕೆ ಬಗ್ಗಿ ನೋಡುತ್ತಿದ್ದಾನೆ. ನಾವು ಮಾಡುತ್ತಿರುವುದನ್ನು ಅವನು ಗಮನಿಸಿದ. ಅವನನ್ನು ನಾವು ಕನ್ನಡಿಯಲ್ಲಿ ನೋಡಿ ಶಾಕ್ ಆದೆವು.

ಕೂಡಲೆ ಇಬ್ಬರೂ ದೂರ ಸರಿದೆವು. ಅಲ್ಲಿಂದ ಆ ಬಾಲಕ ಹೊರಟು ಹೋದ. ಬಳಿಕ ಸ್ವಲ್ಪ ಹೊತ್ತಿಗೆ ನನ್ನ ಗರ್ಲ್ ಫ್ರೆಂಡ್ ಕುಟುಂಬಿಕರು, ನಮ್ಮ ಕುಟುಂಬದ ಎಲ್ಲರೂ ಹೊರಗೆ ಹರಟೆ ಹೊಡೆಯುತ್ತಿದ್ದರು. ಅಷ್ಟರಲ್ಲಿ ಆ ಬಾಲಕ ಬಂದ. ಅವನು ನಮ್ಮನ್ನು ಯಾವ ರೀತಿ ನೋಡಿದನೋ ಸೀನ್ ಟು ಸೀನ್ ವಿವರಿಸಿ ಅಲ್ಲಿದ್ದ ಎಲ್ಲರಿಗೂ ಹೇಳುತ್ತಾ ಹೋದ. ನನ್ನಲ್ಲಿ ಟೆನ್ಷನ್ ಆರಂಭವಾಯಿತು. ಆ ಬಾಲಕ ಎಲ್ಲಾ ಹೇಳುವ ಹೊತ್ತಿಗೆ ನಾನು ಅಲ್ಲಿಂದ ಹೊರಟು ಹೋದೆ. ವಿಪರೀತ ಭಯಬಿದ್ದೆ. ಆದರೆ ಕೊನೆಗೆ ಏನೂ ಆಗಲಿಲ್ಲ. ಎಲ್ಲರೂ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಯಾಕೆಂದರೆ ಮೊದಲಿನಿಂದಲೂ ನಮ್ಮ ಎರಡೂ ಕುಟುಂಬಗಳು ತುಂಬಾ ಹತ್ತಿರ ಇದ್ದವು. ನಮ್ಮದು ಚಿಕ್ಕ ವಯಸ್ಸಾದ ಕಾರಣ ಹಿರಿಯರು ಕೋಪಿಸಿಕೊಂಡರು. ಈಗಲೂ ಆ ಘಟನೆ ನೆನಪಿಸಿಕೊಂಡರೆ ನನಗೆ ಬಹಳ ಕಿರಿಕಿರಿ ಅನ್ನಿಸುತ್ತದೆ...!"

1 comment: